ವಿರಾಟ್ ಕೊಹ್ಲಿ ಹಾಗೂ ತಮನ್ನಾ ಅವರಿಗೆ ಎದುರಾಯಿತು ಸಂಕಷ್ಟ

ಆನ್ಲೈನ್ ಜೂಜಾಟವಾದ ರಮ್ಮಿ ಗೇಮ್ ಪ್ರಚಾರದ ಜಾಹೀರಾತಿನಲ್ಲಿ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗ ಮತ್ತು ಸ್ಟಾರ್ ನಟ ನಟಿಯರಿಗೆ ಕೇರಳ ಹೈ ಕೋರ್ಟ್ ನೋಟಿಸ್ ನೀಡಿದೆ! ಹೌದು ಆನ್ಲೈನ್ ಗ್ಯಾಂಬ್ಲಿಂಗ್ ಭೂತ ಇದೀಗ ದೇಶಾದ್ಯಂತ ಹಬ್ಬಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸಬಹುದು ಎಂದು ಆಮಿಷ ಹುಟ್ಟಿಸಿ ಯುವ ಪೀಳಿಗೆಯನ್ನು ದಾರಿ ತಪ್ಪಿಸುತ್ತಿವೆ. ಈ ರಮ್ಮಿ ಸರ್ಕಲ್ ಆನ್ಲೈನ್ ಗೇಮ್ ಈಗಾಗಲೇ ಹಲವಾರು ಕುಟುಂಬವನ್ನು ಬೀದಿಗೆ ತಂದಿವೆ. ಹೌದು ರಮ್ಮಿ ಅಂತಹ ಕಂಪನಿಗಳು ಯುವಪೀಳಿಗೆಯನ್ನು ಟಾರ್ಗೆಟ್ ಮಾಡಿ, ತಮ್ಮ ಸಂಸ್ಥೆಯ ಪ್ರಚಾರಕ್ಕಾಗಿ ಜನಪ್ರಿಯತೆ ಪಡೆದಿರುವ ಸಿನಿಮಾ ನಟ ನಟಿಯರು, ಕ್ರಿಕೆಟ್ ಆಟಗಾರರನ್ನು ರಾಯಭಾರಿಯನ್ನಾಗಿ ಮಾಡಿಕೊಂಡು ಪ್ರಚಾರಕ್ಕಾಗಿ ಅವರನ್ನು ಬಳಸಿಕೊಳ್ಳುತ್ತವೆ.

ಆದರೆ ಈ ಕಂಪನಿಗಳ ಆಳ ಅಗಲ ಅರಿಯದೋ ಅಥವಾ ಹಣದ ಆಮಿಷಕ್ಕೋ ಒಳಗಾಗಿ ನಟ ನಟಿಯರು ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಪ್ರಚಾರವೇ ಇವರಿಗೆ ಇಂದು ಮುಳುವಾಗಿದೆ. ಬಹುಬಾಷಾ ನಟಿಯಾದ ಮಿಲ್ಕ್ ಬ್ಯುಟಿ ತಮನ್ನಾ ಭಾಟಿಯಾ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಲೆಯಾಳಂ ನಟ ಅಜು ವರ್ಗೀಸ್ ಅವರಿಗೆ ಕೇರಳದ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧಾರದ ಮೇಲೆ ಈ ಮೂವರಿಗೆ ನೋಟಿಸ್ ನೀಡಿದೆ. ಕೇರಳದಲ್ಲಿ ಆನ್ಲೈನ್ ಜೂಜಾಟಕ್ಕೆ ನಿಷೇಧವಿದೆ.

ಆದರು ಸಹ ಇಲ್ಲಿ ಸಾಮಾಜಿಕ ಜಾಲತಾಣ ಸೇರಿ, ಮಾಧ್ಯಮಗಳಲ್ಲಿ ಬರುವ ರಮ್ಮಿ ಸರ್ಕಲ್ ಜಾಹಿರಾತಿನಲ್ಲಿ ಇವರು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತ್ರಿಶ್ಶೂರ್ ಮೂಲದ ಪಾಲಿ ವರ್ಗೀಸ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಈ ಮೂವರ ವಿರುದ್ದ ದೂರು ನೀಡಿ ಇವರುಗಳ ಹೆಸರನ್ನು ನಮೂದಿಸಿದ್ದರು. ಈ ಅರ್ಜಿಯನ್ನು ಆಲಿಸಿದ ಕೇರಳದ ಹೈ ಕೋರ್ಟ್ ವಿಚಾರಣೆ ನಡೆಸಿ ತಮನ್ನಾ ಭಾಟಿಯಾ, ವಿರಾಟ್ ಕೊಹ್ಲಿ, ಮತ್ತು ಅಜು ವರ್ಗೀಸ್ ಅವರಿಗೆ ಉತ್ತರ ನೀಡುವಂತೆ ನೋಟಿಸ್ ನೀಡಿದ್ದಾರೆ. ಇದ್ಕಕೂ ಮೊದಲು ಮದ್ರಾಸ್ ಹೈಕೋರ್ಟ್ ಬಹುಭಾಷಾ ನಟ ಪ್ರಕಾಶ್ ರಾಜ್, ಕನ್ನಡದ ಕಿಚ್ಚ ಸುದೀಪ್, ರಾಣಾ ದಗ್ಗುಬಾಟಿ ಅವರಿಗೂ ಕೂಡ ರಮ್ಮಿ ಸರ್ಕಲ್ ಗೇಮ್ ಪ್ರಚಾರದ ವಿಚಾರವಾಗಿ ನೋಟಿಸ್ ನೀಡಿತ್ತು.

%d bloggers like this: