ಉಪೇಂದ್ರ ಅವರ ಜೊತೆ ಕನ್ನಡದ ಅತಿ ದೊಡ್ಡ ಬಜೆಟ್ ಚಿತ್ರತಂಡ ಸೇರಿಕೊಂಡ ಕಿಚ್ಚ ಸುದೀಪ್ ಅವರು

ಕನ್ನಡ ಚಿತ್ರರಂಗದ ಬಹುಕೋಟಿ ವೆಚ್ಚದ ಮಗದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಲು ಸಿದ್ದವಾಗುತ್ತಿರುವ ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ರಿಲೀಸ್ ಗೂ ಮುನ್ನವೇ ಅದ್ದೂರಿತನದ ಮೇಕಿಂಗ್ ಮೂಲಕ ಭಾರತೀಯ ಚಿತ್ರರಂಗದಾದ್ಯಂತ ಭಾರಿ ಸೌಂಡ್ ಮಾಡುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಈ ಕಬ್ಜ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ, ಮರಾಠಿ, ಮಲೆಯಾಳಂ ಸೇರಿದಂತೆ ಒಟ್ಟು ಎಂಟು ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಕನ್ನಡದ ಪ್ರಥಮ ಚಿತ್ರ ಎಂಬ ಕೀರ್ತಿಗೂ ಕೂಡ ಪಾತ್ರವಾಗಿದೆ. ಈಗಾಗಲೇ ಕಬ್ಜ ಚಿತ್ರದ ಮೋಶನ್ ಪೋಸ್ಟರ್ ರಿಲೀಸ್ ಆಗಿದ್ದು, ಸಿನಿಮಾ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಒಂದಷ್ಟು ದೃಶ್ಯ ಸನ್ನಿವೇಶಗಳು ಮಾತ್ರ ಬಾಕಿ ಉಳಿದುಕೊಂಡಿವೆ.

ಕೋವಿಡ್ ಎರಡನೇ ಅಲೆ ಮತ್ತು ಮೂರನೇಯ ಅಲೆಯ ಆತಂಕ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಕಬ್ಜ ಸಿನಿಮಾ ಬಿಡುಗಡೆಗೆ ಸಿದ್ದಗೊಳ್ಳುವುದಿತ್ತು. ಇದೀಗ ಕಬ್ಜ ಚಿತ್ರದ ಸೆಟ್ಗೆ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದಾರೆ. ಹೌದು ಕಬ್ಜ ಚಿತ್ರದಲ್ಲಿ ನಟ ಕಿಚ್ಚ ಸುದೀಪ್ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಕಿಚ್ಚ ಕಬ್ಜ ಚಿತ್ರದಲ್ಲಿ ಭಾರ್ಗವ್ ಭಕ್ಷಿ ಎಂಬ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕಬ್ಚ ಚಿತ್ರದಲ್ಲಿ ಸುದೀಪ್ ಲುಕ್ ಯಾವ ರೀತಿಯಲ್ಲಿರಲಿದೆ ಎಂಬುದನ್ನ ಚಿತ್ರತಂಡ ರಿವೀಲ್ ಮಾಡಿದೆ. ಒಟ್ಟಾರೆಯಾಗಿ ಈ ಕಬ್ಜ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಈ ಸ್ಟಾರ್ ನಟರು ನಂದ ಕಿಶೋರ್ ನಿರ್ದೇಶನದ ಮುಕುಂದ ಮುರಾರಿ ಎಂಬ ಚಿತ್ರದಲ್ಲಿ ನಟಿಸಿದ್ದರು.

ಇವರಿಬ್ಬರ ಜೋಡಿ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಇದೀಗ ಮತ್ತೆ ಕಿಚ್ಚ ಮತ್ತು ಉಪ್ಪಿಯ ಅಭಿಮಾನಿಗಳಿಗೆ ಇವರಿಬ್ಬರು ಒಟ್ಟಿಗೆ ನಟಿಸುತ್ತಿರುವುದು ಸಖತ್ ಖುಷಿಯ ವಿಚಾರವಾಗಿದೆ. ಇನ್ನು ಈ ಕಬ್ಜ ಚಿತ್ರಕ್ಕೆ ಕೆಜಿಎಫ್ ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ ಮ್ಯೂಸಿಕ್ ನೀಡಿದ್ದು, ಅರ್ಜುನ್ ಶೆಟ್ಟಿ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಬರೋಬ್ಬರಿ ನಲವತ್ತು ಕೋಟಿ ವೆಚ್ಚದ ಈ ಕಬ್ಜ ಸಿನಿಮಾದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ಕಬಿರ್ ದುಹಾನ್ ಸಿಂಗ್, ಪ್ರದೀಪ್ ರಾವತ್, ತೆಲುಗಿನ ಖ್ಯಾತ ನಟರಾದ ಕೋಟ ಶ್ರೀನಿವಾಸ್ ರಾವ್ ನಟಿಸಿದ್ದಾರೆ. ಇದೀಗ ನಟ ಕಿಚ್ಚ ಸುದೀಪ್ ಕೂಡ ತಮ್ಮ ಭಾರ್ಗವ್ ಭಕ್ಷಿ ಪಾತ್ರದ ಚಿತ್ರೀಕರಣ ಮುಗಿಸಿಕೊಳ್ಳಲು ಕಬ್ಜ ಚಿತ್ರತಂಡದೊಂದಿಗೆ ಸೇರಿಕೊಂಡಿದ್ದು, ಸುದೀಪ್ ಅವರ ಭಾಗದ ಚಿತ್ರೀಕರಣ ಭರದಿಂದ ನಡೆಯುತ್ತಿದೆ.

%d bloggers like this: