ಕೆಜಿಎಫ್ ಕನ್ನಡ ಚಿತ್ರರಂಗದಿಂದ ತಯಾರಾಗಿ ಇಡೀ ಜಗತ್ತಿಗೆ ಹುಚ್ಚೆಬ್ಬಿಸಿರುವ ಅಪ್ಪಟ ಕನ್ನಡಿಗರ ಚಿತ್ರ, ಎರಡು ವರ್ಷದ ಹಿಂದೆ ಕೆಜಿಎಫ್ ಮೊದಲ ಭಾಗ ಬಿಡುಗಡೆ ಆಗಿತ್ತು ಹಾಗೂ ಭಾರತದಾದ್ಯಂತ ಭರ್ಜರಿ ಯಶಸ್ಸು ಗಳಿಸಿತ್ತು, ಈಗ ಅದರ ಮುಂದುವರೆದ ಎರಡನೇ ಭಾಗ ಬಿಡುಗಡೆಗೆ ಸಿದ್ದವಾಗಿದ್ದು ಮೊನ್ನೆಯಷ್ಟೇ ಕೆಜಿಎಫ್ ಎರಡನೇ ಚಾಪ್ಟರ್ನ ಟೀಸರ್ ಬಿಡುಗಡೆ ಮಾಡಲಾಯಿತು. ಟೀಸರ್ ಬಿಡುಗಡೆ ಆದ ಕೇವಲ 24 ಗಂಟೆಯೊಳಗೆ ಬರೊಬ್ಬರಿ 79ಮಿಲಿಯನ್ ಅಂದರೆ ಸುಮಾರು ಎಂಟು ಕೋಟಿ ವೀಕ್ಷಣೆ ಪಡೆದು ವಿಶ್ವ ದಾಖಲೆ ಮಾಡಿತು. ಅಂದುಕೊಂಡಂತೆ ಆಗಿದ್ದರೆ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದ ದಿನ ಈ ಟೀಸರ್ ಬಿಡುಗಡೆ ಆಗಬೇಕಾಗಿತ್ತು.

ಆದರೆ ಕೆಲ ಕಿಡಿಗೇಡಿಗಳು ಒಂದು ದಿನದ ಮೊದಲೇ ಟೀಸರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆ ಮಾಡಿದ್ದರಿಂದ ಏಳನೇ ತಾರೀಖಿನಂದೇ ಬಿಡುಗಡೆ ಮಾಡಿದರು. ಒಂದು ದಿನ ಮುಂಚಿತವಾಗಿ ಬಂದರೂ ಕೆಜಿಎಫ್ ತನ್ನ ದಾಖಲೆಯನ್ನು ಬಿಡಲೇ ಇಲ್ಲ, ಇಪ್ಪತ್ನಾಲ್ಕು ಗಂಟೆಗಳ ಒಳಗೆ ದಾಖಲೆ ವೀಕ್ಷಣೆಗಳನ್ನು ಪಡೆದುಕೊಂಡಿತು. ಇನ್ನು ಸದ್ಯದ ತನಕ ಕೆಜಿಎಫ್ ಟೀಸರ್ಗೆ ಬರೊಬ್ಬರಿ 143 ಮಿಲಿಯನ್ ವೀಕ್ಷಣೆಗಳು ಬಂದಿವೆ. ತೆಲುಗು ತಮಿಳು ಹಿಂದಿ ಚಿತ್ರರಂಗದ ಕಥೆ ಬಿಡಿ ಕೆಜಿಎಫ್ ಎಲ್ಲಾ ಹಾಲಿವುಡ್ ಚಿತ್ರಗಳನ್ನೇ ಹಿಂದಿಕ್ಕಿ ಕಳೆದ ನಾಲ್ಕೈದು ದಿನಗಳಿಂದ ಯೂಟ್ಯೂಬ್ ಅಲ್ಲಿ ಟ್ರೆಂಡಿಂಗ್ ಇದೆ.

ಇದೀಗ ಬಂದಿರುವ ಸುದ್ದಿಯ ಪ್ರಕಾರ ಕೆಜಿಎಫ್ ಚಿತ್ರಕ್ಕೆ ಸಂಕಷ್ಟವೊಂದು ಎದುರಾಗಿದೆ, ಕೆಜಿಎಫ್ ಟೀಸರ್ ಕೊನೆಯಲ್ಲಿ ಯಶ್ ಅವರು ಬಾಯಲ್ಲಿ ಸಿಗರೇಟ್ ಇಟ್ಟುಕೊಂಡು ಗನ್ ಮೂಲಕ ಸಿಗರೇಟ್ಗೆ ಬೆಂಕಿ ಹಚ್ಚುತ್ತಾರೆ. ಅಸಲಿಗೆ ಹೇಳಬೇಕೆಂದರೆ ಇದೆ ಒಂದು ದೃಶ್ಯದಿಂದ ಯಶ್ ಅವರ ಕೆಜಿಎಫ್ ಟೀಸರ್ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ ಆದರೆ ಇದೆ ದೃಶ್ಯ ಈಗ ತಂಡಕ್ಕೆ ಮುಳುವಾಗಿದೆ. ಇದೀಗ ಆರೋಗ್ಯ ಇಲಾಖೆ ಯಶ್ ಹಾಗು ಚಿತ್ರಕ್ಕೆ ನೋಟೀಸ್ ಒಂದನ್ನು ಕಳುಹಿಸಿದ್ದು ಅದರಲ್ಲಿ ಯಶ್ ಅವರ ಸಿಗರೇಟ್ ದೃಶ್ಯಕ್ಕೆ ಕತ್ತರಿ ಹಾಕಬೇಕೆಂದು ಹೇಳಿದ್ದಾರೆ. ಇದಕ್ಕೆ ಚಿತ್ರತಂಡ ಇನ್ನಷ್ಟೇ ಮಾತನಾಡಬೇಕಾಗಿದೆ. ಆರೋಗ್ಯ ಇಲಾಖೆ ಕಳುಹಿಸಿರುವ ಈ ನೋಟೀಸಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧಗಳೂ ಸಹ ಕೇಳಿ ಬರುತ್ತಿದ್ದು, ಎಷ್ಟೋ ಚಿತ್ರಗಳಲ್ಲಿ ಧೂಮಪಾನ ಹಾಗೂ ಮದ್ಯಪಾನದ ದೃಶ್ಯಗಳಿವೆ.

ಕೇವಲ ಕೆಜಿಎಫ್ ಬಗ್ಗೆ ಯಾಕೆ ಮಾತಾಡುತ್ತಿದ್ದಿರಿ ಎಂದು ಕೆಲವರ ವಾದವಾದರೆ ಇನ್ನೂ ಕೆಲವರು ಮೊದಲು ಸರ್ಕಾರ ಸಿಗರೇಟ್ ಅಂಗಡಿಗಳನ್ನು ಮುಚ್ಚಿಸಿ ಆಮೇಲೆ ಕೆಜಿಎಫ್ ಬಗ್ಗೆ ಮಾತನಾಡಿ ಎಂದು ಹೇಳುತ್ತಿದ್ದಾರೆ. ಕೆಜಿಎಫ್ ಮೊದಲ ಚಾಪ್ಟರ್ ಬಿಡುಗಡೆಯ ಹಿಂದಿನ ದಿನವೂ ಸಹ ಚಿತ್ರತಂಡಕ್ಕೆ ಸಂಕಷ್ಟ ಎಂದುರಾಗಿತ್ತು, ಆದರೆ ಯಶಸ್ವಿಯಾಗಿ ಬಿಡುಗಡೆ ಆಗಿ ಕೋಟಿ ಕೋಟಿ ಕೊಳ್ಳೆ ಹೊಡೆದದ್ದು ಇತಿಹಾಸ. ಈ ಬಗ್ಗೆ ಕೆಜಿಎಫ್ ಚಿತ್ರತಂಡ ಆರೋಗ್ಯ ಇಲಾಖೆಯ ನೋಟೀಸಿಗೆ ಏನು ಪ್ರತಿಕ್ರಿಯೆ ಕೊಡುತ್ತದೆ ಅಂತ ಕಾಡು ನೋಡಬೇಕಾಗಿದೆ. ಐದು ದಿನಗಳ ಹಿಂದೆ ಬಿಡುಗಡೆ ಆಗಿರುವ ಕೆಜಿಎಫ್ ಟೀಸರ್ ಸದ್ಯ ಜಗತ್ತಿನ ಅತೀ ಹೆಚ್ಚು ವೀಕ್ಷಣೆ ಪಡೆದ ಚಿತ್ರಗಳಲ್ಲಿ ಎರಡನೇ ಸ್ಥಾನದಲ್ಲಿದ್ದು ಮೊದಲ ಸ್ಥಾನದಲ್ಲಿ ಹಾಲಿವುಡ್ ಚಿತ್ರವಿದೆ.