‘ವಿ’ ಟೆಲಿಕಾಂ ಸಂಸ್ಥೆ ನೀಡುತ್ತಿದೆ ಭರ್ಜರಿ ಆಫರ್, ಹೆಚ್ಚುವರಿ ಇಂಟರ್ನೆಟ್ ನಿಮ್ಮದಾಗಿಸಿಕೊಳ್ಳಿ

ವೊಡಾಫೋನ್ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ನೀಡುತ್ತಿದೆ ಭರ್ಜರಿ ಆಫರ್! ಇತ್ತೀಚೆಗೆ ರಿಲಯನ್ಸ್ ಜಿಯೋ ಟೆಲಿಕಾಂ ಉದ್ಯಮಕ್ಕೆ ಕಾಲಿಟ್ಟಾಗಿನಿಂದ ಇತರೆ ಪ್ರತಿಸ್ಪರ್ಧಿ ಟೆಲಿಕಾಂ ಇಂಡಸ್ಟ್ರಿಯ ವಹಿವಾಟು ಇಳಿಮುಖ ಕಂಡು ಅಪಾರ ಪ್ರಮಾಣದ ನಷ್ಟ ಅನುಭವಿಸಿದವು. ಅದರ ಜೊತೆಗೆ ತನ್ನ ಬಳಕೆದಾರರನ್ನು ಕೂಡ ಕಳೆದುಕೊಳ್ಳುವಂತಾಯಿತು. ಇದೀಗ ಪ್ರತಿಸ್ಪರ್ಧಿ ಟೆಲಿಕಾಂ ಉದ್ಯಮಗಳಾದ ಏರ್ಟೇಲ್, ವೊಡಾಫೋನ್ ಸಂಸ್ಥೆಗಳು ವಿವಿಧ ರೀತಿಯ ಆಫರ್, ಕೊಡುಗೆ ನೀಡುವುದರ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಅದೇ ರೀತಿಯಲ್ಲಿ ವೋಡಾಫೋನ್ ಟೆಲಿಕಾಂ ಕಂಪನಿಯ ವಿವಿಧ ರೀತಿಯ ಡೇಟಾ ರಿಚಾರ್ಜ್ ಗಳಲ್ಲಿ ಆಫರ್ ನೀಡುವ ಮೂಲಕ ತನ್ನ ಬಳಕೆದಾರರನ್ನು ಉಳಿಸಿಕೊಳ್ಳುವುದರ ಜೊತೆಗೆ ಇತರೆ ಟೆಲಿಕಾಂ ಬಳಕೆದಾರರನ್ನು ಕೂಡ ಸೆಳೆಯಲು ಯತ್ನಿಸುತ್ತಿದೆ. ಹಾಗಾದರೆ ಈ ವೋಡೋಫೋನ್ ನೀಡುತ್ತಿರುವ ಯೋಜನೆಗಳ ಬಗ್ಗೆ ತಿಳಿಯೋಣ.

ವೋಡಾಫೋನ್ 2595 ರೂವಾರ್ಷಿಕ ರೀಚಾರ್ಜ್ ಮಾಡಿಸಿದರೆ, ಅದಕ್ಕೆ ಪ್ರತಿದಿನ 2ಜಿಬಿ ಡೇಟಾ, ಅನಿಯಮಿತ ಕರೆ ಮಾಡಬಹುದಾಗಿದೆ. ಪ್ರತಿ ದಿನ 2ಜಿಬಿ ಅಂದರೆ ವಾರ್ಷಿಕವಾಗಿ 730ಜಿಬಿ ಡೇಟಾ ಬಳಕೆಯಾಗುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ 50ಜಿಬಿ ಹೆಚ್ಚುವರಿಯಾಗಿ ನೀಡುವುದರ ಮೂಲಕ ಒಟ್ಟಾರೆ 780 ಜಿಬಿಯನ್ನು ಈ ಯೋಜನೆಯಲ್ಲಿ ನೀಡಲಾಗುತ್ತಿದೆ‌. ವೋಡಾಫೋನ್ ಪ್ಲ್ಯಾನ್ ನಲ್ಲಿ ಮತ್ತೊಂದು ವಿಧವಾದ ವಾರ್ಷಿಕ 2595 ರೂಯೋಜನೆ ರೀಚಾರ್ಜ್ ಮಾಡಿಸಿದರೆ, 2ಜಿಬಿ ಡೇಟಾದ ಜೊತೆಗೆ ಪ್ರತಿದಿನ ನೂರು ಉಚಿತ ಸಂದೇಶಗಳನ್ನು ಕಳುಹಿಸಬಹುದಾಗಿದೆ.

ಈ ವಾರ್ಷಿಕ ಯೋಜನೆಯ ಅವಧಿಯು 365 ದಿನಗಳನ್ನು ಒಳಗೊಂಡಿರುತ್ತದೆ. ವೋಡಾಫೋನ್ ಪ್ರತಿಸ್ಪರ್ಧಿ ಟೆಲಿಕಾಂ ಉದ್ಯಮ ಆಗಿರುವ ರಿಲಯನ್ಸ್ ಜಿಯೋ ಕೂಡ ಅತ್ಯಧಿಕ ಕಡಿಮೆ ಬೆಲೆಯಲ್ಲಿ ಭರ್ಜರಿ ಕೊಡುಗೆ ನೀಡಲು ತಯಾರಾಗಿದೆ. ಹೌದು ಜಿಯೋ ಸಂಸ್ಥೆಯ 2,399 ರೂಪಾಯಿ ವಾರ್ಷಿಕ ರೀಚಾರ್ಜ್ ಪ್ಲ್ಯಾನ್ ಮೂಲಕ ಪ್ರತಿದಿನ ಎರಡು ಜಿಬಿ ಡೇಟಾ, ಪ್ರತಿನಿತ್ಯ ನೂರು ಸಂದೇಶಗಳನ್ನು ನೀಡುತ್ತಿದೆ. ಇದರ ವಾಯಿದೆಯು ಕೂಡ 365 ದಿನಗಳಿಗೆ ಸೀಮಿತವಾಗಿರುತ್ತದೆ.

ಅದೇ ರೀತಿ ಪ್ರತಿಷ್ಟಿತ ಟೆಲಿಕಾಂ ಅಗಿರುವ ಏರ್ಟೇಲ್ ಕೂಡ ತನ್ನ ಬಳಕೆದಾರರಿಗೆ ಉತ್ತಮವಾದ ಕೊಡುಗೆ ನೀಡುತ್ತಿದೆ. 2498 ರೂ.ವಾರ್ಷಿಕ ರೀಚಾರ್ಜ್ ಮಾಡಿಸಿದರೆ, ಪ್ರತಿದಿನ ಎರಡು ಜಿಬಿ ಡೇಟಾದ ಜೊತೆ ಪ್ರತಿನಿತ್ಯ ನೂರು ಎಸ್.ಎಂ.ಎಸ್ ಉಚಿತವಾಗಿದೆ. ಇದರ ಜೊತೆಗೆ 400+ ಲೈವ್ ಚಾನೇಲ್ ಅನಿಯಮಿತ ಕರೆಗಳನ್ನು ಪಡೆಯಬಹುದಾಗಿರುತ್ತದೆ. ಇದು 365 ದಿನಗಳ ಅವಧಿಗೆ ಸೀಮಿತವಾಗಿರುತ್ತದೆ. ಕಳೆದ ಬಾರಿ ಈ ಐಡಿಯಾ ಮತ್ತು ವೊಡಾಫೋನ್ ಸಂಯೋಜನೆಗೊಂಡು ವಿನೂತನವಾದ ಲೋಗೋವೊಂದನ್ನು ಬಿಡುಗಡೆ ಮಾಡುವ ಮೂಲಕ ಭಾರಿ ಸುದ್ದಿಯಾಗಿತ್ತು.

%d bloggers like this: