ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಹಾಗೂ ಸ್ಟಾರ್ ನಟನ ತಂಗಿ

ಬಾಲಿವುಡ್ ನಲ್ಲಿ ಹಲವು ವರ್ಷಗಳಿಂದ ಕಪೂರ್ ಮತ್ತು ಖಾನ್ ಫ್ಯಾಮಿಲಿಗಳದ್ದೇ ಕಾರುಬಾರು. ಕಪೂರ್ ಮತ್ತು ಖಾನ್ ಇವೆರಡೂ ಮಹಾರಾಷ್ಟ್ರದ ದೊಡ್ಡ ಮನೆತನಗಳು ಎಂದೇ ಹೇಳಬಹುದು. ಸಿನಿಮಾ ರಂಗದಲ್ಲಂತೂ ಬಹಳ ಹಿಂದಿನಿಂದಲೂ ಕಪೂರ್ ಮತ್ತು ಖಾನ್ ಇವೆರಡೇ ಮನೆತನಗಳು ರಾರಾಜಿಸುತ್ತಿದ್ದವು. ಅಂತಹದ್ದೇ ಕಪೂರ್ ಫ್ಯಾಮಿಲಿ ಇಂದ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಮಾಡಿರುವ ನಟ ಶಾಹಿದ್ ಕಪೂರ್. ಸಕ್ಕತ್ ಹ್ಯಾಂಡ್ಸಮ್ ಮತ್ತು ಕ್ಯೂಟ್ ಆಗಿರುವ ಈ ನಟನಿಗೆ ಹಲವಾರು ಅಭಿಮಾನಿಗಳಿದ್ದಾರೆ. ಅವರ ಹೆಂಡತಿ ಮೀರಾ ಕಪೂರ್ ಕೂಡ ಸಕ್ಕತ್ ಫೇಮಸ್. ಮೀರಾ ಕಪೂರ್ ಅವರು ಸಿನಿಮಾ ಬ್ಯಾಗ್ರೌಂಡ್ ಅಲ್ಲದಿದ್ದರೂ ಅವರ ಸೌಂದರ್ಯ ಹಾಗೂ ವ್ಯಕ್ತಿತ್ವದಿಂದ ಫೇಮಸ್ ಆಗಿದ್ದಾರೆ.

ಶಾಹಿದ್ ಕಪೂರ್ ಮತ್ತು ಮೀರಾ ಕಪೂರ್ ಅವರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮುದ್ದಾದ ಮಕ್ಕಳಿದ್ದಾರೆ. ಇತ್ತೀಚಿಗೆ ಕಪೂರ್ ಮನೆತನದಲ್ಲಿ ಸಂಭ್ರಮವೊಂದು ಮನೆಮಾಡಿದೆ. ಹೌದು ಇದೀಗ ಬಾಲಿವುಡ್ ಸೂಪರ್ ಸ್ಟಾರ್ ಶಾಹಿದ್ ಕಪೂರ್ ಅವರ ಸಹೋದರಿ ಸನಾ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೌದು ಮಾಹಿತಿಗಳ ಪ್ರಕಾರ ಪಂಕಜ್ ಕಪೂರ್ ಮತ್ತು ಸುಪ್ರಿಯಾ ಪಾಠಕ್ ದಂಪತಿಗಳ ಪುತ್ರಿ ಸನಾ ಕಪೂರ್ ಹಾಗೂ ಸೀಮಾ ಮತ್ತು ಮನೋಜ್ ಪಾಹ್ವ ದಂಪತಿಗಳ ಪುತ್ರ ಮಾಯಾಂಕ್ ಅವರೊಂದಿಗೆ ವಿವಾಹ ನಿಶ್ಚಯವಾಗಿದೆ. ಇವರಿಬ್ಬರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು. ಸನಾ ಮತ್ತು ಮಾಯಾಂಕ್ ಇಬ್ಬರೂ ಒಬ್ಬರಿಗೊಬ್ಬರು ಬಹಳ ವರ್ಷಗಳಿಂದ ಪರಿಚಿತರು. ಸ್ನೇಹಿತರಾದ ಇವರಿಬ್ಬರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಸ್ವಲ್ಪ ದಿನಗಳ ಹಿಂದೆ ಇವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವಿವಾಹದ ಬಗ್ಗೆ ಸನಾ ಕಪೂರ್ ಅವರ ತಂದೆ ಪಂಕಜ್ ಕಪೂರ್ ಮಾತನಾಡಿ ನನ್ನ ಮಗಳ ಮದುವೆ ಇದೆ. ಇದನ್ನು ಬಿಟ್ಟು ಹೆಚ್ಚಿಗೆ ನಾನು ಏನನ್ನು ಹೇಳಲು ಬಯಸುವುದಿಲ್ಲ ಎಂದು ಹೇಳಿದರು. ಮೂಲ ಮಾಹಿತಿಗಳ ಪ್ರಕಾರ ಈಗಾಗಲೇ ಮದುವೆ ಪೂರ್ವ ಶಾಸ್ತ್ರಗಳ ಆದ ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನೆರವೇರಿವೆ. ಹಾಗೂ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಇವರಿಬ್ಬರ ವಿವಾಹ ಜರುಗಲಿವೆ ಎಂದು ತಿಳಿದುಬಂದಿದೆ. ಈಗಾಗಲೇ ಮೆಹಂದಿ ಕಾರ್ಯಕ್ರಮಗಳ ಫೋಟೋಗಳು ಸಖತ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

%d bloggers like this: