ವೈವಾಹಿಕ ಜೀವನಕ್ಕೆ ಕಾಲಿಟ್ಟ ಕನ್ನಡ ನಟಿ

ಕಳೆದ ಶುಕ್ರವಾರ ರಿಲೀಸ್ ಆಗಿ ಎಲ್ಲೆಡೆ ತನ್ನ ಭರ್ಜರಿ ಪ್ರದರ್ಶನವನ್ನು ನೀಡುತ್ತಿರುವ ಚಿತ್ರ ಲವ್ ಮಾಕ್ಟೇಲ್ ಟು. 2020 ರಲ್ಲಿ ರಿಲೀಸ್ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಲವ್ ಮಾಕ್ಟೇಲ್ ಚಿತ್ರವನ್ನು ಜನತೆ ತುಂಬು ಹೃದಯದಿಂದ ಒಪ್ಪಿಕೊಂಡಿದ್ದರು. ಇನ್ನು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅವರ ಅಭಿಮಾನಿಗಳಂತೂ ಲವ್ ಮಾಕ್ಟೇಲ್ 2 ಚಿತ್ರಕ್ಕಾಗಿ ಕಾದುಕುಳಿತಿದ್ದರು. ಇದೀಗ ಲವ್ ಮಾಕ್ಟೇಲ್ 2 ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗಿದೆ. ವೀಕ್ಷಕರು ಈ ಚಿತ್ರವನ್ನು ತುಂಬಾ ಇಷ್ಟ ಪಟ್ಟಿದ್ದಾರೆ. ಚಿತ್ರ ನೋಡಿದ ಎಲ್ಲರೂ ಒಳ್ಳೆಯ ರಿವ್ಯೂ ನೀಡುತ್ತಿದ್ದಾರೆ. ಇನ್ನು ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಹಲವು ಹೊಸ ಪಾತ್ರಗಳನ್ನು ಸೇರಿಸಲಾಗಿದೆ.

ಕೃಷ್ಣ ಮತ್ತು ಮಿಲನ ಅವರು ಹೊಸ ಕಲಾವಿದರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಲವ್ ಮಾಕ್ಟೇಲ್ ಚಿತ್ರದಲ್ಲಿ ಜಂಕಣ (ಜಂಕಿ) ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಸುಶ್ಮಿತಾ ಗೌಡ. ಸೋಶಿಯಲ್ ಮೀಡಿಯಾ ಗಳಲ್ಲಿ ಸಕ್ರಿಯವಾಗಿರುವ ಸುಶ್ಮಿತಾ ಅವರು ವಿಧವಿಧವಾದ ಡಾನ್ಸ್ ಪ್ರಕಾರಗಳನ್ನು ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇದರಿಂದಲೇ ಅವರಿಗೆ ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಇನ್ನು ಸುಶ್ಮಿತಾ ಅವರ ಮೂಗುತಿ ಭಾರೀ ಗಮನ ಸೆಳೆದಿದ್ದು, ಇದನ್ನು ನೋಡಿಯೇ ಸಿನಿಮಾಕ್ಕೆ ಅವರನ್ನು ಆಯ್ಕೆ ಮಾಡಿಕೊಂಡೆವು ಎಂದು ಮಿಲನಾ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈಗ ನಟಿ ಸುಶ್ಮಿತಾ ಗೌಡ ಎರಡೆರಡು ಸಂಭ್ರಮದಲ್ಲಿದ್ದಾರೆ. ನಟಿಯಾಗಿ ಅವರ ಮೊದಲ ಚಿತ್ರ ಲವ್ ಮಾಕ್ಟೇಲ್ 2 ಚಿತ್ರ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇನ್ನೊಂದು ಕಡೆ ನಟಿ ಸುಶ್ಮಿತಾ ಗೌಡ ಅವರ ಹೊಸ ಜೀವನ ಆರಂಭವಾಗಿದೆ. ಹೌದು ನಟಿ ಸುಶ್ಮಿತಾ ಗೌಡ ಅವರು ಅಶ್ವಿನ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಶ್ವಿನ್ ಮತ್ತು ಸುಶ್ಮಿತಾ ಅವರು ಕಾಶ್ಮೀರದಲ್ಲಿ ಭರ್ಜರಿಯಾಗಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದು, ಕೆಲದಿನಗಳ ಹಿಂದೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು.

ಸುಶ್ಮಿತಾ ಹಾಗೂ ಅಶ್ವಿನ್ ಅವರ ಮೆಹೆಂದಿ, ಹಳದಿ, ಸಂಗೀತ ಕಾರ್ಯಕ್ರಮ ಭರ್ಜರಿಯಾಗಿ ನಡೆದಿದ್ದು, ತಮ್ಮ ಸಂಗೀತ ಕಾರ್ಯಕ್ರಮದಲ್ಲಿ ಸುಶ್ಮಿತಾ ಅವರು ಸಕ್ಕತ್ ಆಗಿ ಡ್ಯಾನ್ಸ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ಇವರ ಡ್ಯಾನ್ಸ್ ಅನ್ನು ಮೆಚ್ಚಿಕೊಂಡಿದ್ದರು. ಸುಶ್ಮಿತಾ ಅವರ ಮದುವೆ ಕಾರ್ಯಕ್ರಮಕ್ಕೆ ನಟಿಯರಾದ ಆಶಿಕಾ ರಂಗನಾಥ್, ಅನುಷಾ ರಂಗನಾಥ್, ಗೀತಾ ಧಾರಾವಾಹಿ ಖ್ಯಾತಿಯ ಭವ್ಯ ಗೌಡ, ಲಕ್ಷ್ಮಿ ಶೆಟ್ಟಿ ಹೀಗೆ ಹಲವಾರು ನಟಿಯರು ಆಗಮಿಸಿದ್ದರು.

%d bloggers like this: