ಯಶಸ್ವಿ 500 ಸಂಚಿಕೆಗಳನ್ನು ಪೂರೈಸಿದ ಕನ್ನಡದ ಮತ್ತೊಂದು ಸುಪ್ರಸಿದ್ಧ ಧಾರಾವಾಹಿ

ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿಯಾದ ಕಲರ್ಸ್ ಕನ್ನಡ ಸದ್ಯದ ಮಟ್ಟಿಗೆ ಕನ್ನಡಿಗರ ನೆಚ್ಚಿನ ವಾಹಿನಿಯಾಗಿ ಅಪಾರ ಮೆಚ್ಚುಗೆ ಪಡೆದುಕೊಂಡಿದೆ. ಯಾವುದೇ ಒಂದು ವಾಹಿನಿಯು ಯಶಸ್ವಿಯಾಗಬೇಕಾದರೆ ಅದಕ್ಕೆ ಪ್ರಮುಖವಾಗಿ ಆ ವಾಹಿನಿಯಲ್ಲಿ ಬರುವ ಕಾರ್ಯಕ್ರಮಗಳು ಪ್ರಮುಖ ಪಾತ್ರವಹಿಸುತ್ತದೆ. ಅದರಂತೆ ಉತ್ತಮ ಕಥಾಹಂದರ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳ ಮೂಲಕ ಕಲರ್ಸ್ ಕನ್ನಡ ವಾಹಿನಿಯು ಅತಿ ಹೆಚ್ಚು ವೀಕ್ಷಕ ವರ್ಗವನ್ನು ಹೊಂದಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅನೇಕ ಧಾರಾವಾಹಿಗಳು ನೂರು ಇನ್ನೂರು ಐನೂರು ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಸಾಗುತ್ತಿವೆ. ಇತ್ತೀಚೆಗೆ ಕನ್ನಡತಿ ಧಾರಾವಾಹಿ ಯಶಸ್ವಿಯಾಗಿ ಐನೂರು ಸಂಚಿಕೆಗಳನ್ನು ಪೂರೈಸಿಕೊಂಡು ಸಂಭ್ರಮ ಪಟ್ಟಿತ್ತು.

ಅದರಂತೆ ಇದೀಗ ಮತ್ತೊಂದು ಜನಪ್ರಿಯ ಧಾರಾವಾಹಿಯಾದ ಗೀತಾ ಧಾರಾವಾಹಿ ಕೂಡ ಯಶಸ್ವಿಯಾಗಿ ಐನೂರು ಸಂಚಿಕೆಗಳನ್ನ ಪೂರೈಸಿದೆ. ಸದ್ಯದ ಮಟ್ಟಿಗೆ ಕನ್ನಡ ಕಿರುತೆರೆಯ ಯಶಸ್ವಿ ಧಾರಾವಾಹಿಗಳ ನಿರ್ದೇಶಕ ನಿರ್ಮಾಪಕರಾಗಿರುವ ಕೆ.ಎಸ್.ರಾಮ್ ಜಿ ಅವರ ಎಲ್ಲಾ ಧಾರಾವಾಹಿಗಳು ಕೂಡ ಅತ್ಯುತ್ತಮವಾಗಿ ಸಾಗುತ್ತಿವೆ. ಗೀತಾ ಧಾರಾವಾಹಿಯು ಮಧ್ಯಮ ವರ್ಗದ ಹುಡುಗಿ ಗೀತಾ ಮತ್ತು ಪೊಲಿಟಿಕಲ್ ಬ್ಯಾಗ್ರೌಂಡ್ ಹೊಂದಿರುವ ವಿಜಯ್ ಇವರಿಬ್ಬರ ನಡುವೆ ಏರ್ಪಡುವ ಜಗಳ ದ್ವೇಷದಿಂದಾನೆ ಪ್ರೀತಿ ಪ್ರೇಮವಾಗಿ ಮದುವೆಯೂ ಆಗಿ ತದ ನಂತರದಲ್ಲಿ ಇವರಿಬ್ಬರ ಬದುಕು ಹೇಗೆ ಸಾಗುತ್ತದೆ ಎಂಬ ಕಥಾ ಹಂದರ ಹೊತ್ತುಕೊಂಡು ಅಲ್ಲಲ್ಲಿ ಒಂದಷ್ಟು ರೋಚಕತೆಗಳನ್ನು ಸೃಷ್ಟಿಸಿಕೊಂಡು ಕಿರುತೆರೆ ವೀಕ್ಷಕರನ್ನ ರಂಜಿಸುತ್ತಿದೆ.

ಗಗನ ಎಂಟರ್ ಪ್ರೈಸಸ್ ಸಂಸ್ಥೆಯಡಿಯಲ್ಲಿ ವಿಮಲಾ ಅವರು ನಿರ್ಮಿಸಿರುವ ಈ ಗೀತಾ ಧಾರಾವಾಹಿಯು ಕಳೆದ 2020ರ ಜನವರಿಯಲ್ಲಿ ಆರಂಭಗೊಂಡಿತ್ತು. ಗೀತಾ ಪಾತ್ರಧಾರಿಯಾಗಿ ಭವ್ಯಾ ಗೌಡ, ವಿಜಯ್ ಪಾತ್ರದಲ್ಲಿ ಧನುಷ್ ಗೌಡ ನಟಿಸಿದ್ದು, ಇನ್ನಿತರ ಪೋಷಕ ಪಾತ್ರಗಳಲ್ಲಿ ಶರ್ಮಿತಾ ಗೌಡ, ನಿಸರ್ಗ ಗೌಡ ನಟಿಸಿದ್ದಾರೆ. ಕಳೆದೊಂದು ವರ್ಷದಿಂದ ಈ ಗೀತಾ ಧಾರಾವಾಹಿಯು ಯುವ ಮನಸ್ಸುಗಳನ್ನ ಕೂಡ ತನ್ನತ್ತ ಸೆಳೆದಿರುವುದು ವಿಶೇಷ ಎನ್ನಬಹುದು. ಒಟ್ಟಾರೆಯಾಗಿ ಗೀತಾ ಧಾರಾವಾಹಿಯು ಇದೀಗ ಯಶಸ್ವಿಯಾಗಿ ಐನೂರು ಸಂಚಿಕೆಗಳನ್ನು ಪೂರೈಸಿಕೊಂಡು ಸಂಭ್ರಮಾಚರಣೆ ಮಾಡಿದೆ.

%d bloggers like this: