ಯಶ್ ಅವರ ಮನೆಗೆ ಭೇಟಿ ಕೊಟ್ಟ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್

ರಾಕಿಂಗ್ ಸ್ಟಾರ್ ಯಶ್ ಮನೆಗೆ ಶಾಸಕ ಜಮೀ಼ರ್ ಅಹ್ಮದ್ ಖಾನ್ ಭೇಟಿ! ಬೆಂಗಳೂರಿನ ಚಾಮರಾಜಪೇಟೆಯ ಜನಪ್ರಿಯ ಶಾಸಕರಾಗಿರುವ ಜಮೀ಼ರ್ ಅಹ್ಮದ್ ಖಾನ್ ಅವರು ಇತ್ತೀಚಿಗೆ ಎಲ್ಲ ಗಣ್ಯರ ಮನೆಗೆ ಭೇಟಿ ನೀಡುತ್ತಿದ್ದಾರೆ. ಅದರಲ್ಲಿಯೂ ರಾಜಕೀಯ, ಸಿನಿಮಾ ಕ್ಷೇತ್ರದ ಗಣ್ಯ ವ್ಯಕ್ತಿಗಳನ್ನು ದಿಢೀರನೇ ಮಾಡುತ್ತಿರುವುದನ್ನು ನೋಡಿ ಜಮೀ಼ರ್ ಖಾನ್ ಅವರು ಪಕ್ಷ ಬದಲಾವಣೆ ಮಾಡುತ್ತಿರಬಹುದು ಎಂದು ಕೆಲವರು ಊಹೆ ಮಾಡಿದ್ದರು. ಅದರಲ್ಲಿಯೂ ಮೊನ್ನೆ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾಗಿರುವ ತೇಜಸ್ವಿಸೂರ್ಯ ಯವರು ಜಮೀರ್ ಖಾನ್ ಅವರನ್ನು ಕೇಸರಿ ಶಾಲು ಹೊದಿಸಿ ತಮ್ಮ ಮನೆಗೆ ಸ್ವಾಗತ ಮಾಡಿಕೊಂಡಿದ್ದರು. ತೇಜಸ್ವಿ ಸೂರ್ಯ ಕೇಸರಿ ಶಾಲು ಹೊದಿಸುತ್ತಿರುವ ದೃಶ್ಯದ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ಜಮೀ಼ರ್ ಅಹ್ಮದ್ ಖಾನ್ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅಸಲಿಗೆ ಜಮೀರ್ ಅಹ್ಮದ್ ಖಾನ್ ಅವರು ಗಣ್ಯರ ಮನೆಗೆ ಭೇಟಿ ಕೊಡುತ್ತಿರುವುದು ಅವರ ಮಗಳ ಮದುವೆಗೆ ಆಹ್ವಾನ ನೀಡಲು ಮದುವೆ ಆಮಂತ್ರಣ ಪತ್ರಿಕೆಯನ್ನು ತಮ್ಮ ಆಪ್ತರ ಮನೆಗಳಿಗೆ ಭೇಟಿ ಕೊಡುತ್ತಿದ್ದಾರೆ.

ಇನ್ನು ಇವರ ಪುತ್ರ ಜನಾದ್ ಜೈದ್ ಜಮಿ಼ರ್ ಖಾನ್ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದು, ಜಯತೀರ್ಥ ನಿರ್ದೇಶನದಲ್ಲಿ ಮೂಡಿಬರುತ್ತಿರು ಬನಾರಸ್ ಚಿತ್ರದಲ್ಲಿ ಜೈದ್ ಖಾನ್ ಅವರು ನಾಯಕ ನಟನಾಗಿ ಸ್ಯಾಂಡಲ್ ವುಡ್ಗೆ ಭರ್ಜರಿ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಜಮೀ಼ರ್ ಅಹ್ಮದ್ ಖಾನ್ ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಲು ಸಕಲ ತಯಾರಿ ನಡೆಸಿದ್ದಾರೆ. ಇದರ ಜೊತೆಗೆ ರಾಜಕೀಯ ಕ್ಷೇತ್ರ, ಸಿನಿಮಾ ಕ್ಷೇತ್ರದ ಗಣ್ಯ ವ್ಯಕ್ತಿಗಳ ಮನೆಗೆ ಭೇಟಿ ಮಾಡಿ ಮದುವೆಗೆ ಆಹ್ವಾನಿಸುತ್ತಿದ್ದಾರೆ. ಅದೇ ರೀತಿ ರಾಕಿಂಗ್ ಸ್ಟಾರ್ ಯಶ್ ಅವರ ಮನೆಗೂ ಕೂಡ ಜಮೀ಼ರ್ ಭೇಟಿ ಮಾಡಿ ತಮ್ಮ ಮಗಳ ಮದುವೆಗೆ ಆಹ್ವಾನಿಸಿದ್ದಾರೆ. ಈ ಸಂಧರ್ಭದಲ್ಲಿ ಜಮೀ಼ರ್ ತಮ್ಮ ಮಗ ಜೈದ್ ಖಾನ್ ಅವರಿಗೆ ಯಶ್ ಅವರನ್ನು ಭೇಟಿ ಮಾಡಿಸಿ ಮಾತನಾಡಿಸಿದ್ದಾರೆ. ನಿನ್ನೆಯೂ ಸಹ ಕಿಚ್ಚ ಹಾಗು ಸುಮಲತಾ ಅಂಬರೀಷ್ ಅವರ ಕೊಟ್ಟು ಜಮೀರ್ ಅವರು ಆಮಂತ್ರಣ ನೀಡಿದ್ದಾರೆ.

%d bloggers like this: