ವೀಕೆಂಡ್ ಕರ್ಫ್ಯೂ, ಥಿಯೇಟರ್ ಕಡೆ ಹೋಗುವವರು ಇದನ್ನೊಮ್ಮೆ ತಿಳಿದುಕೊಳ್ಳಿ

ಕನ್ನಡ ಚಿತ್ರರಂಗಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತೇ ನೈಟ್ ಕರ್ಫ್ಯೂ ಆದೇಶ, ಹೌದು ಕಳೆದ ಎರಡು ವರ್ಷಗಳಿಂದ ಜಗತ್ತಿನಾದ್ಯಂತ ಕಂಟಕವಾಗಿ ಕಾಡಿದ್ದ ಕೊರೋನ ವೈರಸ್ ನಿಂದಾಗಿ ಇಡೀ ಮನುಕುಲವೇ ನಲುಗಿತ್ತು. ಕೊರೋನ ವೈರಸ್ ನಿಯಂತ್ರಣಕ್ಕಾಗಿ ಭಾರತ ಸರ್ಕಾರ ಕೂಡ ಕಠಿಣ ಮಾರ್ಗ ಸೂಚಿ ಅನ್ವಯಿಸಿ ಸಂಪೂರ್ಣ ಲಾಕ್ ಡೌನ್ ಕೂಡ ಮಾಡಿ ಆದೇಶ ಮಾಡಿತ್ತು. ಮೊದಲನೇ ಅಲೆಯ ನಂತರ ಎಲ್ಲವೂ ಸರಿ ಹೋಗುತ್ತಿದೆ ಅನ್ನುವಷ್ಟರಲ್ಲಿ ಕೋವಿಡ್ ಎರಡನೇ ಅಲೆಯು ರಣ ರಾಕ್ಷಸನಂತೆ ವಕ್ಕರಿಸಿ ಇಡೀ ದೇಶಕ್ಕೇ ಕಂಟಕವಾಗಿ ಲಕ್ಷಾಂತರ ಜನರ ಸಾವು ನೋವಿಗೆ ಕಾರಣವಾಯಿತು. ಇದರಿಂದ ಎಚ್ಚೆತ್ತು ಮುಂಜಾಗೃತ ಕ್ರಮವಾಗಿ ಭಾರತ ಸರ್ಕಾರ ಕೂಡ ಜನ ನಿಬಿಡ ಪ್ರದೇಶಗಳಿಗೆ ಬಿಗಿ ನಿಯಮ ಅಳವಡಿಸಿತ್ತು.

ಇದರಿಂದಾಗಿ ದೇಶಕ್ಕೆ ಅಪಾರ ನಷ್ಟವಾಗಿ ಕರೋನ ವೈರಸ್ ಅಲೆಯಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಕೂಡ ಬುಡಮೇಲಾಯಿತು. ಲಾಕ್ ಡೌನ್ ಇಂದಾಗಿ ನಷ್ಟಕ್ಕೊಳ ಇದಕ್ಕೆ ಸಿನಿಮಾ ರಂಗ ಕೂಡ ಹೊರತಾಗಿಲ್ಲ. ಕೆಲವು ತಿಂಗಳಗಳಿಂದೀಚೆಗೆ ಎಲ್ಲವೂ ಸಹಜ ಸ್ಥಿತಿಯತ್ತ ಮರಳಿ ಸರಾಗವಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಾಗಲೇ ಇದೀಗ ಇದರ ನಡುವೆ ಕೊರೋನ ವೈರಸ್ ರೂಪಾಂತರ ತಳಿಯಾಗಿ ಓಮೈಕ್ರಾನ್ ವೈರಸ್ ದಾಂಗುಡಿ ಇಟ್ಟಿದೆ. ಈಗಾಗಲೇ ಭಾರತದಲ್ಲಿ ಓಮೈಕ್ರಾನ್ ವೈರಸ್ ಕಾಣಿಸಿಕೊಂಡಿದ್ದು, ಅದರ ಜೊತೆಗೆ ದಿನ ಕಳೆದಂತೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಜೊತೆಗೆ ಹೊಸ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿಷ್ಟಿತ ನಗರದಲ್ಲಿ ನೈಟ್ ಪಾರ್ಟಿ ಮಾಡಲು ಹೆಚ್ಚೆಚ್ಚು ಜನರು ಸೇರುತ್ತಾರೆ. ಆದ ಕಾರಣ ಸರ್ಕಾರ ಇದರಿಂದ ಅಪಾಯದ ಸ್ಥಿತಿ ಎದುರಿಸುವ ಬದಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಕಾರಣದಿಂದ ಹತ್ತು ದಿನಗಳ ಕಾಲ ರಾಜ್ಯದಲ್ಲಿ ನೈಟ್ ಕರ್ಫ್ಯು ಜಾರಿ ಮಾಡಿ ಆದೇಶ ಹೊರಡಿಸಿದೆ. ಡಿಸೆಂಬರ್ 28 ರಿಂದ 7 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 5 ರ ವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ. ಇದರಿಂದ ಸಿನಿಮಾರಂಗಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಚಿತ್ರ ಮಂದಿರಗಳಿಗೆ ಶೇಕಡ 50ರಷ್ಟು ಇದ್ದ ವಿನಾಯಿತಿಯನ್ನ ನೂರರಷ್ಟು ವಿನಾಯಿತಿ ನೀಡಿ ಆದೇಶ ಮಾಡಿತ್ತು. ಇದರಿಂದ ಚಿತ್ರರಂಗ ಕೂಡ ನಿಟ್ಟುಸಿರು ಬಿಟ್ಟಿತ್ತು. ಆದರೆ ಈಗ ರಾಜ್ಯ ಸರ್ಕಾರದ ಈ ನೈಟ್ ಕರ್ಫ್ಯೂ ಆದೇಶದಿಂದಾಗಿ ಕನ್ನಡ ಚಿತ್ರಗಳಿಗೆ ಮತ್ತೇ ಹೊಡೆತ ಬಿದ್ದಿದೆ. ಚಿತ್ರ ಮಂದಿರಗಳಲ್ಲಿ ದಿನವೊಂದಕ್ಕೆ ನಾಲ್ಕು ಶೋ ಗಳಿಗೆ ಮಾತ್ರ ಅವಕಾಶ ಇದೆ. ಸಂಜೆ 7 ರ ಪ್ರದರ್ಶನ ಕೊನೆಯ ಶೋ ಆಗಿರಲಿದೆ. ಈಗಾಗಲೇ ಬಿಡುಗಡೆ ಆಗಿ ಪ್ರದರ್ಶನಗೊಳ್ಳುತ್ತಿರುವ ಮತ್ತು ರಿಲೀಸ್ ಆಗಬೇಕಿದ್ದ ಚಿತ್ರಗಳಿಗೆ ಇದು ನಿಜಕ್ಕೂ ಕೂಡ ತೊಂದರೆ ಆಗಲಿದೆ ಎಂಬುದು ಕನ್ನಡ ಚಿತ್ರರಂಗ ಅಳಲಾಗಿದೆ.

%d bloggers like this: