ಬರೋಬ್ಬರಿ ಇಪ್ಪತ್ತು ವರ್ಷಗಳ ಬಳಿಕ ಭಾರತಮಾತೆಗೆ ವಿಶ್ವ ಸುಂದರಿ ಕಿರೀಟ ತಂದುಕೊಟ್ಟ ಚಂಡೀಗಢದ ಚೆಲುವೆ ಹರ್ನಾಜ್ ಸಂಧು, 2021 ರ ಮಿಸ್ ಯುನಿವರ್ಸ್ ಸೌಂದರ್ಯ ಸ್ಪರ್ಧೆಯಲ್ಲಿ ಮಾಡೆಲ್ ಕಮ್ ನಟಿ ಹರ್ನಾಜ್ ಸಂಧು ವಿಜೇತರಾಗಿದ್ದಾರೆ. 1994 ರಲ್ಲಿ ಭಾರತಕ್ಕೆ ಮಿಸ್ ವರ್ಲ್ಡ್ ಮತ್ತು ಮಿಸ್ ಯುನಿವರ್ಸ್ ಎರಡು ಕಿರೀಟಗಳು ಸಂದಿದ್ದವು. ಮಿಸ್ ಯುನಿವರ್ಸ್ ಆಗಿ ಸುಷ್ಮಿತಾ ಸೇನ್ ವಿಜೇತರಾಗಿದ್ದರು. ಐಶ್ವರ್ಯ ರೈ ಮಿಸ್ ವರ್ಲ್ಡ್ ಆಗಿ ಸಾಧನೆಗೈದಿದ್ದರು. ಆದಾದ ಬಳಿಕ 2000ನೇ ಇಸವಿಯಲ್ಲಿ ಲಾರಾ ದತ್ತ ಅವರು ಈ ಮಿಸ್ ಯುನಿವರ್ಸ್ ಪಟ್ಟ ವೇರಿದ್ದರು. ಲಾರಾ ದತ್ತ ಅವರ ಬಳಿಕ ಈ ಸೌಂಧರ್ಯ ಸ್ಪರ್ಧೆಯಲ್ಲಿ ಭಾರತದ ಯಾವ ಸುಂದರಿಯರು ಕೂಡ ಈ ಸ್ಪರ್ಧೆಯಲ್ಲಿ ವಿಜೇತರಾಗಿರಲಿಲ್ಲ.

ಇದೀಗ ಬರೋಬ್ಬರಿ ಎರಡು ದಶಕಗಳ ನಂತರ ಪಂಜಾಬಿನ ಇಪ್ಪತ್ತೊಂದು ವರ್ಷದ ಬೆಡಗಿ ಹರ್ನಾಜ್ ಸಂಧು ಮಿಸ್ ಯುನಿವರ್ಸ್ ಸಿಂಹಾಸನವನ್ನು ಏರಿದ್ದಾರೆ. ಹರ್ನಾದ್ ಸಂಧು ಅವರು ಪಂಜಾಬಿನ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಇವರು ರೂಪದರ್ಶಿಯಾಗಿ ಅನೇಕ ಸ್ಪರ್ಧಿಗಳಲ್ಲಿಯೂ ಕೂಡ ವಿಜೇತರಾಗಿದ್ದಾರೆ. ಈ ಮಿಸ್ ಯುನಿವರ್ಸ್ ವಿಜೇತರಿಗೆ ಸಿಗುವ ಸೌಲಭ್ಯಗಳು ನಿಜಕ್ಕೂ ಅದ್ದೂರಿಯಾಗಿಯೇ ಇರುತ್ತವೆ. ವಿಶ್ವ ಸುಂದರಿಯ ಕಿರೀಟ 19 ಕ್ಯಾರೆಟ್ ಚಿನ್ನದಿಂದ ತಯಾರಿಸಿ, ಇದಕ್ಕೆ ಬರೋಬ್ಬರಿ 1770 ವಜ್ರಗಳನ್ನು ಅಳವಡಿಸಲಾಗಿರುತ್ತದಂತೆ. ಇದರೊಂದಿಗೆ ಮೂರು ಗೋಲ್ಡನ್ ಕ್ಯಾನರಿಯನ್ನ ಹೊಂದಿಸಲಾಗಿದೆ.

ಇವರಿಗೆ ಸರಿ ಸುಮಾರು 1.8 ಕೋಟಿಯಷ್ಟು ಬಹುಮಾನದ ಮೊತ್ತ ದೊರೆಯುತ್ತದೆ. ವಿಶ್ವ ಸುಂದರಿ ಅವರ ಕುಟುಂಬದವರು ನ್ಯೂಯಾರ್ಕ್ ನೀಡುವ ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡಬಹು ದಾಗಿರುತ್ತದೆ. ಈಗ ಮಿಸ್ ಯುನಿವರ್ಸ್ ಆಗಿರುವ ಹರ್ನಾಜ್ ಸಂಧು ಅವರಿಗೆ ಮೇಕಪ್ ಅಸಿಸ್ಟೆಂಟ್, ವರ್ಣಾಲಂಕಾರದ ಸಲಕರಣಿಗಳು, ಮೇಕಪ್ ಕಿಟ್, ಜೊತೆಗೆ ಫೋಟೋ ಶೂಟ್ ಮಾಡಿಸಿಕೊಳ್ಳಲು ಛಾಯಾಗ್ರಾಹಕರನ್ನು ಕೂಡ ನೇಮಿಸಲಾಗಿರುತ್ತದೆ. ಇನ್ನು ಇಡೀ ಜಗತ್ತಿನ ಅವರಿಚ್ಚೆಯ ಭಾಗಗಳಿಗೆ ಉಚಿತವಾಗಿ ಊಟ ಸಹಿತ ಪ್ರವಾಸ ಮಾಡುವ ಅವಕಾಶವನ್ನು ಕೂಡ ಮಾಡಲಾಗಿರುತ್ತದೆ.

ವಿಶ್ವ ಸುಂದರಿ ಪಟ್ಟವೇರಿದ ಈ ಚೆಲುವೆಗೆ ನೀಡಿದ ಕಿರೀಟದ ಬೆಲೆ ಎಷ್ಟಿರಬಹುದು ಎಂದು ಅನೇಕರು ಉಬ್ಬೇರಿಸಿದ್ದರು. ವಿಶ್ವ ಸುಂದರಿ ಹರ್ನಾಜ್ ಸಂಧು ಅವರಿಗೆ ನೀಡಿದ ಈ ಕಿರೀಟದ ಬೆಲೆ ಬರೋಬ್ಬರಿ ಐದು ಮಿಲಿಯನ್ ವೆಚ್ಚವಾಗಿದ್ದು, ಈ ಕಿರೀಟ ಕೋಟಿ ಕೋಟಿ ಬೆಲೆಯ ಮೌಲ್ಯವನ್ನು ಹೊಂದಿದೆ. ಈ ಕಿರೀಟದ ಡಿಸೈನ್ ಅನ್ನು ಮೌವಾದ್ ಎಂಬುವವರು ಮಾಡಿದ್ದಾರೆ. ಇನ್ನು ಭಾರತಕ್ಕೆ ಇದುವರೆಗೆ ಮೂರು ಬಾರಿ ಮಿಸ್ ಯುನಿವರ್ಸ್ ಕಿರೀಟ ಲಭಿಸಿದೆ. 1994 ರಲ್ಲಿ ಸುಷ್ಮಿತಾ ಸೇನ್, 2000 ರಲ್ಲಿ ಲಾರಾ ದತ್ತಾ ಇದೀಗ 2021ನೇ ಸಾಲಿನಲ್ಲಿ 21 ವರ್ಷದ ಚಂಡೀಗಢದ ಚೆಲುವೆ ಹರ್ನಾಜ್ ಸಂಧು ಅವರು ಭಾರತಕ್ಕೆ ಮಿಸ್ ಯುನಿವರ್ಸ್ ಮುಕುಟ ಮುಡಿಸಿದ್ದಾರೆ.