ಉಪೇಂದ್ರ ಅವರ ಜೊತೆ ಹೊಸ ಚಿತ್ರದಲ್ಲಿ ನಟಿಸೋ ಆಸೆ ಇದೆಯಾ, ಇಲ್ಲಿದೆ ನೋಡಿ ಅವಕಾಶ

ತಮ್ಮ ಭಿನ್ನ ಆಲೋಚನೆಗಳಿಂದ ಯೂನಿಕ್ ಎನ್ನಿಸಿಕೊಂಡಿರುವಂತಹ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಬುದ್ಧಿವಂತರಲ್ಲಿ ಅತೀ ಬುದ್ದಿವಂತರು. ಹೀಗಾಗೇ ಕೆಲವೊಮ್ಮೆ ಉಪೇಂದ್ರ ಅವರು ಬುದ್ದಿವಂತರಿಗೆ ಮಾತ್ರ ಅರ್ಥವಾಗುತ್ತಾರೆ. ಅವರ ಆಲೋಚನೆಗಳು, ಮುಂದಿನ ಸಮಾಜದ ಭವಿಷ್ಯದ ಮೇಲಿರುವ ಅವರ ಆಸೆಗಳು ಎಲ್ಲವೂ ವಿಭಿನ್ನವಾಗಿವೆ. ಐಆಮ್ ಗಾಡ್, ಗಾಡ್ ಈಸ್ ಗ್ರೇಟ್ ಎನ್ನುವ ನಮ್ಮ ರಿಯಲ್ ಸ್ಟಾರ್ ಉಪೇಂದ್ರ, ಸಮಾಜದಲ್ಲಿ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಿ, ಪ್ರಜಾಸಕ್ತವಾಗಿ ಇರಲು ಅವರು ಸಮಾಜದಲ್ಲಿ ಅನೇಕ ಬದಲಾವಣೆಗಳಾಗಬೇಕು ಎಂದು ಅವರು ಉತ್ತಮ ಪ್ರಜಾಕೀಯಪಕ್ಷ ಎಂಬ ಪಕ್ಷವನ್ನು ಕಟ್ಟಿರುವುದು ನಮಗೆಲ್ಲ ತಿಳಿದಿರುವ ಸಂಗತಿ. ಕೇವಲ ಸಿನಿಮಾಗಳ ಕಥೆ ನಿರ್ಮಾಣದಲ್ಲಿ ಮಾತ್ರವಲ್ಲದೇ, ಅವರ ರಾಜಕೀಯ ಹಾಗೂ ಪ್ರಜೆಗಳ ಹಿತಾಸಕ್ತಿಗಳ ಬಗೆಗಿನ ವಿಚಾರಗಳಲ್ಲೂ ಕೂಡ ಉಪೇಂದ್ರ ಅವರು ವಿಭಿನ್ನವಾಗಿ ಯೋಚಿಸುತ್ತಾರೆ.

ಸದ್ಯಕ್ಕೆ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಸಕ್ರಿಯರಾಗಿರುವ ಉಪೇಂದ್ರ ಅವರು ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಅಪ್ಡೇಟ್ ಒಂದನ್ನು ನೀಡಿದ್ದಾರೆ. ಉಪೇಂದ್ರ ಅವರ ಸಿನಿಮಾ ಕೇವಲ ಒಂದು ಬಾರಿ ನೋಡಿದರೆ ಅರ್ಥವಾಗುವುದೇ ಇಲ್ಲ. ಆ ರೀತಿ ಯಾರು ತೋರಿಸದ ಹಾಗೆ ಚಿತ್ರಕಥೆಯನ್ನು ಕೊಂಡೊಯ್ಯುವ ಜಾಣ್ಮೆ, ಬುದ್ದಿವಂತಿಕೆ ಉಪೇಂದ್ರ ಅವರಲ್ಲಿ ಮಾತ್ರ ಇದೆ ಎಂದು ಸ್ಯಾಂಡಲ್ವುಡ್ ಒಪ್ಪಿಕೊಳ್ಳುತ್ತದೆ. ರವೀನಾ ಟಂಡನ್, ಶಿಲ್ಪಾ ಶೆಟ್ಟಿ ಹೀಗೆ ಬಾಲಿವುಡ್, ಕಾಲಿವುಡ್, ಟಾಲಿವುಡ್ ಗಳಿಂದ ಹಿರೋಯಿನ್ ಗಳನ್ನೂ ತರುತ್ತಿದ್ದ ಉಪೇಂದ್ರ ಅವರು ಈಗ ತಮ್ಮ ಮುಂದಿನ ಹೊಸ ಪ್ರಾಜೆಕ್ಟ್ಗೆ ನಟ ಹಾಗೂ ನಟಿಯನ್ನು ಹುಡುಕುತ್ತಿದ್ದಾರೆ. ಹೌದು ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದಲ್ಲಿ ಅಭಿನಯಿಸಲು ನಟ ನಟಿಯರು ಬೇಕಾಗಿದ್ದಾರೆ.

ಎಂಬ ಪೋಸ್ಟನ್ನು ಖುದ್ದು ಉಪೇಂದ್ರ ಅವರು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಕಾಸ್ಟಿಂಗ್ ಕಾಲ್ ಮಾಡಿದ್ದಾರೆ. 14ರಿಂದ 60 ವರ್ಷ ವಯಸ್ಸಿನವರು ಎರಡು ನಿಮಿಷಗಳ ವಿಡಿಯೋ ತುಣುಕುಗಳಲ್ಲಿ ಅಭಿನಯಿಸಿ ಉಪೇಂದ್ರ ಅವರ ಮೇಲ್ ಐಡಿಗೆ ಕಳುಹಿಸಿ ಕೊಡಬಹುದು. ಮುಂದಿನ ತಿಂಗಳು ಮಾರ್ಚ್ 10ನೇ ತಾರೀಕಿನ ಒಳಗೆ ವಿಡಿಯೋವನ್ನು ಉಪೇಂದ್ರ ಪ್ರೊಡಕ್ಷನ್ಸ್ ಅಟ್ ಜಿಮೆಲ್ ಡಾಟ್ ಕಾಮ್ಗೆ ಕಳುಹಿಸಿಕೊಡಬಹುದು. ಉಪೇಂದ್ರ ಅವರು ತಾವು ಮತ್ತೆ ಡೈರೆಕ್ಷನ್ ಕ್ಯಾಪ್ ನೋಡುತ್ತಾರೆ ಎಂದು ಹೇಳಿದ ದಿನದಿಂದಲೇ ಅವರ ಅಭಿಮಾನಿಗಳು ಉಪ್ಪಿ ನಿರ್ದೇಶನದ ಹೊಸ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಇನ್ನೂ ಯಾರಿಗೆ ಉಪೇಂದ್ರ ಅವರ ನಿರ್ದೇಶನದ ಚಿತ್ರದಲ್ಲಿ ನಟ ನಟಿಯಾಗಿ ಅಭಿನಯಿಸುವ ಸುವರ್ಣಾವಕಾಶ ದೊರೆಯುತ್ತದೆ. ಯಾರು ಆ ಅದೃಷ್ಟವಂತರು ಎಂದು ಕಾದು ನೋಡಬೇಕು.

%d bloggers like this: