ವಿಶೇಷ ಮದುವೆಗೆ ಸಾಕ್ಷಿ ಆಯಿತು ನಮ್ಮ ಬೆಂಗಳೂರು

ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ಸಮಾರಂಭಕ್ಕೆ ವಿಶೇಷ ಸ್ಥಾನ ಮತ್ತು ಮಹತ್ವವನ್ನು ನಮ್ಮ ಸಂಪ್ರದಾಯದಲ್ಲಿ ನೀಡುತ್ತೇವೆ. ಅದರಲ್ಲೂ ಮದುವೆಯ ಸಂದರ್ಭಗಳಲ್ಲಿ ವಿವಿಧವಾದ ಸಂಸ್ಕೃತಿ ಸಂಪ್ರದಾಯಗಳನ್ನು ಆಚರಿಸುತ್ತೇವೆ. ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜನೆ ಮಾಡಿರುತ್ತಾರೆ. ಮದುವೆ ಅದೊಂದು ಸಂಭ್ರಮದ ಹಬ್ಬದ ವಾತಾವರಣ, ಬಂಧು ಬಳಗ, ಮಿತ್ರರು ಹಿತೈಷಿಗಳು ಒಂದೆಡೆ ಸೇರುವ ಸಂತೋಷ ಕೂಟ ಎನ್ನುತ್ತಾರೆ.

ಮದುವೆ ಮಾತುಕತೆ ಆರಂಭ ವಾದ ದಿನಗಳಿಂದಲೇ ಆರಂಭವಾಗುವ ಚರ್ಚೆ ಅಂದರೆ ಅದು ಈ ಊಟ ಅಂದರೆ ಮದುವೆಗೆ ಭೋಜನದ ವ್ಯವಸ್ಥೆ ಯಾವ ಕ್ಯಾಟರಿಂಗ್ ಬೆಸ್ಟ್ ಅನ್ನೋದನ್ನು ಹುಡುಕುತ್ತಾರೆ. ಆದರೆ ಕೊರೋನ ಸಂದರ್ಭ ಇರುವುದರಿಂದ ಸರ್ಕಾರ ಸೂಚಿಸಿದ ಮಾರ್ಗ ಸೂಚಿಯನ್ನು ಅನುಸರಿಸಬೇಕು.

ಮಾರ್ಗಸೂಚಿ ಪ್ರಕಾರ ಕನಿಷ್ಠ ಜನರನ್ನು ಒಳಗೊಂಡು ಶುಭಕಾರ್ಯ ಮತ್ತು ಮದುವೆ ಸಮಾರಂಭಗಳನ್ನು ಮಾಡಿಕೊಳ್ಳಬಹುದಾಗಿದೆ. ಆದ್ದರಿಂದ ತಮಿಳುನಾಡಿನ ಕುಟುಂಬವೊಂದರ ಮದುವೆಯು ಇದೇ ಡಿಸೆಂಬರ್ ಹತ್ತರಲ್ಲಿ ವೈಭವದಿಂದಲೇ ಮದುವೆ ನಡೆಯಬೇಕಿತ್ತು ಆದರೆ, ಮಾರ್ಗ ಸೂಚಿಯ ಪ್ರಕಾರ ಅದು ಸಾಧ್ಯವಾಗದೆ ಮದುವೆಯನ್ನುವೇ ಆನ್ಲೈನ್ ಮುಖಾಂತರ ಮಾಡಿ ಮದುವೆಗೆ ಆಹ್ವಾನಿಸಿದ ಬಂಧು ಬಳಗ, ಮಿತ್ರರಿಗೆ ಎಲ್ಲ ಹಿತೈಷಿಗಳಿಗೆ ಅವರವರ ಮನೆಗಳಿಗೆ ಮದುವೆಯ ಊಟವನ್ನು ಬಾಳೆ ಎಲೆಯ ಸಮೇತವಾಗಿ ಕಳುಹಿಸ ಲಾಗಿದೆ.

ಬಾಳೆ ಎಲೆಯ ಸಮೇತ ಬಂದ ಹಲವು ಬಣ್ಣಬಣ್ಣದ ಡಬ್ಬಿಯ ವಿವಾಹ ದ ಭೋಜನವನ್ನು ಸ್ವೀಕರಿಸಿದ್ದಾರೆ. ಸಮಾರಂಭಕ್ಕೆ ಪಾಲ್ಗೊಳ್ಳಲು ಕೊರೋನ ಅಡ್ಡಿಯಾದ ಕಾರಣ ಬಂಧುಮಿತ್ರರು ಅವರವರ ಮನೆಯಿಂದ ವಧು ವರರಿಗೆ ಆಶೀರ್ವಾದ ಮಾಡಿ ಶುಭ ಹಾರೈಸಿದರು.

%d bloggers like this: