ವೈವಾಹಿಕ ಜೀವನಕ್ಕೆ ಕಾಲಿಟ್ಟ ಮತ್ತೊಬ್ಬ ಕನ್ನಡದ ನಟಿ

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ಭಾರತದ ಎಲ್ಲ ಚಿತ್ರರಂಗಗಳಲ್ಲಿ ಮದುವೆಗಳ ಭರಾಟೆ ಜೋರಾಗಿಯೆ ಇದೆ. ಹೌದು 2020ರ ಮೊದಲ ಲಾಕ್ಡೌನ್ ನಿಂದ ಇಲ್ಲಿಯವರೆಗೆ ಬಹಳಷ್ಟು ವಿವಾಹಗಳು ಜರುಗಿವೆ. ಅದೇ ರೀತಿ ಇದೀಗ ಕನ್ನಡ ಚಿತ್ರರಂಗದಲ್ಲಿ ತಮ್ಮ ಮೊದಲ ಚಿತ್ರದ ಮೂಲಕವೇ ಮೋಡಿ ಮಾಡಿದ ಉದಯೋನ್ಮುಖ ನಟಿ ಒಬ್ಬರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಹೌದು ಕೆಲವು ತಿಂಗಳುಗಳ ಹಿಂದೆ ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯದ ವಿನೂತನ ಚಿತ್ರ ರತ್ನನ ಪರಪಂಚ ಓಟಿಟಿ ವೇದಿಕೆಗಳಲ್ಲಿ ಒಂದಾದ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡು ಸಿಕ್ಕಾಪಟ್ಟೆ ಪ್ರಸಿದ್ಧಿಯನ್ನು ಪಡೆದಿದ್ದು ನಮ್ಮೆಲ್ಲರಿಗೂ ಗೊತ್ತೇ ಇದೆ. ಒಬ್ಬ ಸಾಮಾನ್ಯ ಹುಡುಗ ತನ್ನ ಜೀವನದಲ್ಲಿ ಸಾಮಾನ್ಯವಾಗಿ ಅನುಭವಿಸುವ ಎಲ್ಲ ತರಹದ ಅನುಭವಗಳನ್ನು ರಸವತ್ತಾಗಿ ನಿರ್ದೇಶಕರು ತೆರೆಯ ಮೇಲೆ ತಂದಿದ್ದಾರೆ.

ಅದೇ ರೀತಿ ಚಿತ್ರದಲ್ಲಿ ಬಣ್ಣ ಹಚ್ಚಿದ ಪ್ರತಿಯೊಬ್ಬರು ಸಹ ಅಷ್ಟೇ ಅದ್ಬುತವಾಗಿ ನಟಿಸಿ ಚಿತ್ರದ ಭರ್ಜರಿ ಯಶಸ್ಸಿಗೆ ಕಾರಣರಾಗಿದ್ದಾರೆ. ಅಂತಹ ಪಾತ್ರಧಾರಿಗಳ ಲ್ಲಿ ಒಬ್ಬರು ಎಂದರೆ ಚಿತ್ರದ ನಟಿ ರೆಬಾ ಮೋನಿಕಾ. ಹೌದು ಇದೆ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರೇಬಾ ಅವರು ತಮ್ಮ ಮೊದಲ ಚಿತ್ರದಲ್ಲಿಯೇ ಪ್ರೇಕ್ಷಕ ಪ್ರಭುಗಳ ಮನಸ್ಸನ್ನು ಗೆದ್ದಿದ್ದಾರೆ. ರೆಬಾ ಅವರ ಪಾಲಕರು ಮೂಲತಃ ಕೇರಳ ಆಗಿದ್ದರು ಸಹ ರೆಬಾ ಅವರ ವ್ಯಾಸಂಗ ಎಲ್ಲಾ ಆಗಿದ್ದು ಬೆಂಗಳೂರಿನಲ್ಲಿಯೇ. ಹೀಗಾಗಿ ರೆಬಾ ಅವರಿಗೆ ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರುತ್ತದೆ.

ಈ ಹಿಂದೆ ತೆಲುಗು ತಮಿಳು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ಈ ನಟಿ ರತ್ನನ ಪ್ರಪಂಚ ಎಂಬ ಸೂಪರ್ ಹಿಟ್ ಚಿತ್ರದ ಮೂಲಕ ಕನ್ನಡ ಚಿತ್ರದ ಬಾಗಿಲನ್ನು ಸಹ ತಟ್ಟಿದರು. ಇದೀಗ ರೆಬಾ ಮೋನಿಕಾ ಅವರು ಮತ್ತೊಂದು ವಿಷಯಕ್ಕೆ ತುಂಬಾ ಸುದ್ದಿಯಲ್ಲಿ ಇದ್ದಾರೆ. ಹೌದು ರೆಬಾ ಅವರು ತಮ್ಮ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇದೆ ತಿಂಗಳ ಒಂಭತ್ತನೇ ತಾರೀಖಿನಂದೂ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿರುವ ಚರ್ಚ್ ಒಂದರಲ್ಲಿ ಕ್ರಿಶ್ಚಿಯನ್ ವಿಧಿ ವಿಧಾನ ಗಳಂತೆ ತಮ್ಮ ಬಹುದಿನಗಳ ಸ್ನೇಹಿತ ಜೋಮನ್ ಅವರೊಂದಿಗೆ ಸರಳವಾಗಿ ವಿವಾಹವಾಗಿದ್ದಾರೆ.

ಈ ವಿಷಯವನ್ನು ಸ್ವತಃ ರೆಬಾ ಅವರೇ ತಮ್ಮ ಸಾಮಾಜಿಕ ಜಾಲತಾಣದ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ಹೊಸ ಜೀವನ ಆರಂಭಿಸಿದ ನಟಿಗೆ ಡಾಲಿ ಧನಂಜಯ್ ಸೇರಿದಂತೆ ಅನೇಕ ಹಿರಿಯರು ಶುಭ ಕೋರಿದ್ದಾರೆ. ರೆಬಾ ಅವರು 2016 ದಲ್ಲಿ ತೆರೆಕಂಡ ಜಕೊಬಿಂಟೆ ಸ್ವರ್ಗರಜ್ಯಂ ಎಂಬ ಮಲೆಯಾಳಿ ಚಿತ್ರದ ಮೂಲಕ ಸಿನಿ ಕರಿಯರ್ ಆರಂಭಿಸಿದ್ದರು. ದಳಪತಿ ವಿಜಯ್ ಅಭಿನಯಿಸಿದ ಬಿಗಿಲ್ ಚಿತ್ರದ ಮೂಲಕ ರೆಬ ಎಲ್ಲರಿಗೂ ಚಿರ ಪರಿಚಿತರಾದರು. ಒಟ್ಟಾರೆಯಾಗಿ ಹೇಳುವುದಾದರೆ ರತ್ನನ್ ಪರ್ಪಂಚದ ಬೆಡಗಿ ಸದ್ದಿಲ್ಲದೆ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

%d bloggers like this: