ಕೋರೋಣ ಹೆಮ್ಮಾರಿಯ ಅಟ್ಟಹಾಸಕ್ಕೆ ಅಕ್ಷರಶಃ ಇಡೀ ಜಗತ್ತು ನಲುಗಿ ಹೋಗಿತ್ತು. ಈ ಶತಮಾನದಲ್ಲಿ ಕಂಡುಕೇಳರಿಯದ ಸಾವು-ನೋವುಗಳನ್ನು, ಕಪ್ಪು ಛಾಯೆಯನ್ನು ಮತ್ತು ಸ್ತಬ್ಧತೆಯನ್ನು ನಾವೆಲ್ಲರೂ ಕಂಡೆವು. ನಮ್ಮ ದೇಶದಲ್ಲಿ ಅದೃಷ್ಟವಶಾತ್ ಕೋರೋಣ ಪ್ರಕರಣಗಳಲ್ಲಿ ಇಳಿಕೆಯ ಸಂಖ್ಯೆ ಕಾಣುತ್ತಿದೆ. ಆದರೆ ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇನ್ನೂ ಅದರ ಆರ್ಭಟ ಹಾಗೆಯೇ ಮುಂದುವರೆದಿದೆ. ಕಳೆದ 10ತಿಂಗಳಿಂದ ಪ್ರತಿಯೊಂದು ಕಾರ್ಯಗಳು ನಮ್ಮ ದೇಶದಲ್ಲಿ ಸಂಪೂರ್ಣವಾಗಿ ನಿಂತುಹೋಗಿದ್ದವು, ಆದರೆ ನಿಧಾನವಾಗಿ ಒಂದೊಂದೇ ಈಗ ತೆರೆದುಕೊಳ್ಳುತ್ತಿವೆ.

ಅದರಲ್ಲೂ ಶಾಲೆಯ ಆರಂಭದ ಬಗ್ಗೆ ಚರ್ಚೆಗಳು ಭರದಿಂದ ನಡೆದಿದೆ. ಹೌದು ಶಿಕ್ಷಣವೆಂದರೆ ಅದು ಒಬ್ಬರ ಜೀವನದಲ್ಲಿ ಅತಿಮುಖ್ಯವಾದ ಒಂದು ಭಾಗ. ಈ ಮಹಾಮಾರಿ ವೈರಸ್ ಗೆ ಹೆದರಿ ಎಲ್ಲ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು ಇದರಿಂದ ಅನೇಕರ ಶೈಕ್ಷಣಿಕ ಜೀವನ ಅಸ್ತವ್ಯಸ್ತವಾಗಿದ್ದು ನಮ್ಮೆಲ್ಲರಿಗೂ ಗೊತ್ತೇ ಇದೆ. ಕೋರೋಣ ಇಳಿಮುಖದತ್ತ ಸಾಗುತ್ತಿರುವ ಕಾರಣ ಮತ್ತೆ ಈಗ ಶಾಲಾ ಕಾಲೇಜುಗಳ ಆರಂಭದ ಸಾಧ್ಯತೆಗಳು ಹೆಚ್ಚಾಗಿವೆ. ಇದರ ನಡುವೆ ನಮ್ಮ ರಾಜ್ಯದ ಆರೋಗ್ಯ ಸಚಿವರಾದ ಡಾಕ್ಟರ್ ಕೆಸುಧಾಕರ್ ಅವರು ಮಾತನಾಡಿ ಶಾಲಾ ಕಾಲೇಜುಗಳ ಆರಂಭದ ಬಗ್ಗೆ ಸುಳಿವು ನೀಡಿದ್ದಾರೆ. ಹೌದು ಈ ವರ್ಷಾಂತ್ಯಕ್ಕೆ ವಿವಿಧ ಇಲಾಖೆಯ ಸಭೆಯನ್ನು ಕರೆದು ಮುಂಜಾಗೃತ ಕ್ರಮಗಳನ್ನು ಅನುಸರಿಸಿ ಶಾಲಾ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಸುದೀರ್ಘವಾಗಿ ಚರ್ಚೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.



ಡಿಸೆಂಬರ್ ನ ಕೊನೆಯ ವಾರ ಸೋಂಕಿತರ ಪ್ರಮಾಣವನ್ನು ಅವಲೋಕಿಸಿ ಹತ್ತು ಮತ್ತು 12ನೇ ತರಗತಿಯನ್ನು ಶುರು ಮಾಡಲು ಈಗಾಗಲೇ ತಾಂತ್ರಿಕ ಸಮಿತಿ ಸಲಹೆ ನೀಡಿದೆ ಹೀಗಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ 10 ಮತ್ತು 12ನೇ ತರಗತಿಗಳನ್ನು ಆರಂಭಿಸುವ ವಿಷಯದ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಆರೋಗ್ಯ ಸಚಿವರ ಮಾತನ್ನು ಕೇಳಿದಾಗ ಹೊಸವರ್ಷದ ಮೊದಲ ತಿಂಗಳ ದ್ವಿತೀಯಾರ್ಧದಲ್ಲಿ ಮುಖ್ಯ ಹಂತಗಳದ ಹತ್ತು ಮತ್ತು 12ನೇ ತರಗತಿಗಳು ಪ್ರಾರಂಭವಾಗುವ ಎಲ್ಲ ಸಾಧ್ಯತೆಗಳಿವೆ.