ಯಶ್, ಪುನೀತ್ ರಾಜಕುಮಾರ್ ಆಯಿತು, ಈಗ ಧ್ರುವ ಸರ್ಜಾ ಸಜ್ಜಾದ್ರು

ನಟ ಆಕ್ಷನ್ ಪ್ರಿನ್ಸ್ ದೃವ ಸರ್ಜಾ ಇದ್ದಕಿದ್ದಂತೆ ಹೈದರಾಬಾದ್ ಹಾರಲು ಕಾರಣವೇನು ಎಂಬುದಕ್ಕೆ ಇಲ್ಲಿದೆ ಉತ್ತರ. ಹೌದು ದೃವಸರ್ಜಾ ಅಭಿನಯದ ಪೊಗರು ಸಿನಿಮಾವು ಕನ್ನಡ, ತೆಲುಗು ಭಾಷೆಗಳಲ್ಲಿ ತೆರೆಕಾಣಲು ರೆಡಿಯಾಗಿದೆ. ಪೊಗರು ಸಿನಿಮಾದ ಖರಾಬು ಸಾಂಗ್ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಠಿ ಮಾಡಿದೆ. ಅಂದಹಾಗೆ ಈ ಚಿತ್ರಕ್ಕೆ ನಂದಕಿಶೋರ್ ನಿರ್ದೇಶನ ಮಾಡಿದ್ದಾರೆ. ರ್ಯಾಪರ್ ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದು ಹಾಡುಗಳು ಬಂಪರ್ ಹಿಟ್ ಆಗಿದೆ, ಈಗಾಗಲೇ ಖರಾಬು ಹಾಡು ಕನ್ನಡದ ಅತ್ಯಧಿಕ ವೀಕ್ಷಣೆಯ ಹಾಡಾಗಿದೆ.

ಪೊಗರು ಸಿನಿಮಾವು ಎರಡು ಭಾಷೆಯಲ್ಲಿ ಬಿಡುಗಡೆ ಗೊಳಿಸುತ್ತಿರುವುದರಿಂದ ಚಿತೊರತಂಡದ ಜವಾಬ್ದಾರಿ ಹೆಚ್ಚಾಗಿದೆ ಎನ್ನಬಹುದಾಗಿದೆ. ಇನ್ನು ಪೊಗರು ಸಿನಿಮಾದ ಕರಾಬು ಸಾಂಗ್ ಎಲ್ಲಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಈ ಪೊಗರು ಚಿತ್ರವನ್ನುಆಂಧ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆಗೊಳಿಸುವ ವಿಚಾರವಾಗಿ ಚಿತ್ರದ ನಾಯಕ ದೃವಸರ್ಜಾ ಮತ್ತು ನಿರ್ದೇಶಕ ನಂದಕಿಶೋರ್ ಇಬ್ಬರೂ ಒಟ್ಟಾಗಿ ಹೈದರಾಬಾದ್ ತೆರಳಿದ್ದಾರೆ. ಪೊಗರು ಸಿನಿಮಾದಲ್ಲಿ ನಾಯಕಿಯಾಗಿ ಸೌತ್ ಇಂಡಿಯನ್ ಕ್ರಷ್ ಆಗಿರುವ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಇವರ ಜೊತೆಗೆ ತಬಲಾ ನಾಣೆ ಮತ್ತು ಕುರಿ ಪ್ರತಾಪ್ ಹಾಸ್ಯ ಪಾತ್ರಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷದ ಜನವರಿಯಲ್ಲಿ ಪೊಗರು ತೋರಿಸಲು ರೆಡಿ ಯಾಗುತ್ತಿದ್ದಾರೆ. ದೃವಸರ್ಜಾ ಇನ್ನು ಪೊಗರು ಸಿನಿಮಾ ರಿಲೀಸ್ ಆಗುವ ಮುಂಚೆ ಮತ್ತೊಂದು ಸಿನಿಮಾಗೆ ಇದೇ ಜೋಡಿ ಸಜ್ಜಾಗಿದೆ. ಪೊಗರು ಸಿನಿಮಾದ ಖರಾಬು ಹಾಡು ಕೇವಲ ಕರ್ನಾಟಕದಲ್ಲಿ ಮಾತ್ರ ಹಿಟ್ ಆಗಿದ್ದಲ್ಲದೆ ಆಂಧ್ರ ತೆಲಂಗಾಣದಲ್ಲೂ ಕೂಡ ಧೂಳೆಬ್ಬಿಸಿದೆ. ಇನ್ನು ನಂದಕಿಶೋರ್ ಮತ್ತು ಧೃವಸರ್ಜಾ ಹೈದರಾಬಾದ್ ಗೆ ತೆರಳಿರುವ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

%d bloggers like this: