ಯಶಸ್ವಿ 250 ಸಂಚಿಕೆಗಳನ್ನು ಪೂರೈಸಿದ ಕನ್ನಡದ ಸುಪ್ರಸಿದ್ಧ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯ ಈ ಧಾರಾವಾಹಿಯು ಕೂಡ ಇದೀಗ ಬರೋಬ್ಬರಿ ಇನ್ನೂರೈವತ್ತು ಸಂಚಿಕೆಗಳನ್ನ ಯಶಸ್ವಿಯಾಗಿ ಪೂರೈಸಿ ಸಂಭ್ರಮಾಚಾರಣೆ ಮಾಡಿದೆ. ಅದು ಯಾವ ಧಾರಾವಾಹಿ ಅಂತೀರಾ. ಈ ವಿಚಾರವನ್ನ ನಾವು ಈ ಲೇಖನದಲ್ಲಿ ತಿಳಿಸ್ತಿದಿವಿ ಮುಂದೆ ಓದಿ. ಕನ್ನಡ ಕಿರುತೆರೆಯಲ್ಲಿ ಹೆಚ್ಚು ಜನಪ್ರಸಿದ್ದತೆ ಪಡೆದಿರುವ ವಾಹಿನಿ ಅಂದ್ರೆ ಕಲರ್ಸ್ ಕನ್ನಡ. ಕಲರ್ಸ್ ಕನ್ನಡ ವಾಹಿನಿ ಇಷ್ಟು ಪ್ರಸಿದ್ದತೆ ಪಡೆದಿದೆ ಅಂದ್ರೆ ಅದಕ್ಕೆ ಬಹುಮುಖ್ಯ ಕಾರಣ ಕಲರ್ಸ್ ಕನ್ನಡದಲ್ಲಿ ಧಾರಾವಾಹಿಯ ಜೊತೆ ಜೊತೆಗೆ ರಿಯಾಲಿಟಿ ಶೋಗಳು ಕೂಡ ಕನ್ನಡ ಕಿರುತೆರೆ ವೀಕ್ಷಕರನ್ನ ತನ್ನತ್ತ ಹಿಡಿದಿಟ್ಟಕೊಂಡಿದೆ. ಈ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲಾ ಧಾರಾವಾಹಿಗಳು ಉತ್ತಮ ಕಥಾಹಂದರ ಮತ್ತು ಅತ್ಯುತ್ತಮ ಮೇಕೀಂಗ್ ಮೂಲಕ ಗುಣಮಟ್ಟವನ್ನು ಹೊಂದಿವೆ.

ಅಂತಹ ಧಾರಾವಾಹಿಗಳ ಸಾಲಿಗೆ ಸೇರಿರುವ ಕನ್ಯಾಕುಮಾರಿ ಧಾರಾವಾಹಿ ಇದೀಗ ಯಶಸ್ವಿಯಾಗಿ ಇನ್ನೂರೈವತ್ತು ಸಂಚಿಕೆಗಳನ್ನ ಪೂರೈಸಿಕೊಂಡಿದೆ. ಒಬ್ಬ ಸಾಮಾನ್ಯ ವ್ಯಕ್ತಿಯನ್ನ ತನ್ನ ಮಂತ್ರ ಶಕ್ತಿಯಿಂದ ಯಾಮಿನಿ ವಶಪಡಿಸಿಕೊಂಡ ಕಾರಣ ಯಾಮಿನಿಗೆ ಹೊಡೆತ ನೀಡಬೇಕು ಎಂಬ ಉದ್ದೇಶದಿಂದ ಕನ್ಯಾಕುಮಾರಿ ದೇವತೆ ರೂಪದಲ್ಲಿ ನೆರವಾಗುವಂತಹ ಕಥೆಯನ್ನ ಅದ್ಭುತ ಮೇಕಿಂಗ್ ಮೂಲಕ ಕಿರುತೆರೆ ವೀಕ್ಷಕರನ್ನ ರಂಜಿಸುತ್ತಾ ಸಾಗಿ ಬಂದಿದೆ. ಕನ್ಯಾಕುಮಾರಿ ಧಾರಾವಾಹಿಯನ್ನ ರಘು ಚರಣ್ ತಿಪಟೂರ್ ನಿರ್ದೇಶನ ಮಾಡಿದ್ದು, ಪ್ರೀತಿ ಆರ್ ಪ್ರೀತಮ್ ನಿರ್ಮಾಣದ ಜವಬ್ದಾರಿಯನ್ನ ಹೊತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಆಸೀಯಾ ಫಿರಾಡೋಸ್, ರಶ್ಮಿತಾ ಜೆ ಶೆಟ್ಟಿ, ಯಶ್ ಗೌಡ , ಪ್ರೀತಮ್ ಎಂ ಎನ್.ನಕುಲ್ ಶರ್ಮಾ, ಯಮುನಾ ಶ್ರೀನಿಧಿ, ಸ್ವಾತಿ ಎಚ್.ವಿ. ತನಿಶಾ ಕುಪ್ಪಂದ ತಮ್ಮ ಪಾತ್ರಗಳಿಗೆ ಜೀವತುಂಬಿ ನಟಿಸಿದ್ದಾರೆ.

ಒಟ್ಟಾರೆಯಾಗಿ ಕನ್ಯಾಕುಮಾರಿ ಧಾರಾವಾಹಿಯು ತನ್ನ ವಿವಿಧ ರೀತಿಯ ಕಥಾ ಸನ್ನಿವೇಶದ ಮೂಲಕ ವೀಕ್ಷಕರಿಗೆ ಉತ್ತಮವಾಗಿ ಮನರಂಜನೆ ನೀಡುತ್ತಾ ನಾಡಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿದೆ. ಇದೀಗ ಈ ಕನ್ಯಾಕುಮಾರಿ ಧಾರಾವಾಹಿಯು ಎಲ್ಲಿಯೂ ಕೂಡ ಯಾವುದೇ ಸಂಚಿಕೆಯಲ್ಲಿಯೂ ಕೂಡ ಎಡವದೇ ನಿರಂತರವಾಗಿ ಇನ್ನೂರೈವತ್ತು ಸಂಚಿಕೆಗಳನ್ನ ಯಶಸ್ವಿಯಾಗಿ ಪೂರೈಸಿದೆ. ಈ ಹಿನ್ನೆಲೆ ಇಡೀ ಧಾರಾವಾಹಿ ತಂಡ ಸಂಭ್ರಮಾಚರಣೆ ಮಾಡಿದೆ. ಒಟ್ಟಾರೆಯಾಗಿ ಕನ್ನಡ ಕಿರುತೆರೆಗೆ ಪರಭಾಷೆಯ ಧಾರಾವಾಹಿಗಳು ಡಬ್ಬಿಂಗ್ ಆಗಿ ಕನ್ನಡ ಮೂಲ ಧಾರಾವಾಹಿಗಳಿಗೆ ಪರೋಕ್ಷವಾಗಿ ಸ್ಪರ್ಧೆಯೊಡ್ಡುತ್ತಿದ್ದರು ಕೂಡ ನಮ್ಮ ಕನ್ನಡ ನೆಲದ ಧಾರಾವಾಹಿಗಳು ಸಮರ್ಥವಾಗಿ ನಿಭಾಯಿಸಿ ತಾವು ಯಾವ ಭಾಷೆಯ ಧಾರಾವಾಹಿಗೂ ಕೂಡ ಕಡಿಮೆ ಇಲ್ಲದಂತೆ ಅತ್ಯುತ್ತಮವಾಗಿ ಧಾರಾವಾಹಿಗಳು ಮೂಡಿ ಬರುತ್ತಿವೆ.

%d bloggers like this: