ಯಶ್ ಅವರ ಜೊತೆ ಬಣ್ಣ ಹಚ್ಚಲು ಸಜ್ಜಾದ ಬಾಲಿವುಡ್ನ ಖ್ಯಾತ ನಟಿ

ನಮ್ಮ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಕೆ ಜಿ ಎಫ್ ಚಾಪ್ಟರ್ 2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆಯನ್ನು ಮೂಡಿಸಿದ ಸಿನಿಮಾ ಆಗಿದೆ. ಇಡೀ ಸಿನಿ ಜಗತ್ತು ನಮ್ಮ ಸ್ಯಾಂಡಲ್ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್ ಚಾಪ್ಟರ್ 1. ನಮ್ಮ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಕೆಜಿಎಫ್ ಚಾಪ್ಟರ್ 1 ಸಿನಿಮಾದಿಂದ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದರು. ಕೆಜಿಎಫ್ ಚಾಪ್ಟರ್ 1 ಸಿನಿಮಾ ಹಿಂದಿನ ಎಲ್ಲ ಸಿನಿಮಾಗಳ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿತ್ತು. ಕನ್ನಡ, ತೆಲುಗು, ತಮಿಳು, ಹಿಂದಿ ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ ರಿಲೀಸಾದ ನಮ್ಮ ಕೆಜಿಎಫ್ ಚಾಪ್ಟರ್ 1 ಸಿನಿಮಾ ಎಲ್ಲ ಭಾಷೆಗಳಲ್ಲೂ ಭರ್ಜರಿ ಯಶಸ್ಸನ್ನು ಕಂಡಿತ್ತು.

ಕೆಜಿಎಫ್ ಚಾಪ್ಟರ್ 1 ಸಿನಿಮಾ ನೋಡಿದ ಸಿನಿಪ್ರೇಕ್ಷಕರು ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ನಮ್ಮ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಕೆ ಜಿ ಎಫ್ ಚಾಪ್ಟರ್ 2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆಯನ್ನು ಮೂಡಿಸಿದ ಸಿನಿಮಾ ಆಗಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆಯಾದ ದಿನವೇ ಅತಿಹೆಚ್ಚು ಲೈಕ್ಸ್ ಮತ್ತು ವ್ಯೂಸ್ ಗಳನ್ನು ಪಡೆದು ದಾಖಲೆ ಬರೆದಿತ್ತು. ಈಗ ಎಲ್ಲರೂ ಯಶ್ ಅವರನ್ನು ಕೆಜಿಎಫ್ 2 ಚಿತ್ರದಲ್ಲಿ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಈಗ ಕೆಜಿಎಫ್ 2 ಚಿತ್ರದಿಂದ ಹೊಸದೊಂದು ಸುದ್ದಿ ಹರಿದಾಡುತ್ತಿದೆ. ಅದು ಏನೆಂದರೆ, ಬಾಲಿವುಡ್ ಬೆಡಗಿ ನೊರಾ ಫತೇಹಿ ಕನ್ನಡಕ್ಕೆ ಬರುತ್ತಿದ್ದಾರೆ.

ಹೌದು ಕೆಜಿಎಫ್ 2 ಚಿತ್ರದ ಒಂದು ಐಟಂ ಸಾಂಗ್ ನಲ್ಲಿ ನೊರಾ ಫತೇಹಿ ಅವರು ಯಶ್ ಅವರ ಜೊತೆ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೆಜಿಎಫ್ ಚಾಪ್ಟರ್ 1 ನಲ್ಲಿ ತಮನ್ನಾ ಭಾಟಿಯ ಮತ್ತು ಮೌನಿ ರಾಯ್ ಯಶ್ ಅವರ ಜೊತೆ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದರು. ಈಗ ನೊರಾ ಅವರ ಸರದಿ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕೆಜಿಎಫ್ ಚಾಪ್ಟರ್ 1 ನಂತೆ ಈ ಬಾರಿಯೂ ರೆಟ್ರೋ ಸಾಂಗ್ ಗಳನ್ನೇ ರಿಮೇಕ್ ಮಾಡುವುದು ಖಚಿತ ಎಂದು ಕೇಳಿ ಬರುತ್ತಿದೆ. ಈ ಹಿಂದೆ ಕನ್ನಡದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು, ಹಾಗೂ ಹಿಂದಿಯಲ್ಲಿ ಗಲಿ ಗಲಿ ಸಾಂಗ್ ಗಳನ್ನೂ ರಿಮೇಕ್ ಮಾಡಲಾಗಿತ್ತು.

ಈ ಬಾರಿ ಯಾವ ರೆಟ್ರೋ ಸಾಂಗ್ ರಿಮೇಕ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕು. ಕೆಜಿಎಫ್ 2 ಚಿತ್ರದ ಐಟಂ ಹಾಡಿನಲ್ಲಿ ನೋರಾ ಫತೇಹಿ ಅವರು ಯಶ್ ಅವರೊಂದಿಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಮಾಹಿತಿ ಖಚಿತವಾಗಿದೆ. ಆದರೆ ಚಿತ್ರತಂಡದಿಂದ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಈಗಾಗಲೇ ಟೀಸರ್ ಮೂಲಕ ಸಾಕಷ್ಟು ಸದ್ದು ಮಾಡಿರುವ ಕೆಜಿಎಫ್ ಚಾಪ್ಟರ್ ಟು ಏಪ್ರಿಲ್ 14 ಕ್ಕೆ ರಿಲೀಸ್ ದಿನಾಂಕವನ್ನು ಫಿಕ್ಸ್ ಮಾಡಿಕೊಂಡಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್ ಅವರ ಕೆಜಿಎಫ್ 2 ಭಾಗಕ್ಕಾಗಿ ದೇಶಾದ್ಯಂತ ಸಿನಿಪ್ರಿಯರು ಕಾದುಕುಳಿತಿದ್ದಾರೆ.

%d bloggers like this: