ವಿಶೇಷವಾದ ದುಬಾರಿ ಬೆಲೆಯ ಜೀಪ್ ಖರೀದಿಸಿದ ಭಾರತ ತಂಡದ ಸುಪ್ರಸಿದ್ಧ ಕ್ರಿಕೆಟ್ ಆಟಗಾರ

ಕ್ರಿಕೆಟ್ ಟೀಮ್ ಇಂಡಿಯಾದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರು ಖರೀದಿ ಮಾಡಿದ್ದಂತಹ ವಿಶೇಷವಾದ ಐಕಾನಿಕ್ ನಿಸ್ಸಾನ್ ಜೀಪ್ ಅನ್ನು ಮತ್ತೊಬ್ಬ ಭಾರತೀಯ ಕ್ರಿಕೆಟಿಗ ಇದೀಗ ಖರೀದಿ ಮಾಡಿ ಸುದ್ದಿಯಾಗಿದ್ದಾರೆ. ಹೌದು ಈ ಸಿನಿಮಾ ಸೆಲೆಬ್ರಿಟಿಗಳು ಮತ್ತು ಈ ಕ್ರಿಕೆಟ್ ಸ್ಟಾರ್ ಆಟಗಾರರು ಇಂಪೋರ್ಟೆಡ್ ಕಾರುಗಳ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ಅದರಲ್ಲಿಯೂ ಮಹೇಂದ್ರ ಸಿಂಗ್ ಧೋನಿ ಅವರಿಗೆ ಕಾರ್ ಕ್ರೇಜ಼್ ಕೊಂಚ ಜಾಸ್ತಿನೇ ಇದೆ. ಹೌದು ಇತ್ತೀಚೆಗೆ ತಾನೇ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ 70ರ ದಶಕದ ಲ್ಯಾಂಡ್ ರೋವರ್ ಸೀರಿಸ್3 ಸ್ಟೇಷನ್ ವ್ಯಾಗನ್ ಮಾದರಿಯ ಕಾರನ್ನ ದುಬಾರಿ ಬೆಲೆಗೆ ಖರೀದಿ ಮಾಡಿ ಸುದ್ದಿಯಾಗಿದ್ದರು.

ಧೋನಿ ಅವರಿಗೆ ಎಷ್ಟರ ಮಟ್ಟಿಗೆ ಕಾರ್ ಕ್ರೇಜ಼್ ಇದೆ ಅಂದರೆ ಧೋನಿ ಅವರ ಬಳಿ ಅನೇಕ ದುಬಾರಿ ಐಷಾರಾಮಿ ಕಾರ್ ಗಳನ್ನೊಂದಿದ್ದಾರೆ. ಅವುಗಳಲ್ಲಿ ನಿಸ್ಸಾನ್ ಜೊಂಗಾ ಐಕಾನಿಕ್ ನಿಸ್ಸಾನ್ ಒನ್ ಟನ್ ವಾಹನ ಹೊಂದಿರುವ ಏಕೈಕ ಆಟಗಾರ ಎಂಬ ಹೆಸರನ್ನೊಂದಿದ್ದರು. ಇದೀಗ ಅದೇ ಐಕಾನಿಕ್ ನಿಸ್ಸಾನ್ ಒನ್ ಟನ್ ವಾಹನವನ್ನು ಭಾರತೀಯ ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ಕೂಡ ಖರೀದಿ ಮಾಡಿದ್ದಾರೆ. ಈ ನಿಸ್ಸಾನ್ ಜೀಪಿನ ವಿಶೇಷತೆಗಳನ್ನು ನೋಡುವುದಾದರೆ ಆರು ಸಿಲಿಂಡರ್ ಇಂಜಿನ್ ಹೊಂದಿದ್ದು, 110 ಬಿಎಚ್ಪಿ ಪವರ್ ಮತ್ತು 264 ಎನ್ಎಂ ಟಾರ್ಕ್ ಅನ್ನು ಉತ್ಪಾದನೆ ಮಾಡುವ ಕೆಪಾಸಿಟಿ ಹೊಂದಿದೆ. ಈ ಎಂಜಿನ್ಗೆ3 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಮತ್ತು ಸ್ಟ್ಯಾಂಡರ್ಡ್ ಪ್ಹೋರ್ ವ್ಹೀಲ್ ಡ್ರೈವನೊಂದಿದೆ.

ಇದೀಗ ಈ ನಿಸ್ಸಾನ್ ಜೀಪ್ ಅನ್ನು ಕ್ರಿಕೆಟಿಗ ಸೂರ್ಯ ಕುಮಾರ್ ಯಾದವ್ ಖರೀದಿ ಮಾಡಿದ್ದಾರೆ. ಈ ನಿಸ್ಸಾನ್ ಜೀಪ್ ಧೋನಿ ಅವರ ನಂತರ ಸೂರ್ಯ ಕುಮಾರ್ ಯಾದವ್ ಅವರೇ ಖರೀದಿ ಮಾಡಿದ್ದಾರಂತೆ. ಇನ್ನು ಕಾರ್ ಕ್ರೇಜ಼್ ಹೊಂದಿರುವ ಸೂರ್ಯ ಕುಮಾರ್ ಯಾದವ್ ಅವರ ಬಳಿ ರೇಂಜ್ ರೋವರ್ ವೆಲಾರ್, ಮಿನಿ ಕೂಪರ್, ಎಸ್ ಮತ್ತು ಆಡಿ ಆರ್ಎಸ್5 ಅಂತಹ ಕಾರುಗಳನ್ನ ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ದದ ಟಿಟ್ವೆಂಟಿ ಸರಣಿ ಪಂದ್ಯದ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಎಂಟ್ರಿ ಕೊಟ್ಟ ಸೂರ್ಯ ಕುಮಾರ್ ಯಾದವ್ ಅವರು ಇದೀಗ ದೇಶಿಯ ಕ್ರಿಕೆಟ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ನಲ್ಲಿ 360 ಡಿಗ್ರಿಯಲ್ಲಿ ತನ್ನ ರೋಚಕ ಬ್ಯಾಟಿಂಗ್ ಶೈಲಿಯ ಮೂಲಕ ಗಮನ ಸೆಳೆದಿದ್ದಾರೆ.

%d bloggers like this: