ವಿಕ್ರಾಂತ್ ರೋಣ ಚಿತ್ರಕ್ಕೆ ಸಿಕ್ತು ಬರೊಬ್ಬರಿ 100 ಕೋಟಿಗಳ ದೊಡ್ಡ ಆಫರ್ 

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರಕ್ಕೆ ಓಟಿಟಿ ಸಂಸ್ಥೆಗಳಿಂದ ಭರ್ಜರಿ ಆಫರ್! ಓಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಕನ್ನಡ ಸಿನಿಮಾಗಳಿಗೆ ಬೆಲೆ ಇಲ್ಲ‌. ಈ ಕಾರ್ಪೋರೇಟ್ ಸೆಕ್ಟರ್ ಗಳಂತಿರುವ ಈ ಓಟಿಟಿಗಳಲ್ಲಿ ಪರಭಾಷೆಯ ಚಿತ್ರಗಳಿಗೆ ಮಾತ್ರ ಮನ್ನಣೆ ಕನ್ನಡ ಸಿನಿಮಾಗಳಿಗೆ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿತ್ತು. ಇದೀಗ ಕನ್ನಡದ ಈ ಪ್ಯಾನ್ ಇಂಡಿಯಾ ಚಿತ್ರ ಕೊಂಡು ಕೊಳ್ಳಲು ಓಟಿಟಿ ಪ್ರತಿಷ್ಟಿತ ಸಂಸ್ಥೆಗಳು ಭಾರಿ ಪೈಪೋಟಿ ನಡೆಸುತ್ತಿವೆ. ಹೌದು ಇತ್ತೀಚೆಗೆ ಕನ್ನಡ ಸಿನಿಮಾಗಳು ಯಾವ ಪರಭಾಷೆ ಇರಲಿ ವಿದೇಶಿ ಸಿನಿಮಾಗಳಿಗೂ ಕೂಡ ಕಡಿಮೆ ಇಲ್ಲದಂತೆ ತಯಾರಾಗುತ್ತಿದ್ದಾವೆ. ಅದು ಚಿತ್ರದ ಕಥೆ, ಸಿನಿಮಾ ಮೇಕಿಂಗ್, ಕ್ಯಾಮೆರಾ ಜೊತೆಗೆ ಅತ್ಯಾಧುನಿಕ ತಾಂತ್ರಿಕತೆ ಹೀಗೆ ಎಲ್ಲದರಲ್ಲಿಯೂ ಗುಣಮಟ್ಟ ಅದ್ದೂರಿತನವನ್ನ ಕಾಣಬಹುದಾಗಿರುತ್ತದೆ.

ಲಕ್ಷ ಕೋಟಿಗಳಲ್ಲಿ ನಿರ್ಮಾಣ ಆಗುತ್ತಿದ್ದ ಕನ್ನಡ ಸಿನಿಮಾಗಳು ಇದೀಗ ನೂರು ಕೋಟಿ ವೆಚ್ಚದಲ್ಲಿ ಸಿನಿಮಾ ತಯಾರಾಗುತ್ತಿದ್ದಾವೆ. ಅಂತಹ ಸಿನಿಮಾಗಳ ಪೈಕಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಕೂಡ ಒಂದಾಗಿದೆ. ಹೌದು ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಈ ವರ್ಷದ ಫೆಬ್ರವರಿ 24ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಅಧಿಕೃತವಾಗಿ ಘೋಷಿಸಿದೆ. ಇಡೀ ಭಾರತೀಯ ಚಿತ್ರರಂಗವೇ ಕುತೂಹಲದಿಂದ ಕಾಯುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಸಿನಿಮಾದ ತಂಡ ಈಗಾಗಲೇ ತನ್ನ ಎಲ್ಲಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಮುಗಿಸಿಕೊಂಡು ರಿಲೀಸ್ಗೆ ಸಿದ್ದವಾಗಿದೆ. ಅನೂಪ್ ಭಂಡಾರಿ ಅವರ ಸಾರಥ್ಯದಲ್ಲಿ ತಯಾರಾಗಿರುವ ಈ ವಿಕ್ರಾಂತ್ ರೋಣ ಸಿನಿಮಾ ಈಗಾಗಲೇ ಟೀಸರ್ ಟ್ರೇಲರ್ ಮತ್ತು ವಿಭಿನ್ನ ಪೋಸ್ಟರ್ ಮೂಲಕ ಭಾರಿ ಸದ್ದು ಮಾಡಿದೆ.

ಬಿ.ಅಜನೀಶ್ ಲೋಕನಾಥ್ ವಿಕ್ರಾಂತ್ ರೋಣ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದು, ನಿರ್ಮಾಪಕ ಜಾಕ್ ಮಂಜು ಅವರು ಬಂಡವಾಳ ಹೂಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ವಿಕ್ರಾಂತ್ ರೋಣ ಸಿನಿಮಾವನ್ನು ಪ್ರತಿಷ್ಟಿತ ಓಟಿಟಿ ಸಂಸ್ದೆಗೆ ಮಾರಾಟ ಮಾಡಲಾಗುತ್ತದೆ ಎಂದು ಸುದ್ದಿ ಕೇಳಿ ಬಂದಿತ್ತು‌. ಅದರಂತೆ ನಿರ್ಮಾಪಕ ಜಾಕ್ ಮಂಜು ಕೂಡ ವಿಕ್ರಾಂತ್ ರೋಣ ಚಿತ್ರವನ್ನು ಓಟಿಟಿಗೆ ಮಾರಾಟ ಮಾಡುತ್ತೇವೆ. ಆದರೆ ಅದಕ್ಕಿಂತ ಮೊದಲು ದೇಶಾದ್ಯಂತ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದರು.

ಕೆಲವು ದಿನಗಳ ಹಿಂದೆಯಷ್ಟೇ ವಿಕ್ರಾಂತ್ ರೋಣ ಸಿನಿಮಾವನ್ನು ಜೀ಼ ಫೈವ್ ಓಟಿಟಿ ಪ್ಲಾಟ್ ಫಾರ್ಮ್ ಮತ್ತು ಸ್ಯಾಟ್ ಲೈಟ್ ರೈಟ್ಸ್ ಹಕ್ಕನ್ನು ಜೀ಼ ಕನ್ನಡ ವಾಹಿನಿ ಬರೋಬ್ಬರಿ ಇಪ್ಪತ್ನಾಲ್ಕು ಕೋಟಿಗೆ ಖರೀದಿ ಮಾಡಿದೆ ಎಂಬ ಬ್ರೇಕಿಂಗ್ ಸುದ್ದಿ ಹೊರ ಬಿದ್ದಿತ್ತು. ಇದೀಗ ಮತ್ತೊಂದು ಅಚ್ಚರಿಯ ಸುದ್ದಿ ಏನಪ್ಪಾ ಅಂದರೆ ವಿಕ್ರಾಂತ್ ರೋಣ ಚಿತ್ರ ಕೊಂಡುಕೊಳ್ಳಲು ಮತ್ತೊಂದು ಪ್ರಸಿದ್ದ ಓಟಿಟಿ ಸಂಸ್ದೆ ನೂರು ಕೋಟಿ ಆಫರ್ ನೀಡುತ್ತಿದೆಯಂತೆ. ಇತ್ತ ದೇಶದಲ್ಲಿ ಕೋವಿಡ್ ಮೂರನೇ ಅಲೆ ಜೋರಾಗಿ ಹಬ್ಬಿದ್ದು ನೂರು ಇನ್ನೂರು ಇದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ ಐದು ಸಾವಿರ ಕೋಟಿ ಗಡಿ ದಾಟಿದೆ. ಇಂತಹ ಆತಂಕಕಾರಿ ಬೆಳವಣಿಗೆಯ ಸಂದರ್ಭದಲ್ಲಿ ಬಹು ಕೋಟಿ ವೆಚ್ಚದ ವಿಕ್ರಾಂತ್ ರೋಣ ಸಿನಿಮಾವನ್ನು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವುದು ಸೂಕ್ತವೇ ಎಂಬ ಪ್ರಶ್ನೆ ಎದುರಾಗಿದೆ.

ಒಂದೆಡೆ ದೇಶಾದ್ಯಂತ ಅಪಾರ ಅಭಿಮಾನಿಗಳನ್ನ ಹೊಂದಿರು ಕಿಚ್ಚ ಸುದೀಪ್ ಅವರ ಚಿತ್ರ ಓಟಿಟಿ ಯಲ್ಲಿ ರಿಲೀಸ್ ಆಗುವುದು ಅಷ್ಟರ ಮಟ್ಟಿಗೆ ಸರಿ ಕಾಣುವುದಿಲ್ಲ ಎಂಬುದು ಹಲವರ ಅಭಿಪ್ರಾಯ. ಇದರ ಜೊತೆಗೆ ಜಾಕ್ ಮಂಜು ಅವರು ಹೇಳುವಂತೆ ಫ್ಯಾಂಟಸಿ ಕಥೆಯಾಧಾರಿತ ವಿಕ್ರಾಂತ್ ರೋಣ ಚಿತ್ರವನ್ನು ತ್ರೀಡಿ ತಂತ್ರಜ್ಞಾನದಲ್ಲಿ ತಯಾರಿಸಲಾಗಿದೆಯಂತೆ. ಈ ಅದ್ದೂರಿತನದ ಚಿತ್ರವನ್ನು ಓಟಿಟಿ ಯಲ್ಲಿ ರಿಲೀಸ್ ಮಾಡಬೇಕಾ ಅಥವಾ ನೇರವಾಗಿ ಥಿಯೇಟರ್ ನಲ್ಲಿಯೇ ರಿಲೀಸ್ ಮಾಡಬೇಕ ಎಂಬುದನ್ನ ನಾಯಕ ನಟ ಸುದೀಪ್ ಅವರ ಬಳಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ನಿರ್ಮಾಪಕ ಜಾಕ್ ಮಂಜು ತಿಳಿಸಿದ್ದಾರೆ. ಒಟ್ಟಾರೆಯಾಗಿ ಇಡೀ ಭಾರತೀಯ ಚಿತ್ರರಂಗ ಮತ್ತು ಕಿಚ್ಚನ ಅಭಿಮಾನಿಗಳು ವಿಕ್ರಾಂತ್ ರೋಣ ಚಿತ್ರವನ್ನು ಕಣ್ತುಂಬಿ ಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

%d bloggers like this: