ವಾರ ಭವಿಷ್ಯ, ಈ ರಾಶಿಯವರಿಗೆ ಹಣಕಾಸಿನ ವ್ಯವಹಾರಗಳು ಉತ್ತಮವಾಗಿರಲಿವೆ

ಪ್ರತಿಯೊಬ್ಬರಿಗೂ ಹೊಸ ವರ್ಷ ಹೊಸ ಕನಸು ಭರವಸೆಗಳನ್ನು ಮೂಡಿಸುತ್ತದೆ. ಮನುಷ್ಯನ ಜೀವನದ ಮೇಲೆ ಈ ಗ್ರಹಗತಿಗಳು ಪ್ರಭಾವ ಬೀರುವ ಪರಿಣಾಮ ಪ್ರತಿಯೊಬ್ಬ ವ್ಯಕ್ತಿ ಪ್ರತ್ಯೇಕವಾಗಿ ವಿವಿಧ ರೀತಿಯ ಫಲಾಫಲಗಳನ್ನು ಹೊಂದಿರುತ್ತಾನೆ. ಅಂತೆಯೇ ಈ ವಾರದ ದ್ವಾದಶ ರಾಶಿ ಚಕ್ರಗಳ ಭವಿಷ್ಯ ತಿಳಿಯುವುದಾದರೆ ಪ್ರಥಮ ರಾಶಿ ಮೇಷ. ಮೇಷ ರಾಶಿಯ ವ್ಯಕ್ತಿಗಳಿಗೆ ಈ ವಾರ ಲಕ್ಷ್ಮಿ ಆಗಮನವಾಗಲಿದೆ. ಹೆಂಡತಿ ಮನೆಯವರಿಂದ ಆರ್ಥಿಕವಾಗಿ ಸಹಾಯವಾಗುವ ಸಾಧ್ಯತೆ ಇರುತ್ತದೆ. ಉದ್ಯೋಗದಲ್ಲಿ ಬದಲಾವಣೆ ಮಾಡಿ ಉತ್ತಮ ಅವಕಾಶಗಳು ನಿಮಗಾಗಿ ಕಾದಿವೆ. ವಿಧ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಅಧ್ಯಾಯನ ಮಾಡುವ ಸದಾವಕಾಶ ಒದಗಿ ಬರಲಿದೆ. ನಿಮ್ಮ ಮನಸ್ಸನ್ನು ಆದಷ್ಟು ಏಕಾಗ್ರತೆಗೊಳಿಸಿಕೊಂಡು ಸಮಚಿತ್ತದಿಂದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ರಾಜಕೀಯ ಕ್ಷೇತ್ರದ ವ್ಯಕ್ತಿಗಳಿಗೆ ಅನಿರೀಕ್ಷಿತ ಲಾಭಗಳನ್ನು ಕಾಣ ಬಹುದಾಗಿರುತ್ತದೆ.

ವೃಷಭ ರಾಶಿ ಅವರಿಗೆ ಕುಲ ಕಸುಬು ಕೈ ಹಿಡಿಯಲಿದೆ. ಸ್ವಯಂ ಉದ್ಯೋಗ ಮಾಡುತ್ತಿರುವವರಿಗೆ ಪ್ರಗತಿ ಕಾಣಬಹುದಾಗಿರುತ್ತದೆ. ಉಪನ್ಯಾಸಕರಿಗೆ ಇದುವರೆಗೆ ಅಪೇಕ್ಷ ಪಡುತ್ತಿದ್ದ ಕೆಲಸ ಕಾರ್ಯಗಳು ಕೈ ಗೂಡಲಿವೆ‌. ವ್ಯವಸಾಯಗಾರರಿಗೆ ಈ ವಾರ ವಿವಿಧ ಮೂಲಗಳಿಂದ ಆದಾಯ ಹರಿದು ಬರಲಿದೆ. ಇನ್ನು ಪ್ರೀತಿಯಲ್ಲಿರುವವರಿಗೆ ಕುಟುಂಬದಿಂದ ಸಕರಾತ್ಮಕವಾಗಿ ಸ್ಪಂದನೆ ಸಿಗಲಿದೆ.

ಮಿಥುನ: ಈ ಮಿಥುನ ರಾಶಿಯವರಿಗೆ ಈ ವಾರ ಆದಾಯ ಹೆಚ್ಚಾಗಿದ್ದರು ಕೂಡ ಅನಾರೋಗ್ಯದ ಸಮಸ್ಯೆಯಿಂದಾಗಿ ಧನವ್ಯಯ ಹೆಚ್ಚಾಗಿರಲಿದೆ. ಆದಷ್ಟು ಮನೆಯ ಹಿರಿಯ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತವಾಗಿರುತ್ತದೆ. ಇನ್ನೂ ಆದಷ್ಟು ನಿಮ್ಮ ಬಾಳಸಂಗಾತಿ ಜೊತೆಗೆ ಹೆಚ್ಚು ಅನಗತ್ಯ ಚರ್ಚೆ ಮಾಡದೆ ಪರಸ್ಪರ ಹೊಂದಾಣಿಕೆಯಿಂದ ನಡೆದುಕೊಳ್ಳಿ. ಹೈನುಗಾರಿಕೆ ಮಾಡುತ್ತಿರುವರಿಗೆ ಆದಾಯ ಹೆಚ್ಚಾಗಿರುತ್ತದೆ.ಈ ವಾರ ಹಣಕಾಸಿನ ವ್ಯವಹಾರಗಳು ಉತ್ತಮವಾಗಿದ್ದು, ನಿಮ್ಮ ಮನೆಗೆ ಈ ವಾರ ವಿಶೇಷ ಅತಿಥಿಗಳು ಆಗಮಿಸಲಿದ್ದಾರೆ.

ಕಟಕ ರಾಶಿಯವರಿಗೆ ಸತಿಪತಿಗಳ ನಡುವೆ ನಡೆಯುತ್ತಿದ್ದಂತಹ ಕಲಹಗಳು ಮುಕ್ತವಾಗಿ ದಂಪತಿಗಳಿಬ್ಬರೂ ಪರಸ್ಪರ ಸಂತೋಷವಾಗಿರುತ್ತಾರೆ. ಹೆಣ್ಣುಮಕ್ಕಳಿಗೆ ತವರಿನಿಂದ ಯಾವುದಾದರೂ ಒಂದು ರೂಪದಲ್ಲಿ ಉಡುಗೊರೆ ಸಿಗುತ್ತದೆ. ನಿಮ್ಮ ಕೆಲಸ ಕಾರ್ಯದಲ್ಲಿ ಜಾಗರೂಕತೆ ಇರುವುದು ಒಳಿತು. ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಮಾಡಬೇಡಿ.

ಸಿಂಹ ರಾಶಿ: ಈ ಸಿಂಹ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಉತ್ತಮವಾಗಿದೆ. ಆದರೆ ದೂರದ ಪ್ರಯಾಣ ಮಾಡುವ ಸಂಧರ್ಭ ಅನಿರೀಕ್ಷಿತ ಖರ್ಚು ವೆಚ್ಚ ಆರಂಭವಾಗಲಿದೆ. ನಿಮಗೆ ಬರಬೇಕಾಗಿದ್ದ ಹಳೆಯ ಸಾಲದ ಬಾಕಿ ಹಿಂದಿರುಗುತ್ತವೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರಲಿದೆ. ಇನ್ನು ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ.

ಕನ್ಯಾ ರಾಶಿಯವರಿಗೆ ಈ ವಾರದ ಭವಿಷ್ಯ ನಕರಾತ್ಮಕವಾಗಿರಲಿದೆ. ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ ಇದ್ದಷ್ಟು ವ್ಯವಹಾರ ಮಾಡಿ. ವಾರಾಂತ್ಯದಲ್ಲಿ ತಮ್ಮ ಇಚ್ಛೆಯಂತೆ ಆಸ್ತಿಪಾಸ್ತಿಯನ್ನು ಖರೀದಿ ಮಾಡುವ ಯೋಗ ಬರಲಿದೆ. ಮಿತ್ರರಿಂದ ಆರ್ಥಿಕ ಸಹಾಯ ಸಿಗಲಿದೆ. ಮಾತಿನಲ್ಲಿ ಹಿತವಿರಲಿ ಹಿರಿಯರೊಂದಿಗೆ ಮಾತನಾಡುವಾಗ ಆದಷ್ಟು ಜಾಗರೂಕತೆಯಿಂದ ಇರಿ.

ತುಲಾ ರಾಶಿಯವರಿಗೆ ಈ ವಾರ ಕೆಲಸ ಕಾರ್ಯಗಳು ಕೈ ಗೂಡುವುದಿಲ್ಲ. ಇದರಿಂದ ಬೇಸರ ಆಗುವ ಅಗತ್ಯ ಇಲ್ಲ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬುದನ್ನ ಅರಿತು ಮುಂದೆ ಸಾಗಿರಿ. ನಿಮ್ಮ ಜೀವನಕ್ಕೆ ಈ ವಿಶೇಷ ವ್ಯಕ್ತಿಯೊಬ್ಬರು ಭೇಟಿ ನೀಡಲಿದ್ದಾರೆ.

ವೃಶ್ಚಿಕ: ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ. ನಿಮ್ಮ ಸಾಮಾಜಿಕ ಸೇವಾಕಾರ್ಯಗಳನ್ನ ಮೆಚ್ಚಿ ಸಂಘ ಸಂಸ್ಥೆಗಳು ನಿಮಗೆ ಗೌರವ ಸನ್ಮಾನ ಮಾಡಲಿವೆ. ನಿಮಗೆ ಈ ವಾರ ಕಳೆದುಹೋಗಿದ್ದ ವಸ್ತುಗಳು ಮತ್ತೆ ಮರಳಿ ನಿಮ್ಮ ಕೈಸೇರಲಿವೆ.
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಲಸ್ಯ ಮೂಡಿಬರಲಿದೆ. ಧನಸ್ಸು ರಾಶಿಯವರಿಗೆ ದೂರದೂರಿಗೆ ಪ್ರಯಾಣ ಮಾಡುವ ಅವಕಾಶವಿರುತ್ತದೆ ಹಣಕಾಸಿನ ಸಮಸ್ಯೆ ಇಲ್ಲದಿದ್ದರೂ ಕೂಡ ಅನಿವಾರ್ಯತೆಗಳು ಸೃಷ್ಟಿಯಾಗಿ ಕೆಲವು ಸಾಲುಗಳು ಮಾಡುವಂತಹ ಸಂದರ್ಭ ಒದಗಿ ಬರುತ್ತದೆ ಈ ವಾರದಲ್ಲಿ ನಿಮ್ಮ ಎಲ್ಲಾ ಕೆಲಸಗಳು ಸರಾಗವಾಗಿ ನಡೆಯುತ್ತದೆ ಯಾವುದೇ ಕಾರಣಕ್ಕೂಬ ಮೂರನೇ ವ್ಯಕ್ತಿಯನ್ನು ನಂಬಲು ಹೋಗಬೇಡಿ.

ಮಕರ ರಾಶಿ: ಈ ರಾಶಿಯವರಿಗೆ ವ್ಯಾಪಾರದಲ್ಲಿ ಇರುವರಿಗೆ ಲಾಭವಾಗುತ್ತದೆ ಮುದ್ದೆ ಬದಲಿಗೆ ಹೊಸ ಒಂದು ಆಲೋಚನೆ ಬಂದು ಅದಕ್ಕೆ ಬಂಡವಾಳವೂ ಸಹ ಆದಾಯ ಹರಿದು ಬರಲಿದೆ ವಿವಿಧ ಹಣಕಾಸಿನ ಸಂಪನ್ಮೂಲಗಳ ನಿಮಗೆ ಕೊಡಬೇಕಾಗುತ್ತದೆ ಸಹೋದರರಿಂದ ನಿಮಗೆ ನೈತಿಕ ಬೆಂಬಲ ಸಿಗುತ್ತದೆ ವೈದ್ಯರಿಗೆ ಹೆಚ್ಚು ಒತ್ತಡದ ಕೆಲಸಗಳು ಸೃಷ್ಟಿಯಾಗಲಿವೆ.

ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ಓದುವ ಹುಮ್ಮಸ್ಸು ಹೆಚ್ಚಾಗಲಿದ್ದು, ವಿದೇಶದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಅವಕಾಶ ಸಿಗಲಿದೆ. ವ್ಯಾಪಾರ ಉದ್ಯಮಗಳಲ್ಲಿರುವರಿಗೆ ಅಧಿಕ ಲಾಭ ಸಿಗುತ್ತದೆ. ಅನಾರೋಗ್ಯದಲ್ಲಿ ಬಳಲುತ್ತಿದ್ದವರಿಗೆ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಅನಗತ್ಯವಾಗಿ ಇತರರೊಂದಿಗೆ ವಾದ ಮಾಡಲು ಹೋಗಬೇಡಿ.

ಮೀನ ರಾಶಿಯವರಿಗೆ ಈ ವಾರ ಉತ್ತಮವಾಗಿದ್ದು, ಅಂದುಕೊಂಡ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿವೆ. ವಿಧ್ಯಾರ್ಥಿಗಳಿಗೆ ಶುಭ ಸುದ್ದಿ ಕೇಳಿ ಬರಲಿದೆ. ವ್ಯಾಪಾರ ಉದ್ಯಮದಾರರಿಗೆ ಲಾಭದಾಯಕವಾಗಿರಲಿದೆ. ಆಸ್ತಿ ಪಾಸ್ತಿ ವ್ಯಾಜ್ಯಗಳಲ್ಲಿ ಜಯ ಸಿಗಲಿದೆ. ಪೂರ್ವಜರ ಆಸ್ತಿ ಪಡೆಯುವ ಸಾಧ್ಯತೆ ಇರುತ್ತದೆ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ.

%d bloggers like this: