ಯಶ್ ಹಾಗು ಪುನೀತ್ ರಾಜಕುಮಾರ್ ಆಯಿತು, ಈಗ ನಟ ಚೇತನ್ ಕುಮಾರ್ ಅವರ ಸರದಿ

ನಮ್ಮ ಕನ್ನಡ ಚಿತ್ರರಂಗ ದಲ್ಲಿ ಮಿಂಚಿ ಬೇರೆ ಭಾಷೆಯಲ್ಲಿಯು ಅವಕಾಶಗಳನ್ನು ಗಿಟ್ಟಿಸಿಕೊಂಡು ಅಲ್ಲಿಯೂ ನಟಿಸಿ ಯಶಸ್ವಿಯಾದ ನಟರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೊಬ್ಬರೇ ಎನ್ನಬಹುದು. ಹೌದು ಅವರ ಅಭಿನಯಕ್ಕೆ ಮನಸೋತು ಪರಭಾಷೆಯ ನಿರ್ದೇಶಕ ನಿರ್ಮಾಪಕಾರು ಅವರಿಗೆ ಅವಕಾಶಗಳನ್ನು ಕೊಟ್ಟರು, ಅದೆಲ್ಲದರಲ್ಲು ಸುದೀಪ್ ನಟಿಸಿಸೈ ಎನಿಸಿಕೊಂಡವರು. ಆದರೆ ಈಗ ಕನ್ನಡದ ಮತ್ತೊಬ್ಬ ನಟನಿಗೆ ಟಾಲಿವುಡ್ ಇಂಡಸ್ಟ್ರಿಯಲ್ಲಿ ನಟನಾಗುವ ಅವಕಾಶ ಒದಗಿ ಬಂದಿದೆ. ಹೌದು ಅವರು ಬೇರೆ ಯಾರು ಅಲ್ಲ ಮೈನಾ ಚಿತ್ರದ ಮೂಲಕ ಎಲ್ಲರ ಮನೆಮಾತಾದ ನಟ ಚೇತನ್. ಚೇತನ್ ಅವರು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ಯಶಸ್ವಿಯಾದರೂ ಕೂಡ ಅವರ ಗಮನ ಸಾಮಾಜಿಕ ಕಾರ್ಯಗಳತ್ತಲೇ ಇತ್ತು, ಹೀಗಾಗಿ ಅವರು ನಟಿಸಿದ ಚಿತ್ರಗಳ ಸಂಖ್ಯೆ ತುಂಬಾ ಕಡಿಮೆ ಎನ್ನಬಹುದು.

ಆದರೆ ಈಗ ಚೇತನ್ ತೆಲುಗಿನಲ್ಲಿ ಬಣ್ಣ ಹಚ್ಚಲು ರೆಡಿ ಆಗಿದ್ದರೆ, ಇನ್ನೂ ಹೆಸರಿಡದ ಸಿನಿಮಾದಲ್ಲಿ ಚೇತನ್ ಅಭಿನಯಿಸಲು ಸಜ್ಜಾಗಿದ್ದು ಚಿತ್ರದ ಮಹೂರ್ತ ಇತ್ತೀಚಿಗಷ್ಟೇ ಹೈದರಾಬಾದ್ ನಲ್ಲಿ ನಡೆದಿದೆ. ತೆಲುಗು ಭಾಷೆ ಜೊತೆಗೆ ಕನ್ನಡ ಭಾಷೆಯಲ್ಲಿಯೂ ಈ ಚಿತ್ರ ತೆರೆಕಾಣುವ ಸಾಧ್ಯತೆ ಇದೆ, ಚಿತ್ರದ ಶೀರ್ಷಿಕೆಯನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತ ತೆಲುಗಿನ ಖ್ಯಾತ ಚಲನಚಿತ್ರ ರಚನಾಕಾರರದಂತಹ ಚಕ್ರವರ್ತಿ ಅವರು ತಿಳಿಸಿದರು, ಇದೆ ಮೊದಲ ಬಾರಿಗೆ ಚೇತನ್ ಅವರು ಹಾಸ್ಯಮಯ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ, ಚಿತ್ರದ ಕುರಿತು ಮಾತನಾಡಿದ ನಟ ಚೇತನ್ ನಾನು ಹಿಂದೆಂದೂ ಈ ರೀತಿಯ ಪಾತ್ರದಲ್ಲಿ ನಟಿಸಿರಲಿಲ್ಲ, ತೆಲುಗು ಚಿತ್ರರಂಗದಲ್ಲಿಯೂ ನನಗೆ ಅವಕಾಶ ಸಿಕ್ಕಿದ್ದು ಖುಷಿ ತಂದಿದೆ ಎಂದಿದ್ದಾರೆ, ಹೊಸ ಪ್ರಯತ್ನಕ್ಕೆ ಕೈಹಾಕಿರುವ ಕನ್ನಡದ ನಟ ಚೇತನ್ ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸೋಣ.

%d bloggers like this: