ಒಬ್ಬ ನಿಜವಾದ ಪ್ರತಿಭೆಗೆ ಒಂದು ಸರಿಯಾದ ಅವಕಾಶ ಸಿಕ್ಕರೆ ಸಾಕು ಆ ವ್ಯಕ್ತಿ ಮರಳಿ ಹಿಂದೆ ತಿರುಗಿ ನೋಡಲಾರ. ಈ ಮಾತಿಗೆ ಒಂದು ಅದ್ಭುತವಾದ ಉದಾಹರಣೆ ಎಂದರೆ ನಮ್ಮ ಕನ್ನಡದ ನಟ ಭಯಂಕರ ಡಾಲಿ ಖ್ಯಾತಿಯ ಧನಂಜಯ ಅವರು. ಜಯನಗರ 4thಬ್ಲಾಕ್ ಎಂಬ ಕಿರುಚಿತ್ರದೊಂದಿಗೆ ಕರಿಯರ ಅನ್ನು ಆರಂಭಿಸಿದ ಧನಂಜಯ್ ತಮಗೆ ಸಿಕ್ಕ ಅವಕಾಶಗಳಲ್ಲೆಲ್ಲ ತಮ್ಮೊಳಗಿದ್ದ ಪ್ರತಿಭೆಯನ್ನು ತೋರಿಸುತ್ತಾ ಬಂದರು. ಆದರೆ ಅವರ ಒಳಗೆ ಇರುವ ಕಲಾ ಸರಸ್ವತಿಯನ್ನು ಹೆಕ್ಕಿ ತೆಗೆದಿದ್ದು ನಮ್ಮ ಕನ್ನಡದ ಸ್ಟಾರ ನಿರ್ದೇಶಕರುಗಳಲ್ಲಿ ಒಬ್ಬರಾದ ಪಕ್ಕ ಲೋಕಲ್ ಚಿತ್ರಗಳನ್ನು ನೈಜವಾಗಿ ಕಟ್ಟಿಕೊಡುವ ಸುಕ್ಕಾ ಸೂರಿ.

ಹೌದು ಸ್ವತಹ ಧನಂಜಯ್ ಅವರೇ ಒಂದು ಸಮಾರಂಭದಲ್ಲಿ ನನಗೆ ಟಗರು ಎಂಬ ಚಿತ್ರದಲ್ಲಿ ನಿರ್ದೇಶಕ ಸೂರಿ ಅವರು ಡಾಲಿ ಎಂಬ ಪಾತ್ರವನ್ನು ನೀಡದಿದ್ದರೆ ನಾನು ಇನ್ನು ಎಷ್ಟು ಬೈಸಿಕಲ್ ಹೊಡೆಯಬೇಕಿತ್ತು ಗೊತ್ತಿಲ್ಲ ಎಂದು ಹೇಳಿದ್ದರು. ಅವರು ಹೇಳಿದ ಮಾತು ಅಕ್ಷರಶಹ ನಿಜ, ಟಗರು ಎಂಬ 2018ರ ಬಿಗ್ ಬ್ಲಾಕ್ ಬಸ್ಟರ್ ಸಿನಿಮಾ ನಮ್ಮ ಕನ್ನಡಕ್ಕೆ ಒಬ್ಬ ಅದ್ಭುತ ಪ್ರತಿಭೆಯನ್ನು ನೀಡಿದ ಚಿತ್ರ. ಡಾಲಿ ಎಂಬ ಪಾತ್ರದಲ್ಲಿ ಧನಂಜಯ್ ಅಭಿನಯಕ್ಕೆ ಮನಸೋಲದ ಪ್ರೇಕ್ಷಕರಿಲ್ಲ. ಆ ಒಂದು ಪಾತ್ರ ಎಷ್ಟರ ಮಟ್ಟಿಗೆ ಹೆಸರುವಾಸಿ ಆಯಿತೆಂದರೆ ಕೇವಲ ಕನ್ನಡ ಭಾಷೆಯಲ್ಲಿ ಬೇರೆ ಭಾಷೆಯ ನಿರ್ದೇಶಕರು ನಿರ್ಮಾಪಕರು ಸಹ ಒಂದು ನಿಮಿಷ ಮೂಕವಿಸ್ಮಿತರಾದರು. ಇದೇ ಕಾರಣಕ್ಕೆ ಈಗ ಡಾಲಿ ಧನಂಜಯ್ ಸುದ್ದಿಯಲ್ಲಿದ್ದಾರೆ.

ಒಂದು ಕಾಲದಲ್ಲಿ ಸಿನೆಮಾಗಳಿಗಾಗಿ ಕಾಯುತ್ತಿದ್ದ ಧನಂಜಯ್ ಈಗ ಸರಿಯಾಗಿ ನಿದ್ರೆ ಮಾಡಲು ಆಗದಷ್ಟು ಬಿಜಿಯಾಗಿದ್ದಾರೆ ಎಂದರೆ ನೀವು ನಂಬಲೇಬೇಕು. ಒಂದೇ ದಿನಕ್ಕೆ ಎರಡೆರಡು ಭಾಷೆಯ ಎರಡು ಎರಡು ವಿಭಿನ್ನ ಚಿತ್ರಗಳಲ್ಲಿ ಡಾಲಿ ಅಭಿನಯಿಸುತ್ತಿರುವುದು ಅವರ ಪ್ರತಿಭೆಗೆ ಸಿಕ್ಕ ಪ್ರತಿಫಲ ಎನ್ನಬಹುದು. ಕನ್ನಡದ ಸ್ಟಾರ್ ನಟನಾಗಿ ಹೊರಹೊಮ್ಮಿದ್ದ ಧನಂಜಯ್ ಅವರ ಬರೋಬ್ಬರಿ ಐದು ಚಿತ್ರಗಳ ಚಿತ್ರೀಕರಣ ನಡೆದಿದೆ. ಅದರ ಜೊತೆಗೆಯೇ ತೆಲುಗು ಭಾಷೆಯ ಪುಷ್ಪಂ ಹಾಗೂ ತಮಿಳು ಭಾಷೆಯ ವಿಕ್ರಂ ಪ್ರಭು ಸಿನಿಮಾದ ಚಿತ್ರೀಕರಣದಲ್ಲಿ ಧನಂಜಯ್ ಮುಖ್ಯ ಪಾತ್ರಕ್ಕಾಗಿ ಪಾಲ್ಗೊಳ್ಳುತ್ತಿದ್ದಾರೆ. ಕೇವಲ ಕನ್ನಡ ಭಾಷೆಗೆ ಸೀಮಿತವಾಗಿದ್ದ ಡಾಲಿ ಈ ಮೂಲಕ ಸುದೀಪ್ ಚೇತನ್ ಮುಂತಾದ ನಟರ ನಂತರ ಎಲ್ಲ ಭಾಷೆಗಳಲ್ಲಿ ನಟಿಸುತ್ತಿರುವ ಕನ್ನಡದ ಹೆಮ್ಮೆಯಾಗಿದ್ದಾರೆ.

ಹೀಗಾಗಿ ವಾರ ಒಂದರಲ್ಲಿ ಧನಂಜಯ್ ಬೆಂಗಳೂರು ಹೈದರಾಬಾದ್ ಚೆನ್ನೈ ನಡುವೆ ಸತತವಾಗಿ ಓಡಾಡುತ್ತಿರುತ್ತಾರೆ. ಇದರ ನಡುವೆ ಅವರದ್ದೇ ಸ್ವಂತ ಬ್ಯಾನರಿನಲ್ಲಿ ನಿರ್ಮಾಣವಾದ ಮೊದಲ ಚಿತ್ರ ಬಡವರ ರಾಸ್ಕಲ್ ಚಿತ್ರದ ಶೂಟಿಂಗ್ ಮುಕ್ತಾಯ ಗೊಂಡಿದ್ದು 2021ರಲ್ಲಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಇದರ ಕುರಿತು ಮಾತನಾಡಿದ ಧನಂಜಯ್ ಲಾಕ್ಡೌನ್ ಸಮಯದಲ್ಲಿ ಆರು ತಿಂಗಳು ಸುಮ್ಮನೆ ಕುಳಿತುಕೊಳ್ಳುವಂತಾಯಿತು ಆದರೆ ಈಗ ನಿಲ್ಲುವಷ್ಟು ಕೂಡ ಸಮಯವಿಲ್ಲ, ನನಗೆ ಬೇರೆ ಭಾಷೆಯ ಸಿನಿಮಾ ಅವಕಾಶಗಳನ್ನು ನೀಡಿದವರಲ್ಲಿ ನನಗೆ ಯಾರೊಬ್ಬರೂ ಪರಿಚಿತರಲ್ಲ.

ಸಿನಿ ಚಿತ್ರರಂಗದ ಯಾವ ದೊಡ್ಡವರು ಸಹ ನನ್ನ ಹೆಸರನ್ನು ರೆಫರ್ ಮಾಡಿಲ್ಲ, ಇವೆಲ್ಲ ಟಗರು ಚಿತ್ರದ ಡಾಲಿ ಪಾತ್ರ ಮತ್ತು ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದ ಸೀನ ಎಂಬ ಪಾತ್ರ ನೋಡಿ ತೆಲುಗು ಮತ್ತು ತಮಿಳಿನ ನಿರ್ದೇಶಕರು ನಮ್ಮ ಚಿತ್ರಕ್ಕೆ ನೀವೇ ಬೇಕು ಎಂದು ಫೋನ್ ಮಾಡಿದರು ಎಂದು ಧನಂಜಯ್ ಹೇಳಿದರು. ನೋಡಿ ನಾವು ಮೊದಲೇ ಹೇಳಿದಂತೆ ಪ್ರತಿಭೆಗೆ ತಕ್ಕ ಅವಕಾಶ ಸಿಕ್ಕರೆ ಒಬ್ಬ ವ್ಯಕ್ತಿ ಯಾವ ಮಟ್ಟಿಗೆ ಬೆಳೆಯುತ್ತಾನೆ ಎಂಬುದಕ್ಕೆ ಧನಂಜಯ್ ಅವರೇ ನಮ್ಮ ಕಣ್ಣ ಮುಂದಿರುವ ಸಾಕ್ಷಿ. ಫೆಬ್ರುವರಿ ವರೆಗೂ ತಮಿಳು ಮತ್ತು ತೆಲುಗು ಚಿತ್ರಗಳು ಚಿತ್ರೀಕರಣವನ್ನು ಮುಗಿಸಿ ಮುಂದೆ ಕನ್ನಡದ ಹೆಡ್ ಬುಷ್ ಚಿತ್ರದ ತಂಡವನ್ನು ಸೇರಿಕೊಳ್ಳಲಿದ್ದೇನೆ ಎಂದು ಧನಂಜಯ್ ಹೇಳಿದರು.