ವಿಭಿನ್ನ ಪ್ರಯತ್ನಕ್ಕೆ ಕೈ ಹಾಕುತ್ತಿರುವ ಕನ್ನಡ ಚಿತ್ರರಂಗ, ಒಂದೇ ಚಿತ್ರಕ್ಕೆ ಐದು ಕಥೆ ಮತ್ತು ಐದು ನಿರ್ದೇಶಕರು

ಸಾಮಾನ್ಯವಾಗಿ ನಾವು ಮಲ್ಟಿ ಸ್ಟಾರರ್ ಸಿನಿಮಾ ನೋಡಿರುತ್ತೇವೆ. ಆದರೆ ಮಲ್ಟಿ ಸ್ಟಾರ್ ನಿರ್ದೇಶಕರು ಒಂದೇ ಸಿನಿಮಾವನ್ನು ನಿರ್ದೇಶನ ಮಾಡಿದ ಚಿತ್ರವನ್ನು ನೋಡಿರಲು ಸಾಧ್ಯವಿಲ್ಲ. ಅಂತಹ ಯಾರು ಮಾಡದ ಕೆಲಸಕ್ಕೆ ಕೈ ಹಾಕಿದ್ದಾರೆ, ನಿರ್ದೇಶಕ ಗುರುದೇಶ್ ಪಾಂಡೆ. ಗುರುದೇಶ್ ಪಾಂಡೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಜಾಹುಲಿ, ರುದ್ರತಾಂಡವ ಅಂತಹ ಹಿಟ್ ಚಿತ್ರವನ್ನು ನಿರ್ದೇಶನ ಮಾಡಿ ಯಶಸ್ವಿಯಾಗಿದ್ದರು. ತದನಂತರ ಗುರುದೇಶ್ ಪಾಂಡೆ ಜಿ.ಅಕಾಡೆಮೆ ಎಂಬ ಸಿನಿಮಾ ಸ್ಕೂಲ್ ತೆರೆದು ಒಂದಷ್ಟು ಹೊಸ ನಟ, ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಲು ತಯಾರು ಮಾಡುತ್ತಿದ್ದಾರೆ.

ಇದೀಗ ಗುರುದೇಶ್ ಪಾಂಡೆ ಅವರು ಹೊಸದೊಂದು ಆಲೋಚನೆ ಹೊರತಂದು, ಕನ್ನಡದ ಖ್ಯಾತ ಐದು ನಿರ್ದೇಶಕರ ಬಳಿ ಐದು ವಿಭಿನ್ನ ಕಥೆಗಳನ್ನು ಸೇರಿಸಿ ಒಂದು ಸಿನಿಮಾವಾಗಿ ಮಾಡಲು ಹೊರಟಿದ್ದಾರೆ, ನಿರ್ದೇಶಕ ಗುರುದೇಶ್ ಪಾಂಡೆ. ಈ ಚಿತ್ರಕ್ಕೆ ಪೆಂಟಗನ್ ಎಂದು ಟೈಟಲ್ ಕೊಟ್ಟು, ಜಿ ಅಕಾಡೆಮೆ ಪ್ರೊಡಕ್ಷನ್ ಮೂಲಕ ಪೆಂಟಗನ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಕನ್ನಡದ ಆ ಐದು ನಿರ್ದೇಶಕರನ್ನು ಕಳೆದ ಸುದ್ದಿಗೋಷ್ಠಿಯಲ್ಲಿ ಪರಿಚಯಿಸಿದವರ ಹೆಸರನ್ನು ನೋಡುವುದಾದರೆ, ಚೂರಿಕಟ್ಟೆ ಚಿತ್ರದ ನಿರ್ದೇಶಕ ರಾಘು ಶಿವಮೊಗ್ಗ, ಬದ್ಮಾಶ್ ಮತ್ತು ಶಿವಾಜಿ ಸುರತ್ಕಲ್ ಚಿತ್ರ ನಿರ್ದೇಶಕರಾದ ಆಕಾಶ್ ಶ್ರೀವತ್ಸ ಮತ್ತು ಡಬಲ್ ಎಂಜಿನ್ ಚಿತ್ರ ಖ್ಯಾತಿಯ ಚಂದ್ರಮೋಹನ್ ಮತ್ತು ಮೊಟ್ಟ ಮೊದಲ ಬಾರಿಗೆ ಡೈರೆಕ್ಷನ್ ಕ್ಯಾಪ್ ತೊಟ್ಟಿರುವ ಕಿರಣ್ ಜೊತೆಗೆ ನಿರ್ದೇಶಕ ಗುರುದೇಶ್ ಪಾಂಡೆಯವರು ಕೂಡ ಒಂದು ಕಥೆಯನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚೆಗೆ ಈ ಪೆಂಟಿಗನ್ ಚಿತ್ರದ ಪೋಸ್ಟರ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದರು. ಈಗಾಗಲೇ ಐದು ಕಥೆಯುಳ್ಳ ಪೆಂಟಗನ್ ಚಿತ್ರದ ಮೂರು ಕಥೆಯ ಚಿತ್ರೀಕರಣ ಮುಗಿದಿದ್ದು. ಇನ್ನು ಕಥೆಗಳ ಶೂಟಿಂಗ್ ಬಾಕಿ ಉಳಿದಿವೆ. ಇನ್ನು ಈ ಚಿತ್ರ ಪಾತ್ರವರ್ಗದ ಹೆಸರುಗಳನ್ನು ಬಹಿರಂಗಗೊಳಿಸಿಲ್ಲ. ಮುಂದಿನ ದಿನಗಳಲ್ಲಿ ಉಳಿದೆರಡು ಕಥೆಯ ಶೂಟಿಂಗ್ ಮುಗಿದ ನಂತರ ಪೆಂಟಗನ್ ಚಿತ್ರದ ಸಂಪೂರ್ಣ ಮಾಹಿತಿ ನೀಡುತ್ತೇವೆ ಎಂದು ಈ ಚಿತ್ರದ ನಿರ್ಮಾಪಕ, ನಿರ್ದೇಶಕ ಗುರುದೇಶ್ ಪಾಂಡೆ ತಿಳಿಸಿದ್ದಾರೆ.

%d bloggers like this: