ಉತ್ತಮ ಬೆಲೆಗೆ ಭಾರಿ ಸ್ಪರ್ಧೆ ಕೊಡಲು ಬರುತ್ತಿದೆ ಕಿಯಾ ಕಂಪನಿಯ ಹೊಸ ಎಸ್.ಯೂ.ವಿ ಕಾರು, ಮುಂದಿನ ವಾರ ಬುಕಿಂಗ್ ಆರಂಭ

ಹೊಸ ವರ್ಷಕ್ಕೆ ಭಾರತೀಯ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿ ಮಾಡಲು ಸಿದ್ದವಾಗುತ್ತಿದೆ ಪ್ರಸಿದ್ದ ಕಾರು ತಯಾರಕ ಸಂಸ್ದೆಯಾದ ಕಿಯಾ ಮೋಟಾರ್ಸ್! ಹೌದು ಸಾಮಾನ್ಯವಾಗಿ ಹಬ್ಬ ಹರಿ ದಿನಗಳಲ್ಲಿ ಯಾವುದೇ ಕಾರು ಸಂಸ್ಥೆಗಳು ಹೆಚ್ಚಚ್ಚು ಕಾರು ಮಾರಾಟ ಮಾಡುವ ಮೂಲಕ ಆದಷ್ಟು ಉತ್ತಮ ವ್ಯವಹಾರ ವಹಿವಾಟು ನಡೆಸಲು ತಮ್ಮ ಕಂಪನಿಯ ಕಾರುಗಳನ್ನು ಗ್ರಾಹಕರು ಖರೀದಿ ಮಾಡುವಂತೆ ಮಾಡಲು ಭಾರಿ ರಿಯಾಯಿತಿ ನೀಡುವ ಮೂಲಕ ಕಾರು ಪ್ರಿಯರನ್ನ ಆಕರ್ಷಣೆ ಮಾಡುತ್ತವೆ. ಅಂತೆಯೇ ಇದೀಗ ಕೊರಿಯಾ ಮೂಲದ ಕಿಯಾ ಕಂಪನಿಯು ಹೊಸದೊಂದು ಕಾರನ್ನ ಪರಿಚಯ ಮಾಡುತ್ತಿದೆ. ಕಿಯಾ ಕರೆನ್ಸ್ ಎಂಪಿವಿ ದುಬಾರಿ ಕಾರನ್ನ ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡಲು ಯೋಜನೆ ನಡೆಸುತ್ತಿದೆ.

ಸದ್ಯಕ್ಕೆ ಭಾರತದಲ್ಲಿ ಕಿಯಾ ಕಂಪನಿಯ ಕಾರುಗಳು ಉತ್ತಮ ಬೇಡಿಕೆಯನ್ನ ಸೃಷ್ಟಿಸಿಕೊಂಡಿದೆ. ಕಿಯಾ ಮೋಟಾರ್ಸ್ ಕಿಯಾ ಇಂಡಿಯಾ ಕಂಪನಿಯ ಕಿಯಾ ಎಸ್ಯೂವಿ ಸೆಲ್ಟೋಸ್ ಮತ್ತು ಸೊನೆಟ್ ನಿಂದ ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ಇತ್ತೀಚೆಗೆ ಈ ಸೆಲ್ಟೋಸ್ ಕಾರು ಕಿಯಾ ಸಂಸ್ಥೆಯ ಮೊದಲ ಕಾರ್ ಆಗಿದೆ. ಇದುವರೆಗೂ ಈ ಕಿಯಾ ಸೆಲ್ಟೋಸ್ ಬರೋಬ್ಬರಿ ಮೂರು ಲಕ್ಷಕ್ಕೂ ಅಧಿಕ ಕಾರ್ ಮಾರಾಟವಾಗಿ ದಾಖಲೆ ಮಾಡಿದೆ. ಈ ಕಿಯಾ ಸೆಲ್ಟೋಸ್ ಮತ್ತು ಸೊನೆಟ್ ಕಾರ್ ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಅಪಾರ ಪ್ರಮಾಣದ ಬೇಡಿಕೆಯನ್ನು ಹೊಂದಿದೆ. ಭಾರತದಲ್ಲಿ ಕಿಯಾ ಕಂಪನಿಯ ಕಾರುಗಳು ಜಗತ್ತಿನ ಸುಪ್ರಸಿದ್ದ ಐಷಾರಾಮಿ ಕಾರುಗಳಿಗೆ ಸೇರಿದಂತೆ ಟಯೋಟ, ಮಾರುತಿ ಸುಜುಕಿ, ಹೋಂಡಾ ಸಂಸ್ಥೆಯ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ.

ಇದರ ಜೊತೆಗೆ ಇದೀಗ ಹೊಸ ವರ್ಷಕ್ಕೆ ಜನವರಿ 14ರಿಂದ ಕಿಯಾ ಕರೆನ್ಸ್ ಎಂಪಿವಿ ಬುಕ್ಕಿಂಗ್ ಆರಂಭವಾಗಲಿದೆ. ಈ ಕಿಯಾ ಕರೆನ್ಸ್ ಕಾರು ಕಿಯಾ ಮೋಟರ್ಸ್ ಕಂಪನಿಯ ನಾಲ್ಕನೇಯ ಕಾರ್ ಆಗಿದೆ. ಈ ಕಿಯಾ ಕೆರೆನ್ಸ್ ಕಾರಿನ ಬೆಲೆಯು ಅಂದಾಜು ಹದಿನೈದು ಲಕ್ಷ ರೂಗಳನ್ನೊಂದಿದೆ. ಕಿಯಾ ಕರೆನ್ಸ್ ಎಂಪಿವಿ ಕಾರಿನ ಫೀಚರ್ ತಿಳಿಯುವುದಾದರೆ ಇದು ಸಿಕ್ಸ್ ಸೀಟರ್ ಮತ್ತು ಸೆವೆನ್ ಸೀಟರ್ ವ್ಯವಸ್ಥೆಯನ್ನೊಂದಿದೆ. ಇದರ ಹೊರ ವಿನ್ಯಾಸವು ಕೂಡ ಆಕರ್ಷಕವಾಗಿದ್ದೂ, ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದೆ. ಕಿಯಾ ಕರೆನ್ಸ್ ಎಂಪಿವಿ ಕಾರಿನಲ್ಲಿ ಅತ್ಯಂತ ಸುರಕ್ಷತೆ ಫೀಚರ್ ಗಳಿವೆ. ಸಿಕ್ಸ್ ಏರ್ ಬ್ಯಾಗ್, ಎಬಿಸಿ, ಇಎಸ್ಸಿ, ಎಚ್, ಎ.ಸಿ.ವಿ.ಎಸ್ ಎಮ್.ಆಲ್ವೇಸ್ ಡಿಸ್ಕ್ ಬ್ರೇಕ್, ಟಿಪಿಎಂಎಸ್, ರೇರ್ ಪಾರ್ಕಿಂಗ್ ಸೆನ್ಸರ್ ಸ್ಟ್ಯಾಂಡರ್ಡ್ ಹೊಂದಿದೆ. ಒಟ್ಟಾರೆಯಾಗಿ ಕಿಯಾ ಕಂಪನಿಯ ಈ ಕರೆನ್ಸ್ ಎಂಪಿವಿ ಕಾರ್ ಸಖತ್ ಕ್ರೇಜ಼್ ಹುಟ್ಟಿಸುತ್ತಿದೆ.

%d bloggers like this: