ನಟಿ ರಶ್ಮಿ ಪ್ರಭಾಕರ್ ಅವರು ಭಾರ್ಗವ್ ಎಂಬುವರೊಟ್ಟಿಗೆ ಇತ್ತೀಚೆಗೆ ತಾನೇ ನವೆಂಬರ್ 22ರಂದು ದಾಂಪತ್ಯ ಜೀವನದ ಮುನ್ನುಡಿ ಶುಭಕಾರ್ಯ ಆಗಿರುವ ನಿಶ್ಚಿತಾರ್ಥ ವನ್ನು ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ. ಹೌದು ಇತ್ತೀಚೆಗೆ ಕನ್ನಡ ಸಿನಿಮಾ ಮತ್ತು ಕಿರುತೆರೆಯ ಅನೇಕ ಯುವ ಕಲಾವಿದರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಇತ್ತೀಚೆಗೆ ಅನೇಕ ಯುವ ನಟ ನಟಿಯರನ್ನು ದಾಂಪತ್ಯ ಜೀವನಕ್ಕೆ ಹೆಜ್ಜೆಯಿಡುತ್ತಿದ್ದಾರೆ. ಇವರ ಸಾಲಿಗೆ ಇದೀಗ ರಶ್ಮಿ ಪ್ರಭಾಕರ್ ಸೇರ್ಪಡೆಗೊಂಡಿದ್ದಾರೆ. 2014 ರಲ್ಲಿ ಪ್ರಸಾರವಾಗುತ್ತಿದ್ದಂತಹ ಶುಭವಿವಾಹ ಧಾರಾವಾಹಿಯಲ್ಲಿ ಕಥಾ ನಾಯಕನ ತಂಗಿ ರಚನಾ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ನಟಿ ರಶ್ಮಿ ಪ್ರಭಾಕರ್ ಅವರು ಮಹಾಭಾರತ ಸೀರಿಯಲ್ ನಲ್ಲಿ ದುರ್ಯೋದನನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ನಟಿ ರಶ್ಮಿ ಪ್ರಭಾಕರ್ ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಧಾರಾವಾಹಿಗಳಲ್ಲಿಯೂ ಕೂಡ ನಟಿಸಿದ್ದಾರೆ.

ಹೊಸಕೋಟೆ ಮೂಲದವರಾದ ನಟಿ ರಶ್ಮಿ ಪ್ರಭಾಕರ್ ಅವರು ಶಾಲಾ ಕಾಲೇಜು ದಿನಗಳಿಂದಾನೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರಂತೆ. ವಾರ್ತಾ ವಾಚಕಿ ಆಗಬೇಕು ಎಂದು ಕನಸು ಕಂಡಿದ್ದ ರಶ್ಮಿ ಪ್ರಭಾಕರ್ ಅವರಿಗೆ ಸೀರಿಯಲ್ ಗಳಲ್ಲಿ ನಟಿಸುವ ಅವಕಾಶ ಒದಗಿಬರುತ್ತದೆ. ತನಗೆ ಒಲಿದು ಬಂದಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ತನ್ನ ಚತುರ ನಟನೆಯ ಮೂಲಕ ಆಗಾಗಲೇ ಕನ್ನಡ ಕಿರುತೆರೆಯಲ್ಲಿ ಅಪಾರ ಜನಪ್ರಿಯತೆ ಪಡೆದಿದ್ದಂತಹ ಲಕ್ಷ್ಮಿ ಬಾರಮ್ಮಾ ಧಾರಾವಾಹಿಯ ಚಿನ್ನು ಪಾತ್ರಕ್ಕೆ ಆಯ್ಕೆ ಆಗುತ್ತಾರೆ. ಇದಾದ ಬಳಿಕ ಚಿನ್ನು ಪಾತ್ರದ ಮೂಲಕ ನಟಿ ರಶ್ಮಿ ಪ್ರಭಾಕರ್ ಅವರು ನಾಡಿನ ಮನೆ ಮಗಳಾಗಿ ಗುರುತಿಸಿಕೊಳ್ಳುತ್ತಾರೆ. ಕಿರುತೆರೆಯಲ್ಲಿ ಜನಪ್ರಿಯತೆ ಸಿಕ್ಕ ನಂತರ ನಟಿ ರಶ್ಮಿ ಪ್ರಭಾಕರ್ ಬಿಬಿ5 ಎಂಬ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ.

ಇತ್ತೀಚೆಗೆ ಕನ್ನಡದ ಪ್ರಸಿದ್ದ ಕಾವ್ಯಾಂಜಲಿ ಧಾರಾವಾಹಿ ತೆಲುಗಿಗೆ ರಿಮೇಕ್ ಆಗುತ್ತಿದ್ದು ಕಾವ್ಯ ಪಾತ್ರದಲ್ಲಿ ನಟಿ ರಶ್ಮಿ ಪ್ರಭಾಕರ್ ಅವರೇ ನಟಿಸುತ್ತಿದ್ದಾರೆ. ಇದೀಗ ಹೊಸ ಸುದ್ದಿ ಏನಪ್ಪಾ ಅಂದರೆ ನಟಿ ರಶ್ಮಿ ಪ್ರಭಾಕರ್ ಅವರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲು ಸಿದ್ದರಾಗಿದ್ದಾರೆ. ಅದಕ್ಕೆ ಪೂರಕವಾಗಿ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ನಿಖಿಲ್ ಭಾರ್ಗವ್ ಎಂಬುವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಿರುವ ನಟಿ ರಶ್ಮಿ ಪ್ರಭಾಕರ್ ಕಳೆದ ಕಾರ್ತಿಕ ಸೋಮವಾರದಂದು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಶುಭ ಕಾರ್ಯಕ್ರಮಕ್ಕೆ ಅವರ ಆಪ್ತಷ್ಟಿರು ಕುಟುಂಬಸ್ಥರು ಭಾಗವಹಿಸಿದ್ದರು. ನಟಿ ರಶ್ಮಿ ಪ್ರಭಾಕರ್ ಗೋಲ್ಡನ್ ಬಾರ್ಡರ್ ಹೊಂದಿರುವ ಹಸಿರು ಬಣ್ಣದ ಸೀರೆಯುಟ್ಟು ಮಿಂಚುತ್ತಿದ್ದರೆ, ಮಧುಮಗ ನಿಖಿಲ್ ಭಾರ್ಗವ್ ಕ್ರೀಮ್ ಮಿಕ್ಸಡ್ ಗೋಲ್ಡನ್ ಬಣ್ಣದ ಕುರ್ತಾದಲ್ಲಿ ಮಿಂಚಿತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನಟಿ ರಶ್ಮಿ ಪ್ರಭಾಕರ್ ಅವರಿಗೆ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.