ಸದ್ಯಕ್ಕೆ ವಿರಾಟ್ ಕೊಹ್ಲಿ ಎಂಬ ಒಂದು ಹೆಸರು ಇಡೀ ವಿಶ್ವ ಕ್ರಿಕೆಟ್ ಅನ್ನೇ ಆಳುತ್ತಿದೆ. ಹೌದು ವಿಶ್ವ ಕ್ರಿಕೆಟ್ ನ ಕಿಂಗ್ ಆಗಿ ಮೆರೆಯುತ್ತಿರುವ ವಿರಾಟ್ ಕೊಹ್ಲಿ ನಿಜಕ್ಕೂ ಒಬ್ಬ ಅದ್ಬುತ ಅಥ್ಲೀಟ್ ಆಗಿದ್ದಾರೆ. ಅವರ ಫಿಟ್ನೆಸ್ ಕ್ರಿಕೇಟ್ ಬಗೆಗಿನ ಅವರ ಬದ್ಧತೆ ಮತ್ತು ಶ್ರದ್ಧೆ ಯಾರಿಗೆ ತಾನೆ ಸ್ಪೂರ್ತಿ ಆಗುವುದಿಲ್ಲ ಹೇಳಿ. ವಿರಾಟ್ ವಿಶ್ವದ ಎಷ್ಟೋ ಶ್ರೇಷ್ಠ ಬೌಲರ್ ಗಳಿಗೆ ಕೂಡ ಬೆವರಿಳಿಸಿದ ಆಟಗಾರ, ಅವರ ಅದ್ಭುತ ಬ್ಯಾಟಿಂಗಿಗೆ ಮನಸೋಲದವರೇ ಇಲ್ಲ. ಹನ್ನೆರಡು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕಿಂಗ್ ಕೊಹ್ಲಿ ಮರಳಿ ಹಿಂದೆ ನೋಡಲೇ ಇಲ್ಲ. ವೃತ್ತಿ ಜೀವನ ಆರಂಭವಾದಾಗಿನಿಂದ ಹಿಡಿದು ಇಲ್ಲಿಯವರೆಗೆ ಒಂದೇ ರೀತಿಯ ಕನ್ಸಿಸ್ಟೆನ್ಸಿ ಮೆಂಟೇನ್ ಮಾಡಿಕೊಂಡು ಬಂದಿದ್ದಾರೆ ವಿರಾಟ್.

ವಿಶ್ವದ ಎಲ್ಲ ಕ್ರಿಕೇಟ್ ಆಡುವ ದೇಶಗಳ ವಿರುದ್ಧವೂ ಅವರು ಅಟ್ಟಹಾಸ ಮೆರದಿದ್ದಾರೆ. ಈ ಕಾರಣದಿದಲೇ ವಿರಾಟ್ ಅವರಿಗೆ ವಿಶ್ವಾದ್ಯಂತ ಕೋಟಿ ಕೋಟಿ ಅಭಿಮಾನಿಗಳು ಇರುವುದು. ಸ್ವತಃ ಕ್ರಿಕೇಟ್ ದಂತಕಥೆಗಳೇ ವಿರಾಟ್ ಅವರ ಅಪ್ಪಟ ಅಭಿಮಾನಿಗಳಗಿದ್ದರೆ. ಅದು ವಿರಾಟ್ ಅವರಿಗರುವ ಶ್ರೇಷ್ಠತೆ ಎನ್ನಬಹುದು. ಆದರೆ ಇಷ್ಟೆಲ್ಲಾ ಸಾಧನೆಗೈದ ವಿರಾಟ್ ಇದೀಗ ಒಬ್ಬ ಹೊಸ ಪ್ರತಿಭೆಯ ಎದುರು ಬ್ಯಾಟ್ ಬೀಸಲು ಪರದಾಡುತ್ತಿದ್ದಾರೆ. ಹೌದು ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿರಾಟ್ ಆಸ್ಟ್ರೇಲಿಯ ತಂಡದ ಹೊಸ ಆಟಗಾರ ಮಿಶೆಲ್ ಸ್ವೆಪ್ಸನ್ ಎದುರು ಸ್ವಲ್ಪ ಪರದಾಡಿದನತೆತೆ ಕಂಡುಬಂತು.



ಹೌದು ಎಲ್ಲಾ ಬೌಲರ್ ಗಳನ್ನು ಚಚ್ಚಿ ಬಿಸಾಕಿದ್ದ ಕಿಂಗ್ ಕೊಹ್ಲಿ ಸ್ವೆಪ್ಸನ್ ಎದುರು ರನ್ಗಳಿಸಲು ಸ್ವಲ್ಪ ಕಷ್ಟ ಪಡಬೇಕಾಯಿತು. ಅಲ್ಲದೆ ಮೊದಲನೇ ಏಕದಿನ ಪಂದ್ಯದಲ್ಲಿ ವಿರಾಟ್ ಇದೆ ಸ್ವೆಪ್ಸನ್ ಗೆ ತಮ್ಮ ವಿಕೆಟ್ ಕೂಡ ಒಪ್ಪಿಸಿ ಪೆವಿಲಿಯನ್ ಗೆ ನಡೆದರು. ಇನ್ನು ವಿಶ್ವದ ಅಗ್ರ ಬ್ಯಾಟ್ಸ್ಮನ್ ಅನ್ನು ವಿಕೆಟ್ ತಗೆದ ಸ್ವೆಪ್ಸನ್ ಖುಷಿ ಹೇಳತೀರದ್ದು. ಅಂತಿಮವಾಗಿ ಏಕದಿನ ಸರಣಿಯನ್ನು ಕೈ ಚೆಲ್ಲಿದ್ದ ಭಾರತ ತಂಡ t20 ಸರಣಿಯಲ್ಲಿ ಮತ್ತೆ ಸರಣಿ ಕೈವಶ ಮಾಡಿಕೊಂಡಿದೆ, ಇನ್ನು ಇದೆ ಡಿಸೆಂಬರ್ 17ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.