ವಿರಾಟ್ ಕೊಹ್ಲಿ ಅವರಿಗೂ ತಿಳಿಸದೇ ಸೀದಾ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದ ಬಿಸಿಸಿಐ

ಅಂತಿಮ ಕ್ಷಣದಲ್ಲಿ ನನ್ನನ್ನು ಏಕದಿನ ಪಂದ್ಯದ ನಾಯಕತ್ವ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ತಿಳಿಸಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಈ ನಿರ್ಧಾರಿದಿಂದ ನನಗೆ ಬೇಸರವಾಗಿರುವುದು ನಿಜ. ಆದರೆ ನಾನು ದಕ್ಷಿಣ ಆಫ್ರಿಕಾದ ವಿರುದ್ದ ನಡೆಯಲಿರುವ ಏಕದಿನ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂಬ ವಿಚಾರ ಸತ್ಯಕ್ಕೆ ದೂರವಾದ ಮಾತು. ನಾನು ನನ್ನ ಭಾರತ ತಂಡದಲ್ಲಿ ನಾಯಕನಾಗಿ ಆಟವಾಡುತ್ತೇನೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ವೀಡಿಯೋ ಮಾಡಿ ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಹರಿ ಬಿಟ್ಟಿದ್ದಾರೆ. ಇದರಿಂದ ಅನಗತ್ಯವಾಗಿ ಸುದ್ದಿಯಾಗಿದ್ದ ಸುಳ್ಳು ಮಾಹಿತಿಗೆ ವಿರಾಟ್ ಕೊಹ್ಲಿ ಸ್ಪಷ್ಟನೆ ನೀಡಿದ್ದಾರೆ.

ಬಿಸಿಸಿಐ ಅಧ್ಯಕ್ಷರಾದ ಗಂಗೂಲಿ ಅವರು ನಾವು ವಿರಾಟ್ ಕೊಹ್ಲಿ ಅವಲಿಗೆ ಏಕದಿನ ಪಂದ್ಯದ ಕ್ಯಾಪ್ಟನ್ಸಿ ಬಿಟ್ಟು ಕೊಡಲು ನಲವತ್ತೆಂಟು ಗಂಟೆಗಳ ಕಾಲ ಅಂದರೆ ಎರಡು ದಿನಗಳ ಕಾಲ ಅವಕಾಶ ನೀಡಲಾಗಿತ್ತು. ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಫೋನ್ ಸ್ವಿಚ್ ಮಾಡಿಕೊಂಡಿದ್ದರು. ಹಾಗಾಗಿ ನಾವೇ ಸ್ವತಃ ಅವರನ್ನ ಏಕದಿನ ಪಂದ್ಯಯ ನಾಯಕತ್ವದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ರೋಹಿತ್ ಶರ್ಮ ಅವರನ್ನ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದೇವೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ. ಆದರೆ ವಿರಾಟ್ ಕೊಹ್ಲಿ ಮಾತ್ರ ನನಗೆ ಬಿಸಿಸಿಐ ಅಂತಿಮ ಕ್ಷಣದಲ್ಲಿ ಒನ್ ಡೇ ಕ್ರಿಕೆಟ್ ಕ್ಯಾಪ್ಟನ್ಸಿಯಿಂದ ಕೈ ಬಿಡಲಿರುವ ವಿಚಾರವನ್ನು ತಿಳಿಸಿದೆ ಇದು ನನಗೆ ಅಸಮಾಧಾನ ತರಿಸಿದೆ ಎಂದು ತಿಳಿಸಿದ್ದಾರೆ. ಜೊತೆಗೆ ನನಗೆ ಮತ್ತು ರೋಹಿತ್ ಶರ್ಮಾ ಅವರ ನಡುವೆ ಯಾವುದೇ ರೀತಿಯಾಗಿ ಅಸಮಾಧಾನವಿಲ್ಲ ಎಂದೂ ಕೂಡ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಗಂಗೂಲಿ ಅಭಿಮಾನಿಗಳು ಮತ್ತು ವಿರಾಟ್ ಕೊಹ್ಲಿ ಅಭಿಮಾನಿಗಳು ಪರಸ್ಪರ ಟೀಕೆ ಮಾಡಿಕೊಳ್ಳುತ್ತಿದ್ದ ಸಂಗತಿಗಳು ಕೂಡ ಇತ್ತೀಚೆಗೆ ವೈರಲ್ ಆಗಿದ್ದವು. ಒಟ್ಟಾರೆಯಾಗಿ ದಕ್ಷಿಣಾ ಅಫ್ರಿಕಾದ ಟೆಸ್ಟ್ ಸರಣಿಯಲ್ಲಿ ಇದೀಗ ಭಾರತ ತಂಡದ ಉಪನಾಯಕನಾಗಿದ್ದ ರೋಹಿತ್ ಶರ್ಮಾ ಅವರು ಸಹ ಇದೀಗ ಗಾಯಗೊಂಡಿದ್ದು ಪಂದ್ಯದಲ್ಲಿ ಭಾಗವಹಿಸುತ್ತಿಲ್ಲ. ಅವರ ಸ್ಥಾನಕ್ಕೆ ಇದೀಗ ಪ್ರಿಯಾಂಕ್ ಪಾಂಚಲ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬುಲಾವ್ ನೀಡಿದೆ. ಇದೆಲ್ಲದರ ನಡುವೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಪಂದ್ಯದಲ್ಲಿ ‌ಭಾಗವಹಿಸುತ್ತಿರುವುದಾಗಿ ತಿಳಿಸಿ ಸುದ್ದಿಯಾಗಿದ್ದ ಊಹಾಪೋಹಗಳಿಗೆ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಡಿಸೆಂಬರ್ 26ರಿಂದ ಸೌತ್ ಆಫ್ರಿಕಾ ಟೆಸ್ಟ್ ಸರಣಿ ಪಂದ್ಯ ಆರಂಭವಾಗಲಿದೆ.

%d bloggers like this: