ವಿಶ್ವ ದಾಖಲೆ ಬರೆದ ಕೆಜಿಎಫ್ ಚಾಪ್ಟರ್2 ಚಿತ್ರದ ಟ್ರೇಲರ್, ಭಾರತದಲ್ಲೇ ವಿಶೇಷ ದಾಖಲೆ

ನಮ್ಮ ಕನ್ನಡದ ಚಿತ್ರರಂಗದ ಹೆಮ್ಮೆಯ ಚಿತ್ರ ಕೆಜಿಎಫ್. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಸಕ್ಕತ್ ಹೈಪ್ ಕ್ರಿಯೇಟ್ ಮಾಡಿದ ಕೆಜಿಎಫ್ ಚಾಪ್ಟರ್2 ಚಿತ್ರದ ಟ್ರೈಲರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಭಾರತದಾದ್ಯಂತ ಕೆಜಿಎಫ್ ಚಾಪ್ಟರ್1 ಚಿತ್ರವನ್ನು ಸಿನಿ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಕೆಜಿಎಫ್ ಚಾಪ್ಟರ್1 ನೋಡಿದ ಮೇಲೆ ಚಾಪ್ಟರ್2 ಯಾವಾಗ ರಿಲೀಸ್ ಆಗುತ್ತದೆ ಎಂದು ಹಲವಾರು ಮಂದಿ ಕಾದು ಕುಳಿತಿದ್ದರು. ಇದೀಗ ಕೆಜಿಎಫ್ ಚಾಪ್ಟರ್2 ಚಿತ್ರದ ರಿಲೀಸ್ ದಿನಾಂಕ ಸನಿಹವಾಗಿದೆ. ಮುಂದಿನ ತಿಂಗಳು ಏಪ್ರಿಲ್ 14ರಂದು ಕೆಜಿಎಫ್ ಚಾಪ್ಟರ್ ಟು ಇಡೀ ಭಾರತದಾದ್ಯಂತ ಸದ್ದು ಮಾಡಲು ಸಜ್ಜಾಗಿದೆ. ಕೇವಲ ಪೋಸ್ಟರ್ ಹಾಗೂ ಟೀಸರ್ ಗಳಿಂದಲೇ ಭಾರಿ ಸದ್ದು ಮಾಡುತ್ತಿದ್ದ ಕೆಜಿಎಫ್ ಚಾಪ್ಟರ್2 ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಒಂದು ಚಿತ್ರ ರಿಲೀಸ್ ಆಗುವ ಮುನ್ನವೇ ಸಾಕಷ್ಟು ರೆಕಾರ್ಡುಗಳನ್ನು ಕ್ರಿಯೇಟ್ ಮಾಡಿದೆ ಎಂದರೆ ಅದು ನಮ್ಮ ಸ್ಯಾಂಡಲ್ವುಡ್ ನ ಕೆಜಿಎಫ್ ಚಿತ್ರ ಮಾತ್ರ. ಸಾಕಷ್ಟು ವಿಷಯಗಳಿಂದ ಕೆಜಿಎಫ್ ಚಾಪ್ಟರ್2 ಬಹಳ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ನಟ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಬಹು ನಿರೀಕ್ಷಿತ ಬಿಗ್ ಬಜೆಟ್ ಚಿತ್ರದಲ್ಲಿ ಖಡಕ್ ವಿಲ್ಲನ್ ಆಗಿ ಬಾಲಿವುಡ್ನ ರಾಕಿಭಾಯ್ ಸಂಜಯ್ ದತ್ ಅವರು ಮಿಂಚಿದ್ದಾರೆ. ರವೀನಾ ಟಂಡನ್, ಪ್ರಕಾಶ್ ರಾಜ್ ಸೇರಿದಂತೆ ಹಲವಾರು ದೊಡ್ಡ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಕೆಜಿಎಫ್ ಚಾಪ್ಟರ್1 ಚಿತ್ರದ ಟ್ರೈಲರ್ ರಿಲೀಸ್ ಆದಾಗ 24 ಗಂಟೆಗಳಲ್ಲಿ ಮಿಲಿಯನ್ ವ್ಯೂಸ್ ಕಂಡು ದಾಖಲೆ ಬರೆದಿತ್ತು. ಇದೀಗ ಕೆಜಿಎಫ್ ಚಾಪ್ಟರ್ ಟು ತನ್ನದೇ ರೆಕಾರ್ಡ್ ಬ್ರೇಕ್ ಮಾಡಿದೆ. ಹೌದು ಕೆಜಿಎಫ್ ಚಾಪ್ಟರ್2 ಟ್ರೈಲರ್ ರಿಲೀಸ್ ಆದ 24 ಗಂಟೆಗಳಲ್ಲಿ ಬರೋಬ್ಬರಿ 100 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಂದರೆ 10ಕೋಟಿಗೂ ಹೆಚ್ಚು ವೀಕ್ಷಣೆಯನ್ನು ಕೆಜಿಎಫ್ ಚಾಪ್ಟರ್2 ಟ್ರೈಲರ್ ಪಡೆದುಕೊಂಡಿದೆ. ಕೆಜಿಎಫ್ ಚಾಪ್ಟರ್2 ಚಿತ್ರವು ಕೂಡ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, 5ಭಾಷೆಗಳಲ್ಲಿ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿತ್ತು.

ಕನ್ನಡದಲ್ಲಿ ಬಿಡುಗಡೆಯಾದ ಕೆಜಿಎಫ್ ಟು ಟ್ರೈಲರ್ 19 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದ್ದು, ತೆಲುಗು ವರ್ಷನ್ ನಲ್ಲಿ 20 ಮಿಲಿಯನ್, ತಮಿಳು ವರ್ಷನ್ ನಲ್ಲಿ 11 ಮಿಲಿಯನ್, ಮಲಯಾಳಂ ವರ್ಷನ್ ನಲ್ಲಿ 8 ಮಿಲಿಯನ್, ಹಿಂದಿ ವರ್ಷನ್ ನಲ್ಲಿ 51 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡು ಹೊಸ ದಾಖಲೆಯನ್ನು ಕೆಜಿಎಫ್ ಚಿತ್ರ ನಿರ್ಮಿಸಿದೆ. ಈ ಹಿಂದೆ ಜನವರಿ ತಿಂಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ದಿನದಂದು ರಿಲೀಸ್ ಆಗಿದ್ದ ಟೀಸರ್ ಇದುವರೆಗೆ 200 ಮಿಲಿಯನ್ ಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಟೀಸರ್ ಕೂಡ ಕೇವಲ 24 ಗಂಟೆಗಳಲ್ಲಿ ಅತಿ ಹೆಚ್ಚು ವ್ಯೂಸ್ ಪಡೆದುಕೊಂಡು ದಾಖಲೆ ಬರೆದಿತ್ತು. ಇಷ್ಟೆಲ್ಲಾ ದಾಖಲೆಗಳನ್ನು ಬರೆಯುತ್ತಿರುವ ಕೆಜಿಎಫ್ ಚಿತ್ರದ ಮೇಲಿರುವ ಅಭಿಮಾನಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಇಡೀ ದೇಶದಾದ್ಯಂತ ಏಪ್ರಿಲ್ 14ಕ್ಕೆ ಸಾವಿರಾರು ಥಿಯೇಟರ್ ಗಳಲ್ಲಿ ಅಬ್ಬರಿಸಲು ಚಿತ್ರ ರೆಡಿಯಾಗಿದೆ.

%d bloggers like this: