ಗ್ಲೋಬಲ್ ಕಿಂಗ್ ಆಗಿದ್ದ ನೆಟ್ ಫ್ಲೆಕ್ಸ್ ಸಂಸ್ಥೆ ಇದೀಗ ಭಾರಿ ನಷ್ಟಕ್ಕೆ ಒಳಗಾಗಿದೆ. ಹೌದು ಕೋವಿಡ್ ಆದ ನಂತರದಲ್ಲಿ ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳು ಆರ್ಥಿಕವಾಗಿ ಭಾರಿ ಕುಗ್ಗಿ ಹೋಗಿವೆ. ಇದಕ್ಕೆ ಭಾರತ ದೇಶ ಕೂಡ ಹೊರತಾಗಿಲ್ಲ. ಕೋವಿಡ್ ಸಂಕಷ್ಟ ಎದುರಾದ ನಂತರ ಜನರಿಗೆ ಜೀವನ ನಡೆಸಲು ಕಷ್ಟಕರವಾಗಿದೆ. ಪ್ರತಿಯೊಬ್ಬರಿಗೂ ಕೂಡ ಆರ್ಥಿಕವಾಗಿ ಸಮಸ್ಯೆ ಕಾಡುತ್ತಿದೆ. ಅದೇ ರೀತಿಯಾಗಿ ಜಗತ್ತಿನ ಬಹುದೊಡ್ಡ ಕಂಪನಿಗಳು ಕೂಡ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡಿವೆ. ಕೋವಿಡ್ ಸಂಧರ್ಭದಲ್ಲಿ ಎಲ್ಲಾ ಕ್ಷೇತ್ರಗಳು ಕುಂಠಿತವಾಗಿ ಸಾಗಿದ್ರೇ ಈ ಸಿನಿಮಾ ಓಟಿಟಿ ಕ್ಷೇತ್ರಗಳು ಮಾತ್ರ ಭರ್ಜರಿಯಾಗಿ ಉದ್ಯಮವನ್ನು ಸಾಗಿಸಿದವು. ಅವುಗಳಲ್ಲಿ ಜಾಗತಿಕವಾಗಿ ರಾಜನಂತೆ ಆಳಿದ್ದು ಅಂದರೆ ಅದು ನೆಟ್ ಫ್ಲೆಕ್ಸ್. ಇದನ್ನ ಸ್ಟ್ರೀಮಿಂಗ್ ಕಿಂಗ್ ಅಂತಾನೂ ಸಹ ಕರೆಯುತ್ತಿದ್ದರು.

ಜಗತ್ತಿನಾದ್ಯಂತ ಎಲ್ಲಾ ಜನರಿಗೂ ಮನರಂಜನೆ ನೀಡಿ ಫೇಮಸ್ ಆಗಿದ್ದ ನೆಟ್ ಫ್ಲೆಕ್ಸ್ ಕೋವಿಡ್ ಲಾಕ್ ಡೌನ್ ಸಂಧರ್ಭದಲ್ಲಿ ಅಂತೂ ಅಪಾರ ಪ್ರಮಾಣದ ವಹಿವಾಟು ನಡೆಸಿತು ಎಂದು ಹೇಳಬಹುದು. ಯಾಕಂದ್ರೆ ಆ ಸಮಯದಲ್ಲಿ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಬಹುತೇಕರು ಈ ನೆಟ್ ಪ್ಲೆಕ್ಸ್ ನಲ್ಲಿ ಸಿನಿಮಾ, ವೆಬ್ ಸೀರೀಸ್ ನೋಡುವುದರತ್ತ ಮುಖ ಮಾಡಿದ್ರು. ಆದರೆ ಇದೀಗ ನೆಟ್ ಫ್ಲೆಕ್ಸ್ ಸಂಸ್ಥೆಗೆ ಭಾರಿ ಪೈಪೋಟಿ ಎದುರಾಗಿದೆ. ಎಲ್ಲಾ ಕ್ಷೇತ್ರಗಳಿಗೆ ಇರುವಂತೆ ಈ ನೆಟ್ ಫ್ಲೆಕ್ಸ್ ಗೂ ಕೂಡ ಸ್ಪರ್ಧೆ ಎದುರಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಆಪಲ್ ಟಿವಿ, ಎಚ್.ಬಿ.ಓ. ಮ್ಯಾಕ್ಸ್, ಅಮೇಜಾನ್ ಪ್ರೈಮ್, ಡಿಸ್ನಿ ಪ್ಲಸ್ ಅಂತಹ ಸಾಕಷ್ಟು ಆಪ್ ಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಸೇವೆ ಒದಗಿಸುತ್ತಿದ್ದಾವೆ. ಹೀಗಿರುವಾಗ ದುಬಾರಿ ಆಗಿರುವ ಜನರು ನೆಟ್ ಫ್ಲೆಕ್ಸ್ ಕಡೆ ಯಾಕೆ ಗಮನ ಹರಿಸುತ್ತಾರೆ.

ಈಗಾಗಲೇ ನೆಟ್ ಫ್ಲೆಕ್ಸ್ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಾ ಇದೆ. ಕಳೆದ ಎರಡು ವರ್ಷಗಳಲ್ಲಿ ನೆಟ್ ಫ್ಲೆಕ್ಸ್ ಅಪಾರ ಪ್ರಮಾಣದ ಸೋಲು ನಷ್ಟಗಳನ್ನು ಅನುಭವಿಸಿದೆ. ಇತ್ತೀಚೆಗೆ ನಡೆದ ವರದಿಯಲ್ಲಿ ಯುಎಸ್ ಮತ್ತು ಕೆನಡಾವು ತ್ರೈ ಮಾಸಿಕದಲ್ಲಿ ನೆಟ್ ಫ್ಲೆಕ್ಸ್ ಚಂದಾದಾರಿಕೆಯನ್ನ ತೆಗೆದುಕೊಳ್ಳುವುದನ್ನ ನಿಲ್ಲಿಸಿದೆ. ಈಗಾಗಲೇ ನೆಟ್ ಫ್ಲೆಕ್ಸ್ ತನ್ನ ಚಂದಾದಾರನ್ನ ಕಳೆದುಕೊಳ್ಳುತ್ತಿದೆ. ಇದಕ್ಕೆ ಕಾರಣ ಏನೆಂಬುದನ್ನ ನೆಟ್ ಫ್ಲೆಕ್ಸ್ ಮುಖ್ಯ ಕಾರ್ಯ ನಿರ್ವಾಹಕ ರೀಡ್ ಹೇಸ್ಟಿಂಗ್ಸ್ ಅವರು ನಮ್ಮ ಸ್ಟ್ರೇಂಜರ್ ಥಿಂಗ್ಸ್ ಎಂದು ಹೇಳಿದ್ದಾರೆ. ಆದರೆ ಅಸಲಿಗೆ ನೆಟ್ ಫ್ಲೆಕ್ಸ್ ಚಂದಾದಾರಿಕೆಯನ್ನ ಕಳೆದುಕೊಳ್ಳುವುದಕ್ಕೆ ದುಬಾರಿ ವೆಚ್ಚ, ಪೈಟೋಟಿ ನೀಡುತ್ತಿರುವ ಸಹ ಸ್ಪರ್ಧಿ ಕಂಪನಿಗಳು ಮತ್ತು ಕೋವಿಡ್ ನಿಂದ ಜನರ ಆರ್ಥಿಕ ಹೊರೆ ಆಗುತ್ತಿರುವುದು ಎಂದು ತಿಳಿದು ಬಂದಿದೆ.