ವೀರೇಂದ್ರ ಸೆಹ್ವಾಗ್ ಅವರ ಕ್ರಿಕೆಟ್ ಜೀವನದಲ್ಲಿ ಮತ್ತೊಂದು ಗರಿ

ಭಾರತೀಯ ಖ್ಯಾತ ಕ್ರಿಕೆಟಿಗ ಇದೀಗ ನಂಬರ್ ಒನ್ ಆಲ್ ರೌಂಡರ್, ವಿಶ್ವದ ಅನೇಕ ದೇಶಗಳ ಕ್ರಿಕೆಟಿಗರಲ್ಲಿ ಒಬ್ಬರು ಒಂದೊಂದು ವಿಭಾಗದಲ್ಲಿ ಪರಿಣಿತರಿರುತ್ತಾರೆ. ಅಂತೆಯೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಒಂದು ಕಾಲದಲ್ಲಿ ಕಪಿಲ್ ದೇವ್, ಅನಿಲ್ ಕುಂಬ್ಳೆ ವಿಶೇಷವಾಗಿ ಗಮನ ಸೆಳೆದಿದ್ದರು. ಇದೀಗ ವಿಶ್ವದ ನಂಬರ್ ಒನ್ ಆಲ್ ರೌಂಡರ್ ಸಾರ್ವಕಾಲಿಕ ಟೆಸ್ಟ್ X1 ನಲ್ಲಿ ವೀರೇಂದ್ರ ಸೆಹ್ವಾಗ್ ಅವರಿಗೆ ಮೊದಲ ಸ್ಥಾನ ಸಿಕ್ಕಿದೆ. ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಭಾರತ ಕ್ರಿಕೆಟ್ ತಂಡದ ಆಕ್ರಮಣಕಾರಿ ಆರಂಭಿಕ ಬಲಗೈ ಬ್ಯಾಟ್ಸಮನ್ ಆಗಿ ಆಗಿದ್ದರು. ಸೆಹ್ವಾಗ್ ಅವರಿಗೆ ನವಾಬ್ ಆಫ್ ಪಜಾಫಗಡ್ ಎಂಬ ಬಿರುದು ಕೂಡ ಇದೆ. ಎರಡು ಬಾರಿ ಮುನ್ನೂರು ರನ್ ಗಳನ್ನು ಬಾರಿಸಿರುವ ಜಗತ್ತಿನ ಮೂವರು ಕ್ರಿಕೆಟಿಗರಲ್ಲಿ ವೀರೇಂದ್ರ ಸೆಹ್ವಾಗ್ ಕೂಡ ಒಬ್ಬರಾಗಿದ್ದಾರೆ.

ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಕೀರ್ತಿ ವೀರೇಂದ್ರ ಸೆಹ್ವಾಗ್ ಅವರದ್ದು. ಇನ್ನು ಸೆಹ್ವಾಗ್ ರಣಜಿ ಕ್ರಿಕೆಟ್ ನಲ್ಲಿ ದೆಹಲಿ ತಂಡದ ಪರವಾಗಿ ಆಟ ಆಡುತ್ತಾರೆ. ಇದೀಗ ಸೆಹ್ವಾಗ್ ಅವರಿಗೆ ಮತ್ತೊಂದು ಗರಿ ಅಂದರೆ ವಿಶ್ವದ ನಂಬರ್ ಒನ್ ಆಲ್ ರೌಂಡರ್ ಆಟಗಾರರ ಪೈಕಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ ಅವರು ಸಾರ್ವಕಾಲಿಕ ಟೆಸ್ಟ್ ಇಲೆವೆನ್ ಪ್ರಕಟ ಮಾಡಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಜೇಸನ್ ಹೋಲ್ಡರ್ ವೀರೇಂದ್ರ ಸೆಹ್ವಾಗ್ ಮತ್ತು ಕ್ರಿಸ್ ಗೇಲ್ ಆರಂಭಿಕ ಆಟಗಾರರಾಗಿರುತ್ತಾರೆ. ತದ ನಂತರ ಮಧ್ಯಮ ಕ್ರಮಾಂಕದಲ್ಲಿ ರಿಕಿ ಪಾಂಟಿಂಗ್, ಬ್ರಿಯಾನ್ ಲಾರಾ, ವಿವ್ ರಿಚರ್ಡ್ಸ್, ಸರ್ ಗಾರ್ಫೀಲ್ಟ್ ಸೋಬರ್ಸ್ ಇದ್ದು, ವಿಕೆಟ್ ಕೀಪರ್ ಗಳಾಗಿ ಆಡಂ ಗಿಲ್ ಕ್ರಿಸ್ಟ್ ಇದ್ದರೆ ಶೇನ್ ವಾರ್ನ್ ಸ್ಪಿನ್ನರ್ ಆಗಿ ಆಯ್ಕೆ ಆಗಿದ್ದಾರೆ.

ಇನ್ನು ವೇಗಿಗಳಾಗಿ ಕರ್ಟ್ಲಿ ಆಂಬ್ರೋಸ್, ಮಾಲ್ಕಮ್ ಮಾರ್ಷಲ್ ಜೊತೆಗೆ ವಾಸಿಮ್ ಅಕ್ರಮ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ಜೇಸನ್ ಹೋಲ್ಡರ್ ಸಾರ್ವಕಾಲಿಕ ಟೆಸ್ಟ್X1 ಆಟಗಾರರ ಪಟ್ಟಿ ನೋಡುವುದಾದರೆ ಮೊದಲ ಸ್ಥಾನದಲ್ಲಿ ವೀರೇಂದ್ರ ಸೆಹ್ವಾಗ್ ತದ ನಂತರದಲ್ಲಿ ಕ್ರಿಸ್ ಗೇಲ್, ರಿಕಿ ಪಾಂಟಿಂಗ್, ಬ್ರಿಯಾನ್ ಲಾರಾ, ವಿವ್ ರಿಚರ್ಡ್ಸ್, ಗಾರ್ಫೀಲ್ಟ್ ಸೋಬರ್ಸ್, ಆಡಂ ಗಿಲ್ ಕ್ರಿಸ್ಟ್, ಶೆನ್ ವಾರ್ನ್, ಕರ್ಟ್ಲೀ ಆಂಬ್ರೋಸ್, ಮಾಲ್ಕಮ್ ಮಾರ್ಷಲ್ ಮತ್ತು ವಾಸಿಮ್ ಅಕ್ರಮ್ ಆಟಗಾರರಿದ್ದಾರೆ. ಜೇಸನ್ ಹೋಲ್ಡರ್ ಎಲ್ಲರ ಬಗ್ಗೆಯೂ ಕೂಡ ಮಾತನಾಡಿದರು ಆದರೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ವಾಲ್ ಖ್ಯಾತಿಯ ರಾಹುಲ್ ದ್ರಾವೀಡ್ ಅವರ ಬಗ್ಗೆ ಎಲ್ಲಿಯೂ ಕೂಡ ಮಾತನಾಡಿಲಿಲ್ಲ. ಇದು ಹಲವರಿಗೆ ಅಸಮಾಧಾನ ಮತ್ತು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

%d bloggers like this: