ಟೀಮ್ ಇಂಡಿಯಾ ಕ್ಯಾಪ್ಟನ್ ಹಾಗು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿ ಅವರು ಜಗತ್ತಿನ ಅತ್ಯಂತ ಶ್ರೇಷ್ಠ ಕ್ರಿಕೆಟರ್ ಎಂದು ಸ್ವತಃ ದಿಗ್ಗಜರೇ ಹೇಳುತ್ತಾರೆ, ಕೊಹ್ಲಿ ಕ್ರಿಕೆಟ್ ಜಗತ್ತಿನ ರನ್ ಮಷೀನ್, ಕೊಹ್ಲಿಗೆ ಶತಕಗಳು ನೀರು ಕುಡಿದಂತೆ. ನಿನ್ನೆಯಷ್ಟೇ ಕೊಹ್ಲಿ ಅವರು ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ದಾಖಲೆ ಬರೆದು ಕಿಂಗ್ ಆದರು. ನಿನ್ನೆ ನಡೆದ ಆಸ್ಟ್ರೇಲಿಯಾ ಹಾಗು ಭಾರತ ನಡುವಿನ ಏಕದಿನ ಪಂದ್ಯದಲ್ಲಿ ಬರೋಬ್ಬರಿ ಹನ್ನೆರಡು ಸಾವಿರ ರನ್ ಕಲೆ ಹಾಕುವ ಮೂಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಕಿಂಗ್ ಅನಿಸಿಕೊಂಡರು. ಈಗ ಕೊಹ್ಲಿ ಅವರ ಬಗ್ಗೆ ಹೇಳಬೇಕಂದರೆ ವಿರಾಟ್ ಅವರು ಕೇವಲ ಮೈದಾನದಲ್ಲಿ ಅಷ್ಟೇ ಅಲ್ಲ ಹೊರ ಜಗತ್ತಿನಲ್ಲೂ ಸಹ ಕಿಂಗ್. ವಿರಾಟ್ ಕೊಹ್ಲಿ ಅವರ ಹೆಸರು ಬ್ರಾಂಡ್ ಆಗಿ ಸೆಟ್ಟಾಗಿದೆ ಹಾಗು ಜಾಹಿರಾತುಗಳಿಂದಲೇ ವಿರಾಟ್ ಅವರು ನೂರಾರು ಕೋಟಿ ಆಸ್ತಿ ಗಳಿಸುತ್ತಾರೆ.

ವಿರಾಟ್ ಕೊಹ್ಲಿ ಅವರು ಜಾಹಿರಾತು ಹಾಗು ಕ್ರಿಕೆಟ್ ಇಂದ ಸುಮಾರು 900ಕೋಟಿ ಆದಾಯ ಗಳಿಸುತ್ತಾರೆ ಎಂದು ಮೂಲಗಳು ತಿಳಿಸಿವೆ, ಅಬ್ಬಾ ಒಂಬೈನೂರು ಕೋಟಿ ಒಬ್ಬ ಕ್ರಿಕೆಟ್ ಆಟಗಾರನ ಆದಾಯವೆಂದರೆ ಕ್ರಿಕೆಟ್ ಅನ್ನು ಕೊಹ್ಲಿ ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ ಅಂತ ತಿಳಿಯಿರಿ. ಇಷ್ಟು ಕೋಟಿ ಮಾರುಕಟ್ಟೆ ಮೌಲ್ಯವನ್ನು ಸದ್ಯದಲ್ಲಿ ಕೊಹ್ಲಿ ಅವರು ಹೊಂದಿದ್ದಾರೆ. ಇನ್ನು ಇವರ ಪತ್ನಿ ಹಾಗು ಬಾಲಿವುಡ್ ನಟಿ ಅನುಷ್ಕಾ ಶರ್ಮ ಅವರ ಮೌಲ್ಯವು ಎತ್ತರದಲ್ಲಿದೆ. ಅನುಷ್ಕಾ ಶರ್ಮ ಅವರ ಮಾರುಕಟ್ಟೆ ಮೌಲ್ಯವು ಸಹ ಸುಮಾರು ಮುನ್ನುರು ಕೋಟಿಯಷ್ಟು ಇದೆ ಎಂದು ಹೇಳಲಾಗುತ್ತಿದೆ. ಅಂದರೆ ವಿರುಷ್ಕಾ ದಂಪತಿಗಳ ಮಾರ್ಕೆಟ್ ಆದಾಯ ಸುಮಾರು 1200ಕೋಟಿಯಷ್ಟು ಇದೆ ಎಂದರ್ಥ.

ಇನ್ನು ಸದ್ಯಕ್ಕೆ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗು ಭಾರತ ಟೂರ್ನಮೆಂಟ್ ಬಗ್ಗೆ ಹೇಳಬೇಕೆಂದರೆ, ಮೂರು ಏಕದಿನ ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಭಾರತ ಸೋತು ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಅವರು ಉತ್ತಮ ರನ್ ಗಳಿಸಿದ್ದರು ಹಾಗು ಅದೇ ಪಂದ್ಯದ ಮೂಲಕ ಏಕದಿನ ಪಂದ್ಯಗಳಲ್ಲಿ ಹನ್ನೆರಡು ಸಾವಿರ ರುನ್ನುಗಳನ್ನು ಪೂರೈಸಿದರು. ಇಂದಿನಿಂದ ಮತ್ತೆ ಇಪ್ಪತ್ತು ಓವರುಗಳ ಪಂದ್ಯ ಶುರುವಾಗಲಿದ್ದು ಜನೇವರಿಯಲ್ಲಿ ಅನುಷ್ಕಾ ಅವರ ಹೆರಿಗೆ ವಿಷಯವಾಗಿ ಕೊಹ್ಲಿ ಅವರು ಟೆಸ್ಟ್ ಪಂದ್ಯದ ಅರ್ಧದಲ್ಲೇ ವಾಪಸ್ ಭಾರತಕ್ಕೆ ಬರಲಿದ್ದಾರೆ.