ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಂದರೇನೆ ಒಂದು ವಿಶೇಷತೆ. ಅವರ ಅದ್ಭುತ ಅಭಿನಯಕ್ಕೆ ಎಲ್ಲ ನಿರ್ದೇಶಕರು ತಲೆದೂಗಿ ಅವರಿಗಾಗಿ ಚಿತ್ರಕಥೆ ಹೆಣೆದು ಅವರಿಗೆ ಕಥೆ ಹೇಳಿ ಒಪ್ಪಿಸಿ ಸಿನಿಮಾ ಮಾಡಬೇಕು ಎಂದು ಹಾತೊರೆಯುತ್ತಿರುತ್ತಾರೆ. ಅದರಲ್ಲಿ ರಂಗಿತರಂಗ ಎಂಬ ಅದ್ಭುತ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಕೂಡ ಒಬ್ಬರು, ಹೌದು ಅನುಪ್ ಭಂಡಾರಿ ಒಬ್ಬ ಕಿಚ್ಚನ ಅಪ್ಪಟ ಅಭಿಮಾನಿ, ಅವರಿಗಾಗಿ ಸಿನಿಮಾ ಮಾಡಲು ಕಾಯುತ್ತಿದ್ದರು ಅನುಪ್. ಅದೃಷ್ಟವೆಂಬಂತೆ ಅಂದುಕೊಂಡಿದ್ದಕ್ಕಿಂತ ಮೊದಲೇ ಸುದೀಪ್ ಅವರ ಸಮ್ಮತಿ ಅವರಿಗೆ ಸಿಕ್ಕಿತ್ತು. ಅದೇ ಹುರುಪಿನಿಂದ ಆರಂಭವಾದ ಚಿತ್ರವೇ ಫ್ಯಾಂಟಮ್.

ಅದರ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದ್ದು ಕೆಲವು ಭಾಗದ ಶೂಟಿಂಗ್ ಕೇರಳದಲ್ಲಿ ನಡೆಯುತ್ತಿದೇ. ಕೋರೋಣ ಹೆಮ್ಮಾರಿಯ ಕಾರಣ ಸ್ತಬ್ಧವಾಗಿದ್ದ ಚಿತ್ರರಂಗ ಸದ್ದಿಲ್ಲದೆ ನಿಧಾನವಾಗಿ ಸಡಿಲಗೊಳ್ಳುತ್ತಿದೆ. ನಟರು ಮತ್ತು ನಟಿ ಮಣಿಯರು ಗುಪ್ತವಾಗಿಯೆ ಚಿತ್ರೀಕರಣಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಕೆಲವು ಸಣ್ಣಪುಟ್ಟ ಚಿತ್ರಗಳು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಪ್ರೇಕ್ಷಕರು ಮನೋರಂಜನೆ ಪಡೆಯಲು ಥಿಯೇಟರ್ ಗಳಿಗೆ ಬರುತ್ತಿದ್ದಾರೆ. ಹೀಗಾಗಿ ದೊಡ್ಡ ನಟರ ಚಿತ್ರಗಳು ಕೂಡ ತೆರೆಗೆ ಅಪ್ಪಳಿಸುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ.



ಸುದೀಪ್ ಅಭಿನಯದ ಕೋಟಿಗೊಬ್ಬ3 ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಸಿನಿರಸಿಕರ ಮನಸ್ಸಿಗೆ ಮುದ ನೀಡಲು ಬರುವುದಂತೂ ಪಕ್ಕಾ. ಈ ಮದ್ಯೆಯೆ ದೊಡ್ಡ ಸರ್ಪ್ರೈಸ್ ಒಂದನ್ನು ನೀಡಲು ಫ್ಯಾಂಟಮ್ ಚಿತ್ರತಂಡ ರೆಡಿಯಾಗಿದೆ. ಹೌದು ಇನ್ನೂ ಶೂಟಿಂಗ್ ಹಂತದಲ್ಲಿರುವ ಫ್ಯಾಂಟಮ್ ಚಿತ್ರ ತನ್ನ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಭರ್ಜರಿಯಾಗಿ ಆಚರಿಸುವ ಯೋಜನೆಯಲ್ಲಿದೆ. ಮತ್ತೊಂದು ವಿಶೇಷತೆಯೆಂದರೆ ಅದು ನಮ್ಮ ದೇಶದಲ್ಲಿ ಅಲ್ಲ ವಿದೇಶದಲ್ಲಿ ಎಂಬುದು.



ಹೌದು ಸುದೀಪ್ ಅವರು ಚಿತ್ರರಂಗಕ್ಕೆ ಬಂದು 25ವರ್ಷಗಳನ್ನು ಪೂರೈಸಿದ್ದಾರೆ, ಈ ಸಂಭ್ರಮದ ಜೊತೆಗೆ ಫ್ಯಾಂಟಮ್ ಚಿತ್ರದ ಟ್ರೈಲರ್ ಅನ್ನು ಬಹಳ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಬೇಕು ಎಂಬ ಉದ್ದೇಶವನ್ನು ಚಿತ್ರತಂಡ ಇಟ್ಟುಕೊಂಡಿದೆ. ಈ ಸಂಭ್ರಮವನ್ನು ದುಬೈನ ವಿಶ್ವ ವಿಖ್ಯಾತ ಬುರ್ಜ್ ಖಲೀಫಾ ಕಟ್ಟಡದಲ್ಲಿ ಆಚರಿಸಲು ಯೋಜನೆ ರೂಪಿಸಲಾಗುತ್ತಿದೆ ಅಂತೆ. ಯಶ್ ಚಿತ್ರರಂಗವನ್ನು ಒಂದು ಮಟ್ಟಕ್ಕೆ ಒಯ್ದರೆ ಈಗ ಸುದೀಪ್ ಅವರು ಹಾಡಿನ ಸಮಾರಂಭವನ್ನೇ ದುಬೈ ಅಲ್ಲಿ ಮಾಡುತ್ತಿರುವುದು ಕನ್ನಡದ ಮಟ್ಟಿಗೆ ದಾಖಲೆಯೇ ಸರಿ. ಇದಕ್ಕಾಗಿ ರೂಪರೇಶಗಳು ಸಿದ್ಧಗೊಂಡಿದ್ದು ಮನೋರಂಜನೆಯನ್ನು ಹೊತ್ತು ತರಲು ಸಿದ್ಧವಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಆರಂಭದಿಂದಲೂ ವೈಶಿಷ್ಟತೆಯನ್ನು ಕಾಪಾಡಿಕೊಂಡು ಬಂದ ಫ್ಯಾಂಟಮ್ ಚಿತ್ರತಂಡ ಟ್ರೈಲರ್ ಬಿಡುಗಡಯನ್ನು ಸಹ ವೈಶಿಷ್ಟತೆಯಿಂದ ಮಾಡಿ ಕಿಚ್ಚನ ಅಭಿಮಾನಿಗಳಿಗೆ ರಸದೌತಣ ನೀಡಲು ಸಜ್ಜಾಗಿದೆ.