ಪೋಷಕಾಂಶಗಳ ಕೊರತೆ ಇರುವ ಆಹಾರ ಸೇವನೆ ಮಾಡುತ್ತಿರುವ ಇಂದಿನ ದಿನಮಾನಗಳಲ್ಲಿ ನಮ್ಮ ಆರೋಗ್ಯ ಎಷ್ಟರ ಮಟ್ಟಗೆ ಉತ್ತಮವಾಗಿರುತ್ತದೆ. ಇದಲ್ಲದೆ ನಾವು ದೈಹಿಕವಾಗಿ ಎಷ್ಟರ ಮಟ್ಟಿಗೆ ಸಧೃಡವಾಗಿರುತ್ತೇವೆ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ. ಇಂದು ಕೇವಲ ಮೂವತ್ತು ದಾಟುತ್ತಿದ್ದರೆ ಸಾಕು ಹಾಗಲೇ ದೈಹಿಕವಾಗಿ ನಾನಾ ಸಮಸ್ಯೆಗಳು ಎದುರಾಗಿ ಬಿಡುತ್ತವೆ. ಇವುಗಳಿಂದ ತುಂಬಾ ನೋವುಗಳನ್ನು ಕೂಡ ಅನುಭವಿಸಬೇಕಾಗುತ್ತದೆ. ಅದಯಲ್ಲಿಯೂ ಇತ್ತೀಚೆಗಂತೂ ಈ ಬೆನ್ನು ನೋವು, ಕೀಲು ನೋವು ಸಮಸ್ಯೆಗಳು ಅನೇಕ ಮಂದಿಯನ್ನು ಭಾದಿಸುತ್ತವೆ. ಕೆಲವರಿಗೆ ವರ್ಕ್ ಫ್ರಮ್ ಹೋಮ್ ಆದಾಗಿನಿಂದ ಕುಳಿತಲ್ಲೇ ಒಂದೇ ಸಮನೆ ಕೆಲಸ ಮಾಡಿ ಬೆನ್ನು ನೋವು ಸಮಸ್ಯೆ, ಭುಜ ನೋವು ಮತ್ತು ಹೊಟ್ಟೆ ನೋವು ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಇದರ ಜೊತೆಗೆ ಮತ್ತೊಂದಿಷ್ಟು ಜನರಿಗೆ ಓಡಾಡುವಾಗ ವಿಪರೀತ ಸುಸ್ತು ಕಾಣಿಸಿಕೊಳ್ಳುತ್ತದೆ.

ಈ ರೀತಿಯ ನೋವುಗಳು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ ಅಂದರೆ ದೇಹದಲ್ಲಿ ಪೋಷಕಾಂಶಗಳ ಕೊರತೆ ಕಾಣಿಸಿಕೊಂಡು ದೇಹದಲ್ಲಿ ನಿಶ್ಯಕ್ತಿ ಉಂಟಾಗುತ್ತದೆ. ಇದಕ್ಕೆ ಪರಿಹಾರವಾಗಿ ನೀವು ಈ ಐದು ಆಹಾರ ಪಧಾರ್ಥಗಳು ಮತ್ತು ಹಣ್ಣುಗಳನ್ನು ಸೇವನೆ ಮಾಡಿದರೆ ನಿಮ್ಮ ದೇಹದ ನಿಶ್ಯಕ್ತಿ ಕಡಿಮೆ ಆಗಿ ಮೂಳೆಗಳು ಸಧೃಡವಾಗುತ್ತವೆ. ಇಂದಿನ ಆಹಾರ ಗುಣಮಟ್ಟದ ಹಿನ್ನೆಲೆಯಲ್ಲಿ ಮೂವತ್ತು ನಲವತ್ತು ವರ್ಷದ ವಯಸ್ಕ ವ್ಯಕ್ತಿಗಳಿಗೇನೇ ಸ್ನಾಯುಗಳ ಬಲ ಹೀನತೆ ಕಾಡುತ್ತದೆ. ಮೂಳೆಗಳು ಸವೆದು ಹೋಗು ವಂತಿರುತ್ತದೆ. ಮೂಳೆಗಳು ಆರೋಗ್ಯವಾಗಿ ಸಧೃಡವಾಗಿರಲು ನೀವು ಆದಷ್ಟು ನಿಮ್ಮ ಆಹಾರ ಶೈಲಿಯಲ್ಲಿ ಗ್ರೀನ್ಸ್ ಅನ್ನು ಕೂಡ ಸೇರ್ಪಡೆಗೊಳಿಸಿಕೊಳ್ಳಿ. ಈ ಗ್ರೀನ್ಸ್ ನಲ್ಲಿ ಮೆಗ್ನೀಶಿಯಂ, ಪೊಟ್ಯಾಶಿಯಂ ಜೊತೆಗೆ ಇನ್ನಿತರ ಖನಿಜಾಂಶಗಳು ಹೇರಳವಾಗಿರುತ್ತವೆ. ಇವು ದೇಹದ ಮೂಳೆಗಳು ಗಟ್ಟಿಯಾಗಿರಲು ನೆರವಾಗುತ್ತದೆ. ಇನ್ನು ಹಾಲು, ಡೈರಿ ಉತ್ಪನ್ನಗಳು ದೇಹದ ಆರೋಗ್ಯ ಉತ್ತಮವಾಗಿರಲು ಸಹಾಯಕವಾಗಿರುತ್ತವೆ ಎಂದು ಹೇಳಲಾಗುತ್ತದೆ.

ದೇಹಕ್ಕೆ ಪ್ರಮುಖವಾಗಿ ಕ್ಯಾಲ್ಸಿಯಂ ಅಂಶ ಅಗತ್ಯ ಇರುವುದರಿಂದ ಹೆಚ್ಚೆಚ್ಚು ಹಾಲು ಮತ್ತು ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನ ಸೇವನೆ ಮಾಡಿದರೆ ಉತ್ತಮ ಎಂದು ಹೇಳಲಾಗುತ್ತದೆ. ಇನ್ನು ಸಮುದ್ರಾಹಾರದಲ್ಲಿ ವಿಟಮಿನ್ ಡಿ ಹೆಚ್ಚಾಗಿರುತ್ತದೆ. ಸಮುದ್ರಾಹಾರ ಅಂದರೆ ಮೀನು. ಈ ಮೀನಿನಲ್ಲಿ ಹೇರಳವಾಗಿ ಖನಿಜಾಂಶಗಳು ಇರಲಿದ್ದು ಮೂಳೆಗಳು ಬಲಿಷ್ಟವಾಗಿರುವುದಕ್ಕೆ ಇವು ಉತ್ತಮ ಆಹಾರವಾಗಿರುತ್ತದೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಇದ್ದು, ಇದು ದೇಹ ಮತ್ತು ಮೂಳೆ ಮಜ್ಜೆಯಲ್ಲಿನ ಎಲ್ಲಾ ಅಂಗಾಂಶಗಳ ರಚನೆಗೆ ಅವಶ್ಯಕವಾಗಿರುತ್ತದೆ. ಹಾಗಾಗಿ ಕಿತ್ತಳೆ ಹಣ್ಣು ಸೇವನೆ ಮಾಡೋದರಿಂದ ನಿಮ್ಮ ಮೂಳೆಗಳು ಸಧೃಡವಾಗಿರುತ್ತದೆ. ಅದರ ಜೊತೆಗೆ ಡ್ರೈಫ್ರೂಟ್ಸ್ ಗಳಾದಂತಹ ಬಾದಾಮಿ, ಗೋಡಂಬಿ, ಪಿಸ್ತಾ ಮತ್ತು ಸೂರ್ಯಕಾಂತಿ ಬೀಜ, ಅಗಸೆ ಬೀಜಗಳಲ್ಲಿ ಮೆಗ್ನೀಷಿಯಮ್ ಸತು, ವಿಟಮಿನ್ ಅಂಶಗಳು ಹೆಚ್ಚಾಗಿರುತ್ತದೆ. ಒಟ್ಟಾರೆಯಾಗಿ ಕಿತ್ತಳೆ ಹಣ್ಣು, ಗ್ರೀನ್ಸ್, ಡ್ರೈ ಫ್ರೂಟ್ಸ್ ಮತ್ತು ಹಾಲಿನಿಂದ ತಯಾರಿಸಿ ಉತ್ಪನ್ನಗಳನ್ನ ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಹೊಂದಬಹುದು.