ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಈ ಕನ್ನಡ ನಟಿ

2015 ರಲ್ಲಿ ತೆರೆಕಂಡ ವಜ್ರಕಾಯ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಕೊಡಗಿನ ಬೆಡಗಿ ಶುಭ್ರ ಅಯ್ಯಪ್ಪ ಅವರು ತಮ್ಮ ಎಂಗೇಜ್ಮೆಂಟ್ ಸುದ್ದಿ ಹೇಳಿ ಅಭಿಮಾನಿಗಳಿಗೆ ಸಡನ್ ಶಾಕ್ ನೀಡಿದ್ದಾರೆ. ಹೌದು ಇತ್ತೀಚೆಗೆ ನಟಿ ಶುಭ್ರ ಐಯಪ್ಪ ಅವರು ತಮ್ಮ ಇಷ್ಟದ ಹುಡುಗನೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ವಿಶಾಲ್ ಶಿವಪ್ಪ ಅವರೊಂದಿಗೆ ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಶುಬ್ರಾ ಮತ್ತು ವಿಶಾಲ್ ಅವರು ಬಹಳ ದಿನಗಳಿಂದಲೂ ಡೇಟ್ ಮಾಡುತ್ತಿದ್ದರು. ವಿಶೇಷವೆಂದರೆ ಶುಭ್ರ ಅಯ್ಯಪ್ಪ ಅವರ ಎಂಗೇಜ್ಮೆಂಟ್ ಬಗ್ಗೆ ಸ್ವತಹ ಶುಬ್ರಾ ಅವರಿಗೂ ತಿಳಿದಿರಲಿಲ್ಲವಂತೆ.

ಹೌದು ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದ ಇವರಿಬ್ಬರು, ಇತ್ತೀಚೆಗೆ ಪ್ರವಾಸಕ್ಕೆಂದು ಮಾಲ್ಡಿವ್ಸ್ ಗೆ ತೆರಳಿದ್ದರು. ಬರೀ ಪ್ರವಾಸಕ್ಕೆ ಹೊರಟಿದ್ದೇವೆ ಎಂದು ತಿಳಿದಿದ್ದ ಶುಬ್ರ ಐಯಪ್ಪ ಅವರಿಗೆ ಅಲ್ಲೊಂದು ಶಾಕ್ ಕಾದಿತ್ತು. ಮಾಲ್ಡೀವ್ಸ್ ನಲ್ಲಿ ಡಿನ್ನರ್ ರಿಸರ್ವೇಶನ್ ನನಗಾಗಿ ಮಾಡಿಸಿದ್ದಾರೆ ಎಂದುಕೊಂಡಿದ್ದ ಶುಬ್ರ ಅವರು, ತಮ್ಮ ಫೇವರೆಟ್ ಡ್ರೆಸ್ಸನ್ನು ಡಿನ್ನರ್ ಗಾಗಿ ಧರಿಸಿ ಕೊಂಡಿದ್ದರಂತೆ. ಆದರೆ ಅಲ್ಲಿ ನಡೆದದ್ದೇ ಬೇರೆ. ಸಂಪೂರ್ಣವಾಗಿ ಕ್ಯಾಂಡಲ್ ಗಳಿಂದ ಅಲಂಕೃತವಾಗಿದ್ದ ಬೀಚ್ ನಲ್ಲಿ ವಿಶಾಲ ಅವರು ಶುಬ್ರಾ ಅವರಿಗೆ ಮದುವೆಯ ಪ್ರಪೋಸಲ್ ಅನ್ನು ಮಾಡಿದ್ದಾರೆ.

ಈ ಬಗ್ಗೆ ಅಧಿಕೃತವಾಗಿ ಶುಭ್ರ ಅಯ್ಯಪ್ಪ ಅವರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ. ಇತ್ತೀಚಿಗೆ ಸ್ವಿಮ್ಮಿಂಗ್ ಪೂಲ್ ಮಧ್ಯೆ ವಿಶಾಲ್ ಅವರ ಜೊತೆ ತೆಗೆಸಿಕೊಂಡ ರೋಮಾಂಟಿಕ್ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ಶುಬ್ರ ಐಯಪ್ಪ ಅವರು, ನಾನು ನನ್ನ ಪಾಂಡಾ ಗೆ ಎಸ್ ಎಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ. ತಮ್ಮ ಡ್ರೀಮ್ ಪ್ರಪೋಸಲ್ ಬಗ್ಗೆ ಮಾತನಾಡಿದ ಶುಭ್ರ ಅವರು, ಪ್ರವಾಸಕ್ಕೆಂದು ನಾನು ಮತ್ತು ವಿಶಾಲ್ ಮಾಲ್ದಿವ್ಸ್ ಗೆ ತೆರಳಿದ್ದೆವು. ಅಲ್ಲಿ ನಮಗಾಗಿ ಡಿನ್ನರ್ ರಿಸರ್ವೇಷನ್ ಮಾಡಲಾಗಿತ್ತು. ಕ್ಯಾಂಡಲ್ ಗಳಿಂದ ಬೀಚ್ ನ್ನು ಅಲಂಕಾರ ಮಾಡಲಾಗಿತ್ತು.

ಬೀಚ್ ನಲ್ಲಿ ವಿಶಾಲ್ ನನ್ನ ಮುಂದೆ ಮಂಡಿಯೂರಿ ನನ್ನನ್ನು ಮದುವೆಯಾಗುತ್ತೀರಾ ಎಂದು ಕೇಳಿದರು. ಆ ಕ್ಷಣ ನನಗೆ ತುಂಬಾ ಭಾವನಾತ್ಮಕವಾಗಿತ್ತು. ನಾನು ಎಸ್ ಹೇಳಿದ ಮೇಲೆ ವಿಶಾಲ್ ನನ್ನ ಕೈಗೆ ರಿಂಗ್ ತೊಡಿಸಿದರು. ನಾವಿಬ್ಬರೂ ಎಂಗೇಜ್ ಆಗಿದ್ದೀವಿ ಅನ್ನೋದನ್ನು ನನಗಿನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಅದೊಂದು ಡ್ರೀಮ್ ಅನಿಸುತ್ತಿದೆ. ನನಗಾಗಿ ಮ್ಯಾಜಿಕಲ್ ಮುಮೆಂಟ್ ನ್ನು ಸೃಷ್ಟಿಸಿಬಿಟ್ಟರು ವಿಶಾಲ್. ಈ ಬಗ್ಗೆ ನನಗೆ ಸ್ವಲ್ಪವೂ ಕೂಡ ತಿಳಿದಿರಲಿಲ್ಲ. ನನ್ನ ಮುಂದೆ ವಿಶಾಲ್ ಮಂಡಿಯೂರಿ ಪ್ರೊಪೋಸ್ ಮಾಡಿದಾಗ ನಾನು ಕೂಡ ಒಂದು ಕ್ಷಣಕ್ಕೆ ಸರ್ಪ್ರೈಸ್ ಆಗಿದ್ದೆ ಎಂದು ತಮ್ಮ ಸಂತಸದ ಕ್ಷಣಗಳನ್ನು ಮೆಲುಕುಹಾಕಿದರು ನಟಿ ಶುಭ್ರ ಅಯ್ಯಪ್ಪ.

%d bloggers like this: