ವಿರಾಟ್ ಕೊಹ್ಲಿ ಅವರು ವೈಫಲ್ಯ ಅನುಭವಿಸಿದರೂ ಸಹ ಭರ್ಜರಿಯಾಗಿ ಸರಣಿ ಗೆದ್ದ ಭಾರತ

ಬರ್ಮಿಂಗ್ ಹ್ಯಾಂ ನಲ್ಲಿ ನಿನ್ನೆ ಶನಿವಾರ ಭಾರತ ಮತ್ತು ಇಂಗ್ಲೆಂಡ್ ನಡುವೆ ಟಿಟ್ವೆಂಟಿ ಪಂದ್ಯ ನಡೆಯಿತು. ಈ ಪಂದ್ಯ ರೋಚಕವಾಗಿತ್ತು ಅಂತೇಳ‌ಬಹುದು. ಆರಂಭದಲ್ಲಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಇಪ್ಪತ್ತು ಓವರ್ ಗಳಿಗೆ 170 ರನ್ ಗಳಿಸಿ ಎಂಟು ವಿಕೆಟ್ ಗಳನ್ನ ಕಳೆದುಕೊಂಡು ಇಂಗ್ಲೆಂಡ್ ತಂಡಕ್ಕೆ ಬಿಗ್ ಟಾರ್ಗೇಟ್ ನೀಡಿತ್ತು. ಭಾರತ ಕೊಟ್ಟ ಈ ಬಿಗ್ ಟಾರ್ಗೇಟ್ ಬೆನ್ನು ಹತ್ತಿದ ಇಂಗ್ಲೆಂಡ್ ತಂಡ ಕೇವಲ 18 ಓವರ್ ಗಳಲ್ಲಿ 121 ರನ್ ಗಳನ್ನ ಗಳಿಕೆ ಮಾಡುವಲ್ಲಿ ತೃಪ್ತಿಪಡೆದುಕೊಂಡಿತು. ಈ ಮೂಲಕ ಭಾರತ ತಂಡ ಇಂಗ್ಲೆಂಡ್ ವಿರುದ್ದ 49 ರನ್ ಗಳ ಭರ್ಜರಿ ಜಯ ಗಳಿಸಿತು. ಭಾರತ ತಂಡದ ಭುವನೇಶ್ವರ್ ಕುಮಾರ್ ಅವರು ತಮ್ಮ ಮೊದಲ ಎಸೆತದಲ್ಲೇ ಜೇಸನ್ ರಾಯ್ ಅವರನ್ನ ಔಟ್ ಮಾಡಿದರು.

ಯಾವಾಗ ಮೊದಲ ಎಸೆತದಲ್ಲೇ ವಿಕೆಟ್ ಪತನವಾಯಿತೋ ಅದಾಗಲೇ ಇಂಗ್ಲೆಂಡ್ ತಂಡಕ್ಕೆ ಅಶುಭದ ಸೂಚನೆ ಅಂತ ಹೇಳಬಹುದು. ಜೇಸನ್ ರಾಯ್ ಅವರು ಔಟಾಗಿದ್ದೇ ಇವರ ನಂತರ ಸಾಲು ಸಾಲಾಗಿ ಇಂಗ್ಲೆಂಡ್ ತಂಡದ ಆಟಗಾರರು ವಿಕೆಟ್ ಒಪ್ಪಿಸಿದರು. ನಮ್ಮ ಭಾರತ ತಂಡದಲ್ಲಿ ಆರಂಭಿಕವಾಗಿ ಫೀಲ್ಡ್ ಗೆ ಬಂದ ರಿಷಭ್ ಪಂತ್ ಇಪ್ಪತ್ತಾರು ರನ್ ಗಳನ್ನ ಕಲೆ ಹಾಕಿದ್ರು, ಅದೇ ರೀತಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೂವತ್ತೊಂದು ರನ್ ಗಳಿಸಿದ್ರು. ಇವರಿಬ್ಫರ ಕಾಂಬಿನೇಶನ್ ನಲ್ಲಿ ತಂಡಕ್ಕೆ ನಲವತ್ತೊಂಭತ್ತು ರನ್ ಗಳು ಬಂದವು. ರವೀಂದ್ರಾ ಜಡೇಜಾ ಭಾರತಕ್ಕೆ ಒಂದು ರೀತಿ ಬೂಸ್ಟ್ ಆಗಿ ನಿಂತರು ಅಂತ ಹೇಳಬಹುದು.

ಯಾಕಂದ್ರೇ ರವೀಂದ್ರಾ ಜಡೇಜಾ ಅವರು ಕೇವಲ ಇಪ್ಪತ್ತೊಂಭತ್ತು ಎಸೆತಗಳಲ್ಲಿ ನವತ್ತಾರು ರನ್ ಗಳಿಸಿ ತಂಡಕ್ಕೆ ಉತ್ತಮವಾಗಿ ಬಲ ತುಂಬಿದರು. ಅದೇ ರೀತಿ ಭಾರತ ತಂಡದ ಪರವಾಗಿ ಭುವನೇಶ್ವರ್ ಕುಮಾರ್ ಅವರು ಮೂರು ವಿಕೆಟ್ ಪಡೆದ್ರು. ಇನ್ನು ಜಸ್ಪ್ರೀತ್ ಬೂಮ್ರಾ ಎರಡು ವಿಕೆಟ್, ಯಜುರ್ವೇಂದ್ರ ಚಾಹಲ್ ಎರಡು ವಿಕೆಟ್, ಹರ್ಷಲ್ ಪಟೇಲ್ ಮತ್ತು ಹಾರ್ಧಿಕ್ ಪಾಂಡ್ಯ ತಲಾ ಒಂದು ವಿಕೆಟ್ ಗಳಿಸುವ ಮೂಲಕ ಭಾರತ ತಂಡ ಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದೇ ರೀತಿ ಭಾರತ ತಂಡಕ್ಕೆ ಪ್ರಬಲವಾಗಿ ಕ್ರಿಸ್ ಜೊಡಾರ್ನ್ ನಾಲ್ಕು ವಿಕೆಟ್, ರಿಚರ್ಡ್ ಗ್ಲೆಸನ್ ಮೂರು ವಿಕೆಟ್ ಪಡೆದು ಪೈಪೋಟಿ ನೀಡಿದರು. ಒಟ್ಟಾರೆಯಾಗಿ ಭಾರತ ತಂಡ ಇಂಗ್ಲೆಂಡ್ ವಿರುದ್ದ 49 ರನ್ ಗಳ ಭರ್ಜರಿ ಜಯಭೇರಿ ಸಾಧಿಸಿದೆ.

%d bloggers like this: