ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆಯ ನಟ ಹಾಗೂ ನಟಿ

ಕನ್ನಡ ಕಿರುತೆರೆಯ ಜನಪ್ರಿಯ ಮತ್ತೊಂದು ಜೋಡಿ ಹಸೆಮಣೆ ಏರಿದ್ದಾರೆ. ಇತ್ತೀಚೆಗೆ ಕಿರುತೆರೆಯ ಅನೇಕ ಯುವ ಕಲಾವಿದರು ವೈವಾಹಿಕ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಅದರಂತೇ ಇದೀಗ ನಟರಾದ ದೀಪಕ್ ಮಹಾದೇವ್ ತಮ್ಮ ಬಹು ವರ್ಷಗಳ ಗೆಳತಿ ನಟಿ ಚಂದನಾ ಮಹಲಿಂಗಯ್ಯ ಅವರನ್ನು ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಕಳೆದ ಆಗಸ್ಟ್ 1 ರಂದು ನಟ ದೀಪಕ್ ಮಹದೇವ್ ಮತ್ತು ನಟಿ ಚಂದನಾ ಮಹಾಲಿಂಗಯ್ಯ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನು ನಟ ದೀಪಕ್ ಮಹಾದೇವ್ ಅವರು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಿನ್ನಿಂದಲೇ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಈ ಹಿಂದೆ ನಟ ದೀಪಕ್ ಮಹದೇವ್ ಇದೇ ಉದಯ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ನಾಯಕಿ ಧಾರಾವಾಹಿಯ ನಾಯಕರಾಗಿ ನಟಿಸುತ್ತಿದ್ದರು. ಕೋವಿಡ್ ಪರಿಣಾಮ ಈ ನಾಯಕಿ ಧಾರಾವಾಹಿ ಅರ್ಧದಲ್ಲೆ ನಿಲ್ಲುವಂತಾಯ್ತು. ಇದಾದ ಬಳಿಕ ನಟ ದೀಪಕ್ ಮಹಾದೇವ್ ಯಾವುದೇ ಧಾರಾವಾಹಿಯಲ್ಲಿ ನಟಿಸಿರಲಿಲ್ಲ. ಇನ್ನು ದೀಪಕ್ ಅವರನ್ನ ಮದುವೆ ಆಗಿರುವ ನಟಿ ಚಂದನಾ ಮಹಾಲಿಂಗಯ್ಯ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸೀತಾ ವಲ್ಲಭದಲ್ಲಿ ಖಳ ನಟಿಯಾಗಿ ಅಂಕಿತಾ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರದ ಮೂಲಕ ನಟಿ ಚಂದನಾ ಅವರಿಗೆ ಉತ್ತಮ ಹೆಸರು ತಂದುಕೊಟ್ಟಿತು.

ಇದೀಗ ನಟ ದೀಪಕ್ ಮಹಾದೇವ್ ಮತ್ತು ನಟಿ ಚಂದನಾ ಮಹಾಲಿಂಗಯ್ಯ ಅವರು ತಮ್ಮ ಕನಸಿನಂತೆಯೇ ಎರಡೂ ಕುಟುಂಬಗಳ ಸದಸ್ಯರು ಮತ್ತು ತಮ್ಮ ಆಪ್ತಿಷ್ಟರ ಸಮಕ್ಷಮದಲ್ಲಿ ವೈವಾಹಿಕ ಜೀವನಕ್ಕೆ ಪ್ರವೇಶ ಪಡೆದಿದ್ದಾರೆ. ಅವರ ಸ್ನೇಹಿತರು ಮತ್ತು ಹಿತೈಷಿಗಳು ನವ ವಧು-ವರರಿಗೆ ಶುಭಾಶಯ ಕೋರಿದ್ದಾರೆ. ಈ ಜೋಡಿಯ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಈ ಹೊಸ ಜೋಡಿಗಳಿಗೆ ಶುಭಾಶಯ ತಿಳಿಸಿದ್ದಾರೆ.

%d bloggers like this: