ಕನ್ನಡದ ರಿಯಾಲಿಟಿ ಶೋ ಗಳಲ್ಲಿ ಅಗ್ರ ಗಣ್ಯ ಸ್ಥಾನದಲ್ಲಿ ಇರುವುದು ಎಂದರೆ ಅದೇ ದೊಡ್ಡ ಮನೆ ಆಟ ಬಿಗ್ ಬಾಸ್. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋ ಯಶಸ್ವಿಯಾಗಿ 8 ಆವೃತ್ತಿಗಳನ್ನು ಮುಗಿಸಿ ಇದೀಗ 9 ನೆ ಆವೃತ್ತಿಯ ಹೊಸ್ತಿಲಲ್ಲಿ ಬಂದು ನಿಂತಿದೆ. ಬಿಗ್ಬಿ ಬಾಸ್ಗ್ ಸ್ಪರ್ಧೆ ಮುಗಿಸಿ ಬಂದ ನಂತರ ಬಹುತೇಕರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇನ್ನು ಅದರ ವಿಜೇತರು ಎಂದರೆ ಕೇಳಬೇಕೆ. ಹೌದು ಬಾಸ್ ಸೀಸನ್ 6 ರ ವಿಜೇತ ಮಾಡರ್ನ್ ರೈತ ಎಂದೇ ಕರೆಸಿಕೊಳ್ಳುವ ಶಶಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನೋಡೋಣ.

ಬಿಗ್ ಬಾಸ್ ನಂತರ ಇದೀಗ ಶಶಿಕುಮಾರ್ ಅವರು ಕನ್ನಡ ಚಿತ್ರ ರಂಗಕ್ಕೆ ಕೂಡ ಕಾಲಿಟ್ಟಿದ್ದು ಮೆಹಬೂಬ ಎನ್ನುವ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಇದೀಗ ಮಾಡರ್ನ್ ರೈತ ಶಶಿ ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಹೌದು ಈ ಬಿಗ್ ಬಾಸ್ ವಿಜೇತ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುವುದು ಇದೀಗ ಪಕ್ಕಾ ಆಗಿದೆ. ಇವರು ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅದರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಶಿ ಅವರು ದೊಡ್ಡ ಬಳ್ಳಾಪುರದ ಸ್ವಾತಿ ಎಂಬುವವರನ್ನು ಇದೆ ಆಗಸ್ಟ್ 7 ರಂದು ಬೆಂಗಳೂರಿನಲ್ಲಿ ವರಿಸಲಿದ್ದಾರೆ.