ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ಚಿತ್ರವಾಗಿದ್ದು ಈ ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿಯೂ ಬರುತ್ತಾ ಎಂಬ ಪ್ರಶ್ನೆಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕಾದುನೋಡಿ ಎಂದು ಕುತೂಹಲ ಮೂಡಿಸಿದರು. ಈ ಕುತೂಹಲಕ್ಕೆ ಕೊನೆಗೂ ಉತ್ತರ ಸಿಕ್ಕಂತಾಗಿದೆ ಕಾರಣ ತೆಲುಗಿನ ಸ್ಟಾರ್ ನಿರ್ದೆಶಕ ಪೂರಿಜಗನ್ನಾಥ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪುನೀತ್ ಅವರ ಯುವರತ್ನ ಸಿನಿಮಾದ ಕುರಿತು ಕನ್ನಡ ಕಂಠೀರವ ಶ್ರೀ ರಾಜ್ ಕುಮಾರ್ ಅವರ ವಾರಸ್ಧಾರ ಮತ್ತು ನನ್ನ ನೆಚ್ಚಿನ ಹೀರೋ ಪುನೀತ್ ರಾಜ್ ಕುಮಾರ್ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ನಾನು ಪ್ರೀತಿಸುತ್ತೆನೆ, ನಿಮಗೆ ತೆಲುಗು ಸಿನಿ ಇಂಡಸ್ಟ್ರಿಗೆ ಸ್ವಾಗತ ಎಂದು ಆಹ್ವಾನಿಸಿದ್ದಾರೆ. ಅದರಲ್ಲೂ ಪುನೀತ್ ಅಭಿನಯದ ಮೊದಲ ಚಿತ್ರ ಅಪ್ಪು ಚಿತ್ರವನ್ನು ನಿರ್ದೇಶಿಸಿದ್ದು ಇದೇ ಪೂರಿಜಗನ್ನಾಥ್ ಅವರು, ಈ ಅಪ್ಪು ಸಿನಿಮಾವನ್ನು ತೆಲುಗಿನಲ್ಲಿಯೂ ಸಹ ಸ್ವತಃ ತಾವೇ ನಿರ್ದೇಶಿಸಿದರು. ಅಂದ್ಹಾಗೆ ಯುವರತ್ನ ಸಿನಿಮಾದ ನಿರ್ಮಾಪಕರಾದ ವಿಜಯ್ ಕಿರಂಗದೂರು ಮತ್ತು ಅಪ್ಪು ಅವರ ಮೂರನೇಯ ಕಾಂಬಿನೆಷನ್ ಈ ಯುವರತ್ನ ಸಿನಿಮಾವಾಗಿದ್ಧು ಪುನೀತ್ ರಾಜ್ ಕುಮಾರ್ ಅವರೊಂದಿಗೆ ಇದಕ್ಕೂ ಮೊದಲು ನಿನ್ನಿಂದಲೇ ಹಾಗೂ ರಾಜಕುಮಾರ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಯುವರತ್ನ ಸಿನಿಮಾದಲ್ಲಿ ಅಪ್ಪು ಅವರಿಗೆ ನಾಯಕಿಯಾಗಿ ಸಯೇಶಾ ನಾಯಕಿಯಾಗಿ ಜೋಡಿಯಾಗಿದ್ದು ನಟ ಧನಂಜಯ್, ವಸಿಷ್ಟ ಸಿಂಹ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.