ಯಶ್ ಅವರು ಒಬ್ಬ ದಕ್ಷಿಣ ಭಾರತದ ದೊಡ್ಡ ಸೂಪರ್ ಸ್ಟಾರ್, ಬಾಲಿವುಡ್ ಸ್ಟಾರ್ ನಟಿ

ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳು ಅಂದರೆ ಅಸಡ್ಡೆ ತೋರುತ್ತಿದ್ದ ಉತ್ತರ ಭಾರತದ ಮಂದಿ ಇಂದು ನಿಬ್ಬೆರಗಿನಿಂದ ನೋಡುವುದಲ್ಲದೆ ಕನ್ನಡ ಸಿನಿಮಾಗಳನ್ನು ಕೂಡ ಕಾತುರದಿಂದ ನೋಡುವಂತಹ ಸಂಧರ್ಭ ಸಮಯ ಒದಗಿ ಬಂದಿದೆ. ಹೌದು ಕಳೆದ ಒಂದು ದಶಕದಿಂದ ಕನ್ನಡ ಸಿನಿರಂಗದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿವೆ. ಸಿನಿಮಾದ ಕಥೆ, ಮೇಕಿಂಗ್, ಗುಣಮಟ್ಟ ಆಧುನಿಕ ತಂತ್ರಜ್ಞಾನ ಎಲ್ಲವನ್ನು ಸಮರ್ಪಕವಾಗಿ ಬಳಸಿಕೊಂಡು ಯಾವ ಭಾಷೆಗೂ ಕಡಿಮೆ ಇಲ್ಲದಂತಹ ಸಿನಿಮಾ ಕನ್ನಡದಲ್ಲಿ ತಯರಾಗುತ್ತಿವೆ. ಕೇವಲ ಬಿಗ್ ಬಜೆಟ್ ಸಿನಿಮಾ ಮಾತ್ರ ಅಲ್ಲದೆ ಕಡಿಮೆ ಬಜೆಟ್ ನಲ್ಲಿ ಉತ್ತಮ ಕಥೆಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಕನ್ನಡ ಸಿನಿಮಾಗಳು ಗುರುತಿಸಿಕೊಂಡಿವೆ.

ಪ್ರಮುಖವಾಗಿ ಭಾರತೀಯ ಚಿತ್ರರಂಗ ಅಲ್ಲದೆ ಇಡೀ ವಿಶ್ವದ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದು ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೊರ ಹೊಮ್ಮಿದ ಈ ಕೆಜಿಎಫ್ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅವರನ್ನ ರಾತ್ರೋರಾತ್ರಿ ನ್ಯಾಷನಲ್ ಸ್ಟಾರ್ ಆಗಿ ಮಾಡಿತು‌. ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಹೆಸರು ಮಾಡಿದ್ದ ಯಶ್ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಕೆಜಿಎಫ್ ಚಿತ್ರ ರಾಕಿ ಬಾಯ್ ಅನ್ನೋ ಗರಿಮೆ ತಂದು ಕೊಟ್ಟಿತು. ಇತ್ತೀಚೆಗೆ ಹಿಂದಿಯ ಜನಪ್ರಿಯ ರಿಯಾಲಿಟಿ ಶೋವೊಂದಕ್ಕೆ ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಅವರು ವಿಶೇಷ ಅತಿಥಿಯಾಗಿ ಆಗಮಿಸಿರುತ್ತಾರೆ.

ಈ ರಿಯಾಲಿಟಿ ಶೋಗೆ ನಟ ರಣ್ ವೀರ್ ಸಿಂಗ್ ನಿರೂಪಕರಾಗಿದ್ದು, ಅತಿಥಿಯಾಗಿ ಆಗಮಿಸಿದ ಸೋನಾಕ್ಷಿ ಅವರಿಗೆ ಯಶ್ ಚಿತ್ರ ತೋರಿಸಿ ಇವರು ಯಾರು ಗೊತ್ತಾ ಎಂದು ಪ್ರಶ್ನೆ ಕೇಳುತ್ತಾರೆ. ಹೌದು ಇವರು ಕೆಜಿಎಫ್ ಚಿತ್ರದ ಹೀರೋ ಸೌತ್ ಸಿನಿ ಸೂಪರ್ ಸ್ಟಾರ್ ನಟ ಯಶ್ ಎಂದು ಉತ್ತರಿಸುತ್ತಾರೆ. ಇದಕ್ಕೆ ಪ್ರತಿಯಾಗಿ ರಣ್ ವೀರ್ ಸಿಂಗ್ ಅವರು ಹೌದು ನಿಮ್ಮ ಉತ್ತರ ಸರಿ ಆದರೆ ಪ್ರಶ್ನೆ ಅದಲ್ಲ. ರಾಕಿಂಗ್ ಸ್ಟಾರ್ ಯಶ್ ಅವರು ಯಾವ ಸಿನಿ ರಂಗಕ್ಕೆ ಸೇರಿದವರಾಗಿದ್ದಾರೆ ಎಂದು ಪ್ರಶ್ನೆ ಕೇಳುತ್ತಾರೆ.

ಅದಕ್ಕೆ ಆಯ್ಕೆಯಾಗಿ ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಎಂಬ ನಾಲ್ಕು ಆಯ್ಕೆ ನೀಡುತ್ತಾರೆ. ಇದಕ್ಕೆ ಗೊಂದಲವಾದ ಸೋನಾಕ್ಷಿ ಫೋನೋ ಫ್ರೆಂಡ್ ಆಯ್ಕೆ ಮಾಡಿ ಸ್ಯಾಂಡಲ್ ವುಡ್ ಎಂದು ಉತ್ತರಿಸುತ್ತಾರೆ. ಒಟ್ಟಾರೆಯಾಗಿ ಬಾಲಿವುಡ್ ರಿಯಾಲಿಟಿ ಶೋವಚಂದರಲ್ಲಿ ಕನ್ನಡದ ನಟನೊಬ್ಬನ ಬಗ್ಗೆ ಪ್ರಶ್ನೆ ಕೇಳಿದ್ದಾರೆ ಅಂದರೆ ರಾಕಿಂಗ್ ಸ್ಟಾರ್ ಯಶ್ ಅವರ ಜನಪ್ರಿಯತೆ ಎಷ್ಟಿರಬಹುದು ಎಂದು ತಿಳಿಯಬಹುದು. ಇನ್ನು ಕನ್ನಡದ ಗೋಲ್ಡನ್ ಸಿನಿಮಾ ಕೆಜಿಎಫ್ ಚಾಪ್ಟರ್2 ಸಿನಿಮಾ ಇದೇ ವರ್ಷ ಏಪ್ರಿಲ್ ತಿಂಗಳ 14 ರಂದು ವರ್ಲ್ಡ್ ವೈಡ್ ರಿಲೀಸ್ ಆಗಲಿದ್ದು, ಈ ಚಿತ್ರ ನೋಡಲು ವಿಶ್ವ ಸಿನಿ ರಂಗವೇ ಕಾತುರದಿಂದ ಕಾಯುತ್ತಿದೆ.

%d bloggers like this: