ಯಶಸ್ವಿ ಐವತ್ತು ದಿನಗಳನ್ನು ಪೂರೈಸಿದ ಕನ್ನಡದ ಸುಪ್ರಸಿದ್ಧ ಧಾರಾವಾಹಿ

ಯಾವುದೇ ಹೊಸ ಧಾರಾವಾಹಿ ಆರಂಭವಾದಾಗ ಅದರ ಬಗ್ಗೆ ವೀಕ್ಷಕರು ಆಸಕ್ತಿ ತೋರಿಸುವುದು ಸಹಜ. ಧಾರಾವಾಹಿ ಶುರುವಾದಾಗ ಎಲ್ಲರೂ ಕುತೂಹಲದಿಂದ ವೀಕ್ಷಿಸುತ್ತಾರೆ. ಆದರೆ ಆ ಕುತೂಹಲವನ್ನು ಮುಂದುವರಿಸಿದೊಂಡು ಹೋಗುವಲ್ಲಿ ಕೆಲವು ಸೀರಿಯಲ್ ಗಳು ಮಾತ್ರ ಸಕ್ಸಸ್ ಆಗುತ್ತವೆ. ಅದೇ ರೀತಿ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ನ್ನು ಜನ ಮೆಚ್ಚಿಕೊಂಡಿದ್ದಾರೆ. ಗಂಡು ಮಗು ಹುಟ್ಟಿಲ್ಲವೆಂಬ ಕಾರಣಕ್ಕಾಗಿ ಹೆಂಡತಿಯನ್ನು ತ್ಯಜಿಸಿ ಗಂಡ ಮತ್ತೊಂದು ವಿವಾಹವಾದರೂ, ಪುಟ್ಟಕ್ಕ ಯಾವ ರೀತಿ ತಾನೇ ತನ್ನ ಬದುಕು ಕಟ್ಟಿಕೊಂಡು ಸ್ವಾಭಿಮಾನದಿಂದ ಬದುಕುತ್ತಾಳೆ ಎಂಬುದು ಈ ಧಾರಾವಾಹಿಯ ಕಥೆ.

ಆ ಹೆಣ್ಣುಮಕ್ಕಳ ಧೈರ್ಯ, ಸ್ವಾಭಿಮಾನವನ್ನು ಅಚ್ಚುಕಟ್ಟಾಗಿ ತೋರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿರುವ ಹಿರಿಯ ನಟಿ ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರ ನಿರ್ವಹಿಸುತ್ತಿದ್ದಾರೆ. ಇನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಉಮಾಶ್ರೀಯವರ ಜೊತೆಗೆ ಮಂಜುಭಾಷಿಣಿ, ರಮೇಶ್ ಪಂಡಿತ್, ಕಾರ್ತಿಕ್ ಮಹೇಶ್, ಹಂಸ, ಸಾರಿಕಾ ರಾಜ್, ರೇಣುಕಾ ಹೀಗೆ ದೊಡ್ಡ ತಾರಾಗಣವಿದೆ. ಅಲ್ಲದೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಮತ್ತು ಗಜೇಂದ್ರ ಅವರು ಈ ಸೀರಿಯಲ್ ನಲ್ಲಿದ್ದಾರೆ. ಈ ಧಾರಾವಾಹಿಯನ್ನು ಜಿಎಸ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಪ್ರದೀಪ್ ಅಜ್ರಿ ಮತ್ತು ಪರೀಕ್ಷಿತ್ ಎಂಎಸ್ ನಿರ್ಮಾಪಕರು.

ಇನ್ನು ಧಾರಾವಾಹಿಯ ಶೀರ್ಷಿಕೆ ಗೀತೆ ಕೂಡ ಫೇಮಸ್ ಆಗಿದ್ದು, ಹರಿಪ್ರಿಯಾ ಅವರ ಸಾಹಿತ್ಯಕ್ಕೆ ಪೂರ್ಣಚಂದ್ರ ತೇಜಸ್ವಿ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಪಂಚಮಜೀವ ದ್ವನಿ ನೀಡಿದ್ದು, ಸತ್ಯಕಿ ಅವರು ಚಿತ್ರಕತೆ ಮತ್ತು ಸಂಭಾಷಣೆ ನೀಡಿದ್ದಾರೆ. ಇನ್ನು ಈ ಧಾರಾವಾಹಿಯ ಮತ್ತೊಂದು ವಿಶೇಷವೆಂದರೆ ಟಿ.ಆರ್.ಪಿ ಹೌದು ಈ ಸೀರಿಯಲ್ನ ಟಿಆರ್ಪಿ ಕಂಡು ಎಲ್ಲರೂ ಅಚ್ಚರಿಪಟ್ಟಿದ್ದಾರೆ. ಆರಂಭದಿಂದ ಇಲ್ಲಿಯವರೆಗೆ ಬರೋಬ್ಬರಿ 11 ಟಿವಿಆರ್ ಪಡೆದುಕೊಂಡಿರುವುದು ಈ ಧಾರಾವಾಹಿಯ ಗೆಲುವು ಎಂದೇ ಹೇಳಬಹುದು. ಆರೂರು ಜಗದೀಶ್ ಅವರು ಕೈ ಇಟ್ಟ ಎಲ್ಲಾ ಸೀರಿಯಲ್ ಗಳು ಸೂಪರ್ ಹಿಟ್ ಆಗುತ್ತವೆ ಎನ್ನುವುದನ್ನು ಈ ಧಾರವಾಹಿ ಪ್ರೂ ಮಾಡಿದೆ.

ಸಾಕಷ್ಟು ಅಡೆತಡೆಗಳ ನಡುವೆಯೂ ಧಾರವಾಹಿಯ ಶೂಟಿಂಗ್ ಶುರುವಾಗಿದೆ. ಈ ತಂಡದ ಪ್ಲಸ್ ಪಾಯಿಂಟ್ ಎಂದರೆ ನಟಿ ಉಮಾಶ್ರೀ ಅವರು. ಉಮಾಶ್ರೀ ಅವರಿಗಾಗಿಯೇ ಎಷ್ಟೋ ಜನ ಸೀರಿಯಲ್ ನೋಡುತ್ತಾರೆ. ಇನ್ನೂ ಈ ಧಾರಾವಾಹಿಯ ಪ್ರತಿಯೊಬ್ಬ ಕಲಾವಿದರೂ ತಮಗೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ನಟನೆಯ ಹಿಂದಿರುವ ಇವರ ಶ್ರಮ ತೆರೆಯಮೇಲೆ ಕಾಣಸಿಗುತ್ತದೆ. ನೋಡನೋಡುತ್ತಿದ್ದಂತೆಯೇ ಪುಟ್ಟಕ್ಕನ ಮಕ್ಕಳು ಧಾರಾವಾಹಿ 50 ಸಂಚಿಕೆಗಳನ್ನು ಪೂರೈಸಿ ತನ್ನ ಜಯದ ನಾಗಾಲೋಟವನ್ನು ಮುಂದುವರೆಸಿದೆ. ಆದಷ್ಟು ಬೇಗ ಸಾವಿರಾರು ಸಂಚಿಕೆಗಳನ್ನು ನೀಡಿ ಪುಟ್ಟಕ್ಕನ ಮಕ್ಕಳು ತಂಡ ನಮ್ಮೆಲ್ಲರನ್ನು ಮನರಂಜಿಸಲಿ ಎಂಬುದು ನಮ್ಮೆಲ್ಲರ ಆಶಯ.

%d bloggers like this: