ಇತ್ತೀಚೆಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ನಟಿ ಪ್ರಿಯಾಂಕಾ ಚಿಂಚೊಳ್ಳಿ ಇದೀಗ ಮತ್ತೆ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ. ಹೌದು ಸ್ಟಾರ್ ಸುವರ್ಣ ವಾಹಿನಿಯ ಹರ ಹರ ಮಹಾದೇವ್ ಧಾರಾವಾಹಿಯಲ್ಲಿ ಪಾರ್ವತಿ ಪಾತ್ರಧಾರಿಯಾಗಿ ಮತ್ತು ಉದಯ ವಾಹಿನಿಯಲ್ಲಿ ಪ್ರಸಾರ ಆಗುವ ಮನಸಾರೆ ಧಾರಾವಾಹಿಯಲ್ಲಿ ನಟಿಸಿರುವ ಪ್ರಿಯಾಂಕ ಚಿಂಚೊಳ್ಳಿ ಅಪಾರ ಜನಪ್ರಿಯತೆ ಗಳಿಸಿದ್ದರು. ಖ್ಯಾತ ಉದ್ಯಮಿಯಾದ ರಾಕೇಶ್ ಎಂಬುವರನ್ನ ಕಳೆದ ತಿಂಗಳಷ್ಟೇ ನಟ ಪ್ರಿಯಾಂಕಾ ತಮ್ಮ ಬಾಳಸಂಗಾತಿಯಾಗಿ ಸ್ವೀಕರಿಸಿದ್ದರು. ಆದರೆ ಇವರ ವಿವಾಹ ಅತ್ಯಂತ ಸರಳವಾಗಿ ಆಗಿತ್ತು. ಏಕೆಂದರೆ ಅಮೇರಿಕದ ಬ್ಯಾಂಕ್ ವೊಂದರ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತದ್ದಾರೆ ಪತಿ ರಾಕೇಶ್ ಅವರು.

ಕೋವಿಡ್ ಮೂರನೇ ಅಲೆಯ ಆತಂಕ ಎದುರಾದ ಕಾರಣ ಅಮೇರಿಕಾ ಹೋಗಬೇಕಾದಾಗ ವೀಸಾಗೆ ಮದುವೆಯ ಪ್ರಮಾಣ ಪತ್ರ ಅವಶ್ಯಕತೆ ಇರುವ ಅನಿವಾರ್ಯ ಕಾರಣಗಳಿಂದ ರಾಕೇಶ್ ಮತ್ತು ಪ್ರಿಯಾಂಕಾ ಚಿಂಚೋಳಿ ಅವರು ಸದ್ಯಕ್ಕೆ ಸರಳವಾಗಿ ತಮ್ಮ ಕುಟುಂಬದವರ ಸಮ್ಮುಖದಲ್ಲಿ ರಿಜಿಸ್ಟಾರ್ ಮದುವೆಯಾಗಿದ್ದರು. ಈ ಸರಳ ವಿವಾಹ ಫೋಟೋಗಳನ್ನು ನಟಿ ಪ್ರಿಯಾಂಕಾ ಚಿಂಚೊಳ್ಳಿ ಅವರು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಪ್ರಿಯಾಂಕಾ ಚಿಂಚೊಳ್ಳಿ ಮತ್ತು ರಾಕೇಶ್ ಡಿಸೆಂಬರ್ ಹತ್ತರಂದು ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಈ ನವ ಜೋಡಿಗಳ ಎರಡು ಕುಟುಂಬಗಳು ಸಂಭ್ರಮದಿಂದ ಮದುವೆ ಮಾಡಿದ್ದಾರೆ.

ಡಿಸೆಂಬರ್ 7ರಂದು ಪ್ರಿಯಾಂಕಾ ಚಿಂಚೊಳ್ಳಿ ಅವರ ಚಿಕ್ಕಮ್ಮನ ಮನೆಯಲ್ಲಿ ಮೆಹಂದಿಶಾಸ್ತ್ರ ನಡೆಯಿತು. ಡಿಸೆಂಬರ್ 9ರಂದು ದೇವನಹಳ್ಳಿಯಲ್ಲಿರುವ ರೆಸಾರ್ಟ್ ವೊಂದರಲ್ಲಿ ಅರಿಶಿನಶಾಸ್ತ್ರ ನೆರೆವೇರಿಸಿಕೊಂಡ ಈ ಜೋಡಿ ಡಿಸೆಂಬರ್ 10ರಂದು ಬಹಳ ಅದ್ದೂರಿಯಾಗಿ ತಮ್ಮಕುಟುಂಬಸ್ಥರು, ಸಂಬಂಧಿಕರು, ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆದರು. ಮಧುಮಕ್ಕಳಾದ ಪ್ರಿಯಾಂಕಾ ಮತ್ತು ರಾಕೇಶ್ ಸಖತ್ತಾಗಿ ಮಿಂಚುತ್ತಿದ್ದರು. ವಧು ಪ್ರಿಯಾಂಕಾ ಚಿಂಚೊಳ್ಳಿ ಸಿಂಪಲ್ ಸ್ಟೋನ್ ವಿನ್ಯಾಸ ಹೊಂದಿರುವ ಹಸಿರು ಬಣ್ಣದ ಗಾಗ್ರಾನಲ್ಲಿ ಮಿಂಚಿದರೆ, ವರ ರಾಕೇಶ್ ಗೋಲ್ಡನ್ ವೈಟ್ ಕುರ್ತಾ ಧರಿಸಿ ಮಿಂಚುತ್ತಿದ್ದರು.