ವಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ ಮನೆಯಲ್ಲೇ ಈ ಸಣ್ಣ ಕೆಲಸ ಮಾಡಿ ಪರಿಹಾರ ಸಿಗುವುದು

ನಿಮ್ಮ ವ್ಯಾಪಾರ, ವ್ಯವಹಾರ ಏಕಾಏಕಿ ನಷ್ಟದ ಹಾದಿಯಲ್ಲಿ ಸಾಗುತ್ತಿರುವುದಕ್ಕೆ ಕಾರಣ ನಿಮ್ಮ ವ್ಯಾಪಾರದ ಮೇಲೆ ಬಿದ್ದಿರುವ ಜನರ ಕೆಟ್ಟ ದೃಷ್ಟಿ ಎಂದು ಹೇಳಲಾಗುತ್ತದೆ. ನಿಮ್ಮ ಬೆಳವಣಿಗೆ ಸಹಿಸಲಾರದ ನಿಮ್ಮವರೇ ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವುದಕ್ಕೆ ಕಾಯುತ್ತಿರುತ್ತಾರೆ. ಕೆಲವೊಮ್ಮೆ ಗ್ರಹಗತಿ ಅಥವಾ ದುಷ್ಟ ಶಕ್ತಿ ಪ್ರಭಾವದಿಂದಾಗಿ ಉತ್ತಮವಾಗಿ ಮತ್ತು ಲಾಭದಾಯಕವಾಗಿ ನಡೆಯುತ್ತಿದ್ದಂತಹ ವ್ಯವಹಾರಗಳು, ವ್ಯಾಪಾರಗಳು ಕುಂಠಿತವಾಗಿ ಆರ್ಥಿಕ ದಿವಾಳಿ ಆಗಿ ಬಿಡುತ್ತವೆ. ಅದನ್ನು ಹೊರತು ಪಡಿಸಿದರೆ ನಿಮಗೆ ಮಾಟ ಮಂತ್ರದಂತಹ ಯಂತ್ರಗಳನ್ನು ನಿಮ್ಮ ಮೇಲೆ ಶತ್ರುಗಳು ಮಾಡಿಸುವುದರಿಂದ ನಿಮ್ಮ ವ್ಯಾಪಾರ ನಷ್ಟದ ಸುಳಿಗೆ ಸಿಲುಕುತ್ತವೆ, ಇದಕ್ಕೆ ಪರಿಹಾರವಾಗಿ ನಿಂಬೆಹಣ್ಣು ಮತ್ತು ಲವಂಗ ಪರಿಣಾಮಕಾರಿ ಯಾಗಿ ಕೆಲಸ ಮಾಡುತ್ತದೆ.

ಒಂದು ನಿಂಬೆಹಣ್ಣಿಗೆ ಏಳು ರಂಧ್ರ ಮಾಡಿ ಒಂದೊಂದು ರಂಧ್ರಗಳಿಗೆ ಒಂದೊಂದು ಲವಂಗವನ್ನು ಹಾಕಬೇಕು, ಆ ಲವಂಗದ ಮೊಗ್ಗು ಹೊರಭಾಗದಲ್ಲಿ ಕಾಣುವಂತಿರಬೇಕು. ಇದನ್ನು ನಿಮ್ಮ ಮೇಲ್ಭಾಗದ ಜೇಬಿನಲ್ಲಿಟ್ಟುಕೊಂಡು ಶನಿವಾರದಂದು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಶ್ರದ್ದಾ ಭಕ್ತಿಯಿಂದ ನಿಮ್ಮ ವ್ಯಾಪಾರ ಮೊದಲಿನಂತೆ ಉತ್ತಮವಾಗಿ ನಡೆಯಲಿ ಎಂದು ವಾಯುಪುತ್ರನಲ್ಲಿ ಪ್ರಾರ್ಥನೆ ಮಾಡಿಕೊಳ್ಳಬೇಕು.

ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸುವಾಗ ನಿಮ್ಮ ಅಂಗೈಯಲ್ಲಿ ಆ ಲವಂಗ ಸೇರಿಸಿದ ನಿಂಬೆ ಹಣ್ಣನ್ನು ಹಿಡಿದು ದೇವರಲ್ಲಿ ಪ್ರಾರ್ಥಿಸಿದ ನಂತರ ಮನೆಗೆ ಬಂದ ಮೇಲೆ ನಿಮ್ಮ ಭಾಗಿಲಿನ ಮೇಲ್ಭಾಗದಲ್ಲಿ ಕಟ್ಟಬೇಕು. ಈ ಕಟ್ಟಿರುವ ನಿಂಬೆಹಣ್ಣು ಯಾರಿಗೂ ದರ್ಶನ ಆಗದಂತೆ ಇಟ್ಟಿರಬೇಕು. ಇನ್ನೊಬ್ಬರ ದೃಷ್ಠಿ ಈ ನಿಂಬೆ ಹಣ್ಣಿನ ಮೇಲೆ ಬೀಳದಂತೆ ಆರಂಭದ ಒಂದು ತಿಂಗಳು ಗಮನವಿಡಬೇಕು, ನೀವು ವ್ಯಾಪಾರಸ್ಥರಾಗಿದ್ದರೆ ಈ ಲವಂಗದ ನಿಂಬೆಹಣ್ಣನ್ನು ಅಂಗಡಿಯಲ್ಲಿ ನಗದು ಇಡುವ ಗಲ್ಲಾ ಪೆಟ್ಟಿಗೆಯಲ್ಲಿ ಇಟ್ಟು ಪ್ರತಿ ಮಂಗಳವಾರ ಅಥವಾ ಶನಿವಾರ ಪೂಜಿಸಬೇಕು. ಈ ಯಂತ್ರವನ್ನು ಶನಿವಾರದಂದು ಆರಂಭಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.

%d bloggers like this: