ಯಶ್ ಅವರ ಮುಂದಿನ ಚಿತ್ರಕ್ಕೆ ನಿರ್ದೇಶಕ ಫಿಕ್ಸ್, ಕೆಜಿಎಫ್ ಗಿಂತ ದೊಡ್ಡ ಮಟ್ಟದ ಚಿತ್ರ ಸದ್ಯದಲ್ಲೇ ಶುರು

ಸ್ಯಾಂಡಲ್ ವುಡ್ ರಾಕಿಂಗ್ ಸ್ಟಾರ್ ಯಶ್ ಅವರ ಹೊಸ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಯುವ ನಿರ್ದೇಶಕ, ನಿನ್ನೇ ಅಷ್ಟೇ ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನ. ನಟ ಯಶ್ ತಮ್ಮ ಕುಟುಂಬದೊಟ್ಟಿಗೆ ಕೇಕ್ ಕಟ್ ಮಾಡಿ ಸರಳವಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷ ಯಶ್ ಅವರ ಜನ್ಮದಿನದ ಪ್ರಯುಕ್ತ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಯಶ್ ಅವರ ಮನೆ ಬಳಿ ಬಂದು ಜಮಾಯಿಸಿ ತಮ್ಮ ನೆಚ್ಚಿನ ನಟನನ್ನ ಕಣ್ತುಂಬಿಕೊಂಡು ಬರ್ಡೇ ವಿಶ್ ಮಾಡಿ ಹೂ ಹಾರ ಹಾಕಿ ಜೈ ಕಾರ ಹಾಕುತ್ತಿದ್ದರು. ಆದರೆ ಈ ಭಾರಿ ಕೋವಿಡ್ ಕರ್ಫ್ಯೂ ಇರುವ ಕಾರಣ ಇದಕ್ಕೆ ಅವಕಾಶ ಇರಲಿಲ್ಲ.

ಇನ್ನು ಯಶ್ ಅವರ ಹುಟ್ಟುಹಬ್ಬಕ್ಕೆ ಅವರ ಆಪ್ತ ಸಿನಿ ಸ್ನೇಹಿತರು ಮತ್ತು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್ ಚಿತ್ರದ ಪೋಸ್ಟರ್ ಶೇರ್ ಮಾಡಿ ರಾಕಿಬಾಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅದರಂತೆ ಮಫ್ತಿ ಸಿನಿಮಾ ನಿರ್ದೇಶಕ ನರ್ತನ್ ಕೂಡ ವಿಶ್ ಮಾಡಿದ್ದಾರೆ. ಜೊತೆಗೆ ಇಂಟ್ರೆಸ್ಟಿಂಗ್ ಮಾಹಿತಿಯೊಂದನ್ನ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ನರ್ತನ್. ಹೌದು ನರ್ತನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹುಟ್ಟು ಹಬ್ಬದ ಶುಭಾಶಯಗಳು ಯಶ್ ಸರ್. ನಿಮ್ಮನ್ನ ಶೂಟಿಂಗ್ ಸೆಟ್ ನಲ್ಲಿ ಕಾಣಲು ಕಾತುರನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಂದರೆ ರಾಕಿಂಗ್ ಸ್ಟಾರ್ ಯಶ್ ಅವರ ತಮ್ಮ ಮುಂದಿನ ಸಿನಿಮಾ ನರ್ತನ್ ಅವರೊಟ್ಟಿಗೆ ಮಾಡಲಿದ್ದಾರೆ ಎಂಬುದು ಕನ್ಫರ್ಮ್ ಆಯಿತು.

ಯಶ್ ಕೆಜಿಎಫ್ ಸರಣಿಯ ಚಿತ್ರಕ್ಕಾಗಿ ಬರೋಬ್ಬರಿ ನಾಲ್ಕು ವರ್ಷಗಳಿಂದ ಯಾವುದೇ ಹೊಸ ಚಿತ್ರಕ್ಕೆ ಸಹಿ ಮಾಡಿಲ್ಲ. ಇದೀಗ ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು ಬಿಡುಗಡೆಯ ಹೊಸ್ತಿಲಲ್ಲಿದೆ. ಇತ್ತೀಚೆಗೆ ಯಶ್ ಅವರು ಜಿಮ್ ಕಿಟ್ಟಿ ಅವರು ಆರಂಭ ಮಾಡಿರುವ ರೆಸ್ಟೋರೆಂಟ್ ವೊಂದರ ಒಪನಿಂಗ್ ಕಾರ್ಯಕ್ರಮಕ್ಕೆ ಬಂದಿದ್ದಂತಹ ಯಶ್ ಅವರನ್ನ ತಮ್ಮ ಮುಂದಿನ ಚಿತ್ರದ ಬಗ್ಗೆ ಕೇಳಿದಾಗ ನನ್ನ ಮುಂದಿನ ಚಿತ್ರಕ್ಕೆ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇನೆ. ನನ್ನ ಮುಂದಿನ ಸಿನಿಮಾ ನನ್ನ ಸಿನಿಮಾಗಳನ್ನೇ ಬ್ರೇಕ್ ಮಾಡಬೇಕು. ನನ್ನ ಅಭಿಮಾನಿಗಳಿಗೆ ಮಾತ್ರ ನಾನು ಉತ್ತರದಾಯಿಕ ಎಂದು ತಿಳಿಸಿದ್ದಾರೆ.

ಇನ್ನು ತಮ್ಮ ಮೊದಲ ಪ್ರಯತ್ನದಲ್ಲಿಯೇ ಸಕ್ಸಸ್ ಕಂಡು ಸ್ಯಾಂಡಲ್ ವುಡ್ ಭರವಸೆ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ನರ್ತನ್ ಗೆ ರಾಂಕಿಂಗ್ ಸ್ಟಾರ್ ಯಶ್ ಡೈರೆಕ್ಟ್ ಅವರಿಗೆ ಡೈರೆಕ್ಟ್ ಮಾಡಲು ಅವಕಾಶ ಸಿಕ್ಕಿದ್ದು, ನರ್ತನ್ ಅವರ ಕಥೆ ಕೇಳಿ ಓಕೆ ಯಶ್ ಓಕೆ ಎಂದಿದ್ದಾರೆ. ಈ ಚಿತ್ರದ ಕೆಲಸ ಕಾರ್ಯಗಳು ಪ್ರಗತಿಯಲ್ಲಿದ್ದು, ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಯಶ್ ನೇವಿ ಆಫೀಸರ್ ಆಗಿ ಮಿಂಚಲಿದ್ದಾರೆ ಎಂದು ತಿಳಿದು ಬಂದಿದ್ದು ಕೆಲವೇ ತಿಂಗಳಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಯಶ್ ಪಾಲ್ಗೋಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆಯಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರದ ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರ ಯಾವುದು ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ.

%d bloggers like this: