ವಿರಾಟ್ ಕೊಹ್ಲಿಗೆ ಬಿಡದೆ ಕಾಡುತ್ತಿದ್ದಾರೆ SRH ತಂಡದ ಈ ಆಟಗಾರ

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಐಪಿಎಲ್ ಪಂದ್ಯಗಳಲ್ಲಿ ರನ್ ಹೊಳೆ ಹರಿಸಲು ಇರುವ ಅಡ್ಡಿಯಿರುವ ವ್ಯಕ್ತಿ ಯಾರ್ ಗೊತ್ತಾ? ಹೌದು ವಿರಾಟ್ ಕೊಹ್ಲಿ ರನ ಬಾರಿಸಲೇಬೇಕು ಅಂತ ಬ್ಯಾಟಿಂಗ್ ಮಾಡಿದ್ರೆ ಅವರನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಅವರ ವಿರಾಟ ರೂಪ ಬ್ಯಾಟಿಂಗ್ ನಲ್ಲಿ ತೋರಿಸುತ್ತಾರೆ. ಮೈದಾನದಲ್ಲಿ ಮೈನವಿರೇಳಿಸುವ ಹಾಗೆ ರನ್ ರೇಟ್ ಓಡುತ್ತಿರುತ್ತದೆ. ಕ್ರಿಕೆಟ್ ಜಗತ್ತಿನ ಎಲ್ಲಾ ದಿಗ್ಗಜರ ಇತಿಹಾಸವನ್ನು ಹಿಂದಿಕ್ಕಿ ಓಡಬಲ್ಲವರು ಕೊಹ್ಲಿ ಅವರಿಗೆ ಸರಿಸಮಾರಾಗಿ ಫೈಟ್ ಕೊಟ್ಟು ದಿಗ್ಗಜರಿಂದ ಶಹಬ್ಬಾಸ್ ಗಿರಿ ಪಡೆದುಕೊಂಡ ವಿರಾಟ್ ಕೊಹ್ಲಿಗೆ ಆ ಒಬ್ಬ ಬೌಲರ್ ನಿಂದ ಇತ್ತೀಚಿನ ಕೆಲವು ವರ್ಷಗಳ ಐಪಿಎಲ್ ಪಂದ್ಯಗಳಲ್ಲಿ ಕೊಂಚ ಎಡುವುತ್ತಿದ್ದಾರೆ.

ವಿರಾಟ್ ಕೊಹ್ಲಿಗಿ ಟಾಂಗ್ ಕೊಡೋ ಬೌಲರ್ ಇರುವುದು ಸನ್ ರೈಸರ್ಸ್ ಹೈದರಬಾದ್ ತಂಡದಲ್ಲಿ ಅವರ ಹೆಸರು ಸಂದೀಪ್ ಶರ್ಮಾ ಇವರು ಕೊಹ್ಲಿಗೆ ಎಸೆದಿರುವ 50ಎಸೆತಗಳಲ್ಲಿ ವಿರಾಟ್ ರನ್ ಕಲೆಹಾಕಿರುವುದು 69 ರನ್ ಗಳು ಮಾತ್ರ ಆದರೆ ಈ ಐವತ್ತು ಎಸೆತಗಳಲ್ಲಿ 2013 ರ ಐಪಿಎಲ್ ಪಂದ್ಯಗಳಿಂದ ಕೊಹ್ಲಿ ಔಟ್ ಆಗಿರುವುದು ಏಳುಬಾರಿ ಅದಕ್ಕಾಗಿಯೇ ಈ ಬಾರಿ ನಡೆಯುವ ಪಂದ್ಯದಲ್ಲಿಯೂ ಇದೇ ತಂತ್ರವನ್ನ ಸನ್ ರೈಸರ್ಸ್ ಹೈದರಾಬಾದ್ ತಂಡ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಯ ಮೇಲೆ ಪ್ರಯೋಗ ಮಾಡಬಹುದು ಎನ್ನಲಾಗಿದೆ. ಸಂದೀಪ್ ಶರ್ಮಾಗೂ ಕೂಡ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಇವರನ್ನು ಹತ್ತಿಕ್ಕಲೇಬೇಕು, ರನ್ ಕೊಡಲೇಬಾರದು ಎಂಬಂತೆ ಮೈದಾನದಲ್ಲಿ ಹೋರಾಟ ನಡೆಸುತ್ತಾರೆ. ಈ ಬಾರಿ ನಡೆಯುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಯಾವ ರೀತಿಯಲ್ಲಿ ಸಂದೀಪ್ ಶರ್ಮಾ ಅವರ ಬೌಲಿಂಗ್ ಅನ್ನು ಎದುರಿಸಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

%d bloggers like this: