ನಮ್ಮ ದೇಶದಲ್ಲಿ ಬೇರೆ ಬೇರೆ ಭಾಷೆಯ ಚಿತ್ರೋದ್ಯಮಗಳು ಇದ್ದರೂ ಒಟ್ಟಾರೆಯಾಗಿ ದೇಶದ ಜನ ಕೇಳುವುದು ಮನರಂಜನೆಯನ್ನು. ಹೀಗಾಗಿ ಸಿನಿಮಾಕೆ ಯಾವುದೇ ಭಾಷೆಯ ಬೇಧಭಾವ ಇರುವುದಿಲ್ಲ. ಒಟ್ಟಾರೆಯಾಗಿ ಇಡೀ ಭಾರತದ ಚಿತ್ರೋದ್ಯಮ ಒಂದೇ ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ. ಆದರೆ ಇಲ್ಲೊಬ್ಬ ತೆಲುಗು ಚಿತ್ರೋದ್ಯಮದ ನಾಯಕ ನಟ ಎಂದು ಕರೆಸಿಕೊಳ್ಳುವ ವಿಜಯಯ ರಂಗರಾಜ್ ಎಂಬ ವ್ಯಕ್ತಿ ಕನ್ನಡ ಹಾಗೂ ಭಾರತ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರಾದ ಸಾಹಸಸಿಂಹ ಅಭಿನವ ಭಾರ್ಗವ ವಿಷ್ಣುವರ್ಧನ್ ಅವರ ಬಗ್ಗೆ ಬೇಕಾಬಿಟ್ಟಿಯಾಗಿ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ಹೌದು ಬದುಕಿರುವವರೆಗೂ ಸ್ನೇಹಜೀವಿ ಎಂದು ಕರೆಸಿಕೊಂಡ ನಮ್ಮ ವಿಷ್ಣುವರ್ಧನ್ ಅವರಿಗೆ ಈ ಮೂಲಕ ಒಬ್ಬ ಟಾಲಿವುಡ್ ನಟ ಅವಮಾನ ಮಾಡಿದ್ದಾನೆ.

ಇದು ಎಲ್ಲ ಕನ್ನಡಿಗರನ್ನು ಆಕ್ರೋಶಗಳುವಂತೆ ಮಾಡಿದೆ. ತೆಲುಗು ನಾಯಕ ಆಡಿದ ಮಾತಿಗೆ ಕನ್ನಡ ನಟ-ನಟಿಯರು ಸರಿಯಾಗಿ ಚಾಟಿ ಬೀಸಿದ್ದಾರೆ. ಅದರಲ್ಲಿ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಕನ್ನಡದ ಬಾವುಟವನ್ನು ಎಲ್ಲೆಡೆ ಹಾರಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಟ್ವಿಟರ್ ಖಾತೆಯ ಮೂಲಕ ಅದ್ಭುತ ಸಂದೇಶವನ್ನು ನೀಡಿದ್ದಾರೆ. ಹೌದು ನಮ್ಮ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಎಂಬ ಒಂದು ಚಿತ್ರದ ಮೂಲಕ ಇಡೀ ಭಾರತವೆ ಗುರುತಿಸುವಂತಹ ಮತ್ತು ಇಷ್ಟಪಡುವಂತಹ ನಾಯಕನಟನಾಗಿ ಬೆಳೆದದ್ದು ಈಗ ಇತಿಹಾಸ. ಈಗ ನಟ ಯಶ್ ಏನೇ ಮಾತನಾಡಿದರೂ ಅದು ದೇಶಾದ್ಯಂತ ಸುದ್ದಿಯಾಗುತ್ತದೆ. ಹಾಗಾಗಿ ಇಂದು ಯಶ್ ಅವರು ಟ್ವೀಟ್ ಮಾಡಿದ ಸಂದೇಶ ನಿಜಕ್ಕೂ ಶ್ಲಾಘನೀಯವಾಗಿದೆ.

ತಮ್ಮ ಟ್ವೀಟ್ ನಲ್ಲಿ ಅವರು ವಿಷ್ಣುವರ್ಧನ್ ಸರ್ ಒಬ್ಬ ಶ್ರೇಷ್ಠ ನಟ ಮತ್ತು ಮಹಾನ್ ವ್ಯಕ್ತಿತ್ವವುಳ್ಳ ವ್ಯಕ್ತಿ, ಅಂತಹ ದೊಡ್ಡ ಸಾಧಕರನ್ನು ಅವಮಾನಿಸಿ ತಾವು ಹೆಸರು ಮಾಡಿಕೊಳ್ಳಲು ಬಯಸುವ ವ್ಯಕ್ತಿ ಒಬ್ಬ ಕಲಾವಿದನೇ ಅಲ್ಲ. ಕನ್ನಡ ಚಿತ್ರರಂಗ ಬೇರೆಲ್ಲ ಭಾಷೆಯ ಚಿತ್ರರಂಗಗಳೊಡನೆ ಪರಸ್ಪರ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದೆ, ಇದೀಗ ಆ ಸಂಬಂಧ ಇಂತಹ ನೀಚ ವ್ಯಕ್ತಿಗಳಿಂದ ಹಾಳಾಗಬಾರದು, ಆ ವ್ಯಕ್ತಿ ತಾನು ಆಡಿದ ಮಾತಿಗೆ ಕ್ಷಮೆ ಕೇಳಿ ಮಾತನ್ನು ಪಡೆಯಬೇಕು ಎಂಬ ಸುಂದರ ಸಂದೇಶವನ್ನು ಹೇಳಿದ್ದಾರೆ. ಹೌದು ಯಶ್ ಅವರು ಹೇಳಿದ ಮಾತು ಅಕ್ಷರಶಹ ಸತ್ಯ. ಅಣ್ಣಾವ್ರ ಕಾಲದಿಂದಲೂ ನಮ್ಮ ಕನ್ನಡ ಚಿತ್ರರಂಗ ಬೇರೆ ಭಾಷೆಯ ಚಿತ್ರರಂಗದ ಜೊತೆ ಅದ್ಭುತ ಸಂಬಂಧವನ್ನು ಪೋಷಿಸುತ್ತಾ ಬಂದಿದೆ. ಆದರೆ ಈ ರೀತಿಯ ವ್ಯಕ್ತಿಗಳ ಮಾತಿನಿಂದ ಈ ಅತ್ಯುತ್ತಮ ಸಂಬಂಧ ಹಾಳಾಗಬಾರದು.