ಜಗತ್ತಿನಲ್ಲಿ ಕೋವಿಡ್ ಸಂದರ್ಭದಲ್ಲಿ ಎಷ್ಟು ಉದ್ಯಮಿಗಳು ಕೋರೋಣ ಹೊಡೆತಕ್ಕೆ ಸಿಕ್ಕು ಸಾಕಷ್ಟು ನಷ್ಟವನ್ನು ಅನುಭವಿಸಿದವು. ಇದು ಒಂದು ಕಡೆಯಾದರೆ ಮತ್ತೊಂದೆಡೆ ಕೆಲವು ಶ್ರೀಮಂತ ಉದ್ಯಮಿಗಳು ಸಾವಿರಾರು ಕೋಟಿ ಲಾಭ ಮಾಡಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದರು. ಅದರಲ್ಲಿ ಅತಿ ಹೆಚ್ಚು ಸುದ್ದಿಯಾದವರು ಗೌತಮ್ ಅದಾನಿ. ಹೌದು ಕೆಲವೇ ವರ್ಷಗಳ ಹಿಂದೆ ದೇಶದ ಆಗರ್ಭ ಶ್ರೀಮಂತರೆಂದರೆ ಟಾಟಾ ಬಿರ್ಲಾ ಅಂಬಾನಿ ಅಂತಹ ದಿಗ್ಗಜ ಕಂಪನಿಯ ಮಾಲಿಕರ ಹೆಸರುಗಳು ಕೇಳಿ ಬರುತ್ತಿದ್ದವು. ಆದರೆ ಕೆಲವೇ ವರ್ಷಗಳಲ್ಲಿ ಗೌತಮ್ ಅದಾನಿ ಈ ಎಲ್ಲ ದಿಗ್ಗಜರನ್ನು ಹಿಂದೆ ಹಾಕಿ ಭಾರತದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲದೆ ಇವರು ಏಷ್ಯಾ ಖಂಡದ ಶ್ರೀಮಂತ ವ್ಯಕ್ತಿ ಕೂಡ ಹೌದು.

ಆದರೆ ಈಗ ಇವರು ಸುದ್ದಿಯಲ್ಲಿರುವುದು ಇಡೀ ವಿಶ್ವಕ್ಕೇನೆ ಶ್ರೀಮಂತರು ಎನಿಸಿಕೊಂಡವರ ಸಾಲಿನಲ್ಲಿ ನಾಲ್ಕನೆಯ ಸ್ಥಾನಕ್ಕೆ ಏರುವ ಮೂಲಕ. ಹೌದು ಗೌತಮ ಅದಾನಿ ಮೈಕ್ರೋಸಾಫ್ಟ್ ದೈತ್ಯ ಬಿಲ್ ಗೇಟ್ಸ್ ಅವರನ್ನು ಹಿಂದೆ ಹಾಕಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಇದಕ್ಕೆ ಇನ್ನೊಂದು ಕಾರಣ ಬಿಲ್ ಗೇಟ್ಸ್ ಅವರು ತಮ್ಮ ಲಾಭದ ಬಹುತೇಕ ಭಾಗವನ್ನು ದಾನವಾಗಿ ನೀಡುತ್ತಾರೆ ಎಂಬುದು ಕೂಡ ಹೌದು. ಕೆಲವೇ ವರ್ಷಗಳಲ್ಲಿ ದೇಶದ ಹಲವಾರು ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡಿರುವ ಅದಾನಿ ಅವರು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಅವರ ಇಂದಿನ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ 9.27 ಲಕ್ಷ ಕೋಟಿ ರೂಪಾಯಿಗಳು. ಮೊದಲ ಮೂರು ಸ್ಥಾನಗಳಲ್ಲಿ ಟೆಸ್ಲಾ ಕಂಪನಿಯ ಮಾಲೀಕ ಎಲಾನ ಮಸ್ಕ್, ದೈತ್ಯ ಅಮೆಜಾನ್ ಕಂಪನಿಯ ಜೆಫ್ ಬೇಜೋಜ್ ಹಾಗೂ ಬರ್ನಲ್ಡ್ ಅವರು ಇದ್ದಾರೆ.