ಯಶ್, ಸುದೀಪ್, ದರ್ಶನ್ ಆಯಿತು ಇದೀಗ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಸರದಿ

70 ರ ದಶಕದ ಅಂಡರ್ ವರ್ಲ್ಡ್ ಡಾನ್ ಆಗಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಿಂಚಲಿದ್ದಾರೆ ಹ್ಯಾಟ್ರಿಕ್ ಹೀರೋ, ಚಂದನವನದಲ್ಲಿ ಉತ್ಸುಕತೆಯ ನಟ ಅಂದರೆ ತಟ್ಟನೆ ನೆನಪಿಗೆ ಬರುವುದು ಶಿವಣ್ಣ. ತಮ್ಮ ಐವತ್ತೈದರ ವಯಸ್ಸಿನಲ್ಲಿಯೂ ಕೂಡ ಇಪ್ಪತ್ತೈದರ ಹುಡುಗರಂತೆ ಲವಲವಿಕೆಯಿಂದ ಸದಾ ಕ್ರಿಯಾಶೀಲರಾಗಿ ವರ್ಷಪೂರ್ತಿ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವ ಶಿವರಾಜ್ ಕುಮಾರ್ ಯುವ ನಟರಿಗೆ ಸ್ಪೂರ್ತಿ ಆಗಿದ್ದಾರೆ. ಇತ್ತೀಚೆಗೆ ತಾನೇ ಸೋದರ ಅಪ್ಪು ಅವರ ಅಗಲಿಕೆಯಿಂದ ನೊಂದಿರುವ ಶಿವಣ್ಣ ಇದೀಗ ಮತ್ತೆ ಸಿನಿಮಾಗಳತ್ತ ಗಮನ ಹರಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಶಿವಣ್ಣ ಅವರು ಒಂದು ರೀತಿಯಾಗಿ ಸೀಸನ್ ಲೆಸ್ ಹಣ್ಣಿನ ರೀತಿ.

ವರ್ಷ ಪೂರ ಒಂದಲ್ಲ ಒಂದು ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿರುತ್ತಾರೆ. ಬಿಡುವಂತೂ ಇರುವುದಿಲ್ಲ‌. ಶೂಟಿಂಗ್ ಇಲ್ಲದ ವೇಳೆ ಮನೆಯವರೊಂದಿಗೆ ಕಾಲ ಕಳೆಯುತ್ತಾರೆ. ಇತ್ತೀಚೆಗೆ ತಾನೇ ತಮ್ಮ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಶಕ್ತಿಧಾಮ ಮಕ್ಕಳೊಂದಿಗೆ ಬೆರೆತು ಅವರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಹರ್ಷ ಅವರ ನಿರ್ದೇಶನದ ಭಜರಂಗಿ 2 ಸಿನಿಮಾ ಉತ್ತಮ ಪ್ರದರ್ಶನ ಕಂಡು ಯಶಸ್ಸು ಪಡೆದುಕೊಂಡಿದೆ. ಮತ್ತೆ ಇದೇ ಹರ್ಷ ಅವರೊಟ್ಟಿಗೆ ವೇದ ಎಂಬ ಚಿತ್ರ ಮಾಡುತ್ತಿದ್ದಾರೆ.

ಈ ವೇದ ಸಿನಿಮಾಗೆ ಶಿವಣ್ಣ ಮತ್ತು ಗೀತಾ ಅವರೇ ಬಂಡವಾಳ ಹೂಡುತ್ತಿರುವುದು ವಿಶೇಷವಾಗಿದೆ. ಇದರ ಜೊತೆಗೆ ಭೈರಾಗಿ ಎಂಬ ಸಿನಿಮಾದಲ್ಲಿಯೂ ಕೂಡ ಶಿವಣ್ಣ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಕೂಡ ಅರ್ಧದಷ್ಟು ಮುಗಿದಿದೆ ಎಂದು ತಿಳಿದು ಬಂದಿದೆ. ಇದರ ನಡುವೆ ಶಿವಣ್ಣ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸಹಿ ಮಾಡಿದ್ದಾರಂತೆ. ಹೌದು ರಿಯಲ್ ಸ್ಟಾರ್ ಉಪೇಂದ್ರ ಅವರ ಬುದ್ದಿವಂತ 2. ಸಿನಿಮಾ ನಿರ್ದೇಶನ ಮಾಡಿದ ಡೈರೆಕ್ಟರ್ ಜಯರಾಮ್ ಉರುಫ್ ಜೈ ಅವರು ಶಿವಣ್ಣ ಅವರಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಜೈರಾಮ್ ಶಿವಣ್ಣ ಅವರಿಗೆ ಹೊಸ ಪರಿಚಯವೇನಲ್ಲ‌.

ಜೈ ರಾಮ್ ಅವರು ಈ ಹಿಂದೆ ಆರ್.ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬಂದ ಮೈಲಾರಿ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು‌. ಇದೀಗ ಶಿವಣ್ಣ ಅವರ ಕೈಯಲ್ಲಿ ಮತ್ತೆ ಲಾಂಗ್ ಇಡಿಸಲಿದ್ದಾರಂತೆ ಜೈ ರಾಮ್. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಆದರೆ ಈ ಸಿನಿಮಾವನ್ನು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಮ ಡಲಾಗುತ್ತದೆಯಂತೆ. ಇನ್ನು ಈ ಶಿವಣ್ಣ ಅವರ ಪ್ಯಾನ್ ಇಂಡಿಯಾ ಸಿನಿಮಾಗೆ ಬಿಂದ್ಯಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಕೇಶವ್ ಎಂಬುವವರು ಬಂಡವಾಳ ಹೂಡುತ್ತಿದ್ದಾರೆ.

ಕೇಶವ್ ಇತ್ತೀಚೆಗಷ್ಟೆ ರ್ಯಾಪರ್ ಚಂದನ್ ಶೆಟ್ಟಿ ಮಾಡಿದ ಲಕ ಲಕ ಲ್ಯಾಂಬೋರ್ಗಿನಿ ಆಲ್ಬಂ ಸಾಂಗ್ ಗೆ ಬಂಡವಾಳ ಹೂಡಿದ್ದರು. ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಕುಣಿದು ಕುಪ್ಪಳಿಸಿದ ಈ ಲಕ ಲಕ ಲ್ಯಾಂಬೋರ್ಗಿನಿ ಹಾಡು ಯೂಟ್ಯೂಬ್ ನಲ್ಲಿ ದಾಖಲೆ ವೀಕ್ಷಣೆ ಕಂಡಿತ್ತು. ಇನ್ನು ನಿರ್ಮಾಪಕ ಕೇಶವ್ ಅವರು ನಿರ್ಮಾಣ ಮಾಡಲು ಹೊರಟಿರುವ ಈ ಸಿನಿಮಾ ಎಪ್ಪತ್ತರ ದಶಕದ ರೌಡಿಸಂ ಕಥೆಯನ್ನ ಹೊಂದಿದೆಯಂತೆ. ಈ ಚಿತ್ರದಲ್ಲಿ ಶಿವಣ್ಣ ರೆಟ್ರೋ ಲುಕ್ ನಲ್ಲಿ ಖಡಕ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

%d bloggers like this: