ಜನವರಿ 15ರಿಂದ ಎಲ್ಲಾ ಕಾಲೇಜುಗಳು ಆರಂಭ! ರಾಜ್ಯದಲ್ಲಿರುವ ಎಂಜಿನಿಯರಿಂಗ್, ಡಿಪ್ಲೋಮಾ, ಸ್ನಾತಕೋತ್ತರ ಪದವಿಯ ಜೊತೆಗೆ ಪಿಯುಸಿ ತರಗತಿಯ ಎಲ್ಲಾ ಕಾಲೇಜುಗಳನ್ನು ಇದೇ ಜನವರಿ 15ರಿಂದ ಆಫ್ ಲೈನ್ ತರಗತಿಯನ್ನು ಪುನರಾರಂಭಿಸಲಾಗುತ್ತಿದೆ. ಕಾಲೇಜುಗಳ ಆರಂಭದ ವಿಚಾರವಾಗಿ ಮಾತನಾಡಿದ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ್ ಅವರು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಈಗಾಗಲೇ ಅಂತಿಮ ಪದವಿ ಮತ್ತು ದ್ವಿತೀಯ ಪಿಯುಸಿಯ ಆಫ್ಲೈನ್ ತರಗತಿಗಳು ಯಾವುದೇ ತೊಂದರೆಯಿಲ್ಲದೆ ಸುಗಮವಾಗಿ, ಸುರಕ್ಷಿತವಾಗಿ ಮಾರ್ಗಸೂಚಿಯನ್ನು ಅನುಸರಿಸಿ ಯಶಸ್ವಿಯಾಗಿ ನಡೆಯುತ್ತಿವೆ. ಇದೇ ರೀತಿಯಾಗಿ ಎಲ್ಲಾ ತರಗತಿಯ ವಿಧ್ಯಾರ್ಥಿಗಳಿಗೂ ಸಹ ಇದೇ 15ರಿಂದ ಆಫ್ಲೈನ್ ತರಗತಿ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸೋಮವಾರ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೇವಲ ಕಾಲೇಜು ಮಾತ್ರಗಳಲ್ಲದೆ ಎಲ್ಲಾ ಹಾಸ್ಟೇಲ್ ಗಳನ್ನು ತೆರೆಯಲಿದ್ದು, ದೂರದ ಸ್ಥಳಗಳಿಂದ ಬರುವ ವಿಧ್ಯಾರ್ಥಿಗಳಿಗೆ ಶೀಘ್ರದಲ್ಲಿಯೇ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಜೊತೆಗೆ ಕಾಲೇಜುಗಳಲ್ಲಿನ ಕ್ಯಾಂಟೀನ್ ಗಳು, ಗ್ರಂಥಾಲಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮಾಜ ಕಲ್ಯಾಣ ಇಲಾಖೆ ನೀಡಿರುವ ಮಾರ್ಗಸೂಚಿಯ ಪ್ರಕಾರ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಒಟ್ಟಾರೆ ಕೊರೋನಯಿದ್ದ ಕಾರಣ ಇಷ್ಟು ದಿನಗಳಕಾಲ ಮನೆಯಲ್ಲಿಯೇ ಆನ್ಲೈನ್ ಕ್ಲಾಸ್ ಮೂಲಕ ಪಾಠ ಕೇಳುತ್ತಿದ್ದ ಇನ್ನು ಮುಂದೆ ಮತ್ತೆ ಎಂದಿನಂತೆ ಕಾಲೇಜಿನಲ್ಲಿ ಪಾಠ ಕೇಳುವ ಅವಕಾಶ ಜನವರಿ 15 ರಿಂದ ಸಿಗುತ್ತಿದೆ. ಕೆಲವು ವಿಧ್ಯಾರ್ಥಿಗಳು ಕಾಲೇಜಿಗೆ ಬರಲು ಉತ್ಸುಕರಾಗಿದ್ದರೆ, ಪೋಷಕರು ಮಾತ್ರ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳಿಸಲು ಅನುಮಾನದಿಂದ ನೋಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಉಪನ್ಯಾಸಕರನ್ನು ಸೇರಿ ಶಿಕ್ಷಕರಿಗೇ ಕೊರೋನ ಸೋಂಕು ತಗುಲುತ್ತಿರುವ ಕಾರಣ ಪೋಷಕರಲ್ಲಿ ಇನ್ನು ಸಹ ಭಯ ಹೋಗಿಲ್ಲ ಎನ್ನಬಹುದಾಗಿದೆ.