ವಿದ್ಯಾರ್ಥಿಗಳೇ ಇನ್ನು ಬಸ್ ಪಾಸ್ ಚಿಂತೆ ಬೇಡ, ಬಿಎಂಟಿಸಿ ಇಂದ ಮಹತ್ವದ ಹೇಳಿಕೆ

ಬಿಎಂಟಿಸಿ ಯಿಂದ ಶಾಲಾ ಮಕ್ಕಳಿಗೆ ಭರ್ಜರಿ ಗಿಫ್ಟ್ ನೀಡಿದೆ, ಹೌದು ಕೊರೋನ ವೈರಸ್ ನಿಯಂತ್ರಣದ ಸಲುವಾಗಿ ಸತತ ಎಂಟು ತಿಂಗಳಿಂದ ದೇಶಾದ್ಯಂತ ಬಂದ್ ಆಗಿದ್ದ ಶಾಲಾ ಕಾಲೇಜುಗಳು ಮತ್ತೆ ಪುನಾರಂಭಗೊಂಡಿದೆ. ರಾಜ್ಯದಲ್ಲಿ ಹತ್ತನೆ ತರಗತಿ ಮತ್ತು ದ್ವಿತೀಯ ಪಿಯುಸಿ ವಿಧ್ಯಾರ್ಥಿಗಳಿಗೆ ಆಫ್ ಲೈನ್ ತರಗತಿಗಳು ನಡೆಯುತ್ತಿದ್ದು ಸರ್ಕಾರ ಎಲ್ಲಾ ಸುರಕ್ಷತೆಯ ಕ್ರಮಗಳನ್ನು ಕೈಗೊಂಡು ಕೊರೋನ ಮಾರ್ಗಸೂಚಿ ಅಳವಡಿಸಿಕೊಂಡು ರಾಜ್ಯದಂತ ರಾಜ್ಯ ಸರ್ಕಾರ ಶಾಲೆ ಕಾಲೇಜುಗಳನ್ನು ತೆರೆದಿದೆ. ಹತ್ತು ತಿಂಗಳ ಲಾಕ್ ಡೌನ್ ನಿಂದಾಗಿ ಹಲವಾರು ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಆರ್ಥಿಕವಾಗಿ ಕುಸಿದಿದ್ದು ಎಷ್ಟೋ ಪೋಷಕರಿಗೆ ಶುಲ್ಕ ಕಟ್ಟಲು ಸಾಧ್ಯವಾಗುತ್ತಿಲ್ಲ.

ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದ ಪೋಷಕರು ತಮ್ಮ ಆರ್ಥಿಕ ಪರಿಸ್ಥಿತಿ ಲಾಕ್ ಡೌನ್ ನಿಂದ ಹದಗೆಟ್ಟು ತಮ್ಮಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ, ಇಂತಹ ಅನೇಕ ಬಡ ಪೋಷಕರಿಗೆ ತಮ್ಮ ಮಕ್ಕಳ ಶಾಲಾ ಶುಲ್ಕವನ್ನೆ ಕಟ್ಟಲಾಗದ ಪರಿಸ್ಥಿತಿಯಲ್ಲಿ ಆ ಮಕ್ಕಳಿಗೆ ಶಾಲಾ ಕಾಲೇಜು ತೆರಳಲು ಬಸ್ಸಿನ ಖರ್ಚುವೆಚ್ಚಗಳನ್ನು ಭರಿಸುವುದಕ್ಕೆ ಕಷ್ಟವಾಗುತ್ತದೆ. ಇಂತಹ ಸೂಕ್ಷ್ಮತೆ ಅರಿತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿಧ್ಯಾರ್ಥಿಗಳಿಗೆ ಉಚಿತವಾಗಿ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಿದೆ. ಹೌದು ವಿಧ್ಯಾರ್ಥಿಗಳು ಕಳೆದ ವರ್ಷ ಪಡೆದ ಬಸ್ ಪಾಸ್ ಬಳಸಿ ಈ ವರ್ಷವೂ ಕೂಡ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸ ಬಹುದಾಗಿದೆ.

ಹಳೆಯ ಬಸ್ ಇಲ್ಲದೆ ಹೋದಲ್ಲಿ ನೀವು ಶಾಲೆಗೆ ದಾಖಲಾಗಿರುವ ಮತ್ತು ಶಾಲಾ ಶುಲ್ಕ ಪಾವತಿಯ ರಶೀದಿಯನ್ನು ಬಸ್ ಕಂಡಕ್ಟರ್ ಗೆ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಬಿಎಂಟಿಸಿ ಆದೇಶ ಹೊರಡಿಸಿದೆ. ಕೊರೋನ ವೈರಸ್ ಪರಿಣಾಮ ಕೊವಿಡ್ ನಿಯಂತ್ರಣ್ಕಕಾಗಿ ಹತ್ತು ತಿಂಗಳಕಾಲ ಮುಚ್ಚಿದ ಶಾಲಾ ಕಾಲೇಜಿನ ಬಾಗಿಲು ಮತ್ತೆ ತೆರೆದಿವೆ, ಮಕ್ಕಳ ಭವಿಷ್ಯ ಮತ್ತು ಅವರ ಆರೋಗ್ಯದ ದೃಷ್ಠಿಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕೋವಿಡ್ ನಿಯಂತ್ರಣದ ಎಲ್ಲಾ ರೀತಿಯ ಮಾರ್ಗಸೂಚಿಗಳನ್ನು ಕಟ್ಟುಬದ್ದವಾಗಿ ಎಚ್ಚರ ವಹಿಸಿಸೂಕ್ತ ಕ್ರಮಗಳನ್ನುವಹಿಸಲಾಗಿದೆ. ಕೊರೋನ ಓಡಿಸೋಣ ಮಕ್ಕಳನ್ನು ಓದಿಸೋಣ ಎಂಬ ಘೋಷವಾಕ್ಯದಿಂದ ಮತ್ತೆ ಮಕ್ಕಳನ್ನು ಶಾಲೆಗೆ ಕರೆತರಲು ಡಾ.ಕೆ.ಸುಧಾಕರ್ ಅವರು ಕರೆ ಕೊಟ್ಟಿದ್ದಾರೆ.

%d bloggers like this: