ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಹೊಸದೊಂದು ಪರ್ವ ಆರಂಭವಾಗಿದೆ. ಅದೇನಪ್ಪಾ ಅಂದರೆ ಕನ್ನಡದ ಕಿರುತೆರೆಯ ಧಾರಾವಾಹಿಗಳಲ್ಲಿ ಹೊಸತನ ಕಾಣಬಹುದಾಗಿದೆ. ಅದು ಮೇಕಿಂಗ್, ಸಾಹಿತ್ಯ, ಹಿನ್ನೆಲೆ ಸಂಗೀತ, ಕಾಸ್ಟ್ಯೂಮ್ಸ್, ಪಾತ್ರ ಪೋಷಣೆ ಹೀಗೆ ಎಲ್ಲದರಲ್ಲೂ ಕೂಡ ವಿಭಿನ್ನತೆಯನ್ನ ಅಳವಡಿಸಿಕೊಂಡು ವೀಕ್ಷಕರಿಗೆ ಕಣ್ಮನ ತಣಿಸುವ ಮನಕ್ಕೆ ಹಿತವೆನಿಸುವ ಹಾಗೇ ಮನರಂಜನೆ ನೀಡುತ್ತಿದೆ. ಕಳೆದೆರಡು ವರ್ಷಗಳೀಂದಿಚೆಗೆ ಡಬ್ಬಿಂಗ್ ಭೂತ ಸಿನಿಮಾ ಮತ್ತು ಕಿರುತೆರೆ ಧಾರಾವಾಹಿಗೆ ಬೆನ್ನಂಟಿದೆ. ಇದರಿಂದ ಕನ್ನಡ ಧಾರಾವಾಹಿಗಳಿಗೆ ನೇರವಾಗಿ ಹೊಡೆತ ಕೂಡ ಬಿದ್ದಿದೆ. ಇಂತಹ ಸ್ಪರ್ಧಾತ್ಮಕ ಸನ್ನಿವೇಶಗಳಲ್ಲಿ ಕೂಡ ನಮ್ಮ ಕನ್ನಡ ಧಾರಾವಾಹಿಗಳು ಉತ್ತಮ ಗುಣಮಟ್ಟದಲ್ಲೇ ತಯಾರಾಗಿ ಜನರ ಮನ ಗೆದ್ದಿವೆ.
ಒಂದಕ್ಕಿಂತ ಒಂದು ಪೈಪೋಟಿಯಂತೆ ನೂರು ಇನ್ನೂರು ಸಂಚಿಕೆಗಳನ್ನು ಪೂರೈಸಿ ಸಂಭ್ರಮಾಚರಣೆ ಮಾಡುತ್ತಿವೆ. ಅಂತಹ ಧಾರಾವಾಹಿಗಳ ಪಟ್ಟಿಗೆ ಇದೀಗ ಹಿಟ್ಲರ್ ಕಲ್ಯಾಣ ಧಾರಾವಾಹಿ ಸಹ ಸೇರ್ಪಡೆಗೊಳ್ಳುತ್ತಿದೆ. ಕಿರುತೆರೆಯ ಪ್ರಸಿದ್ದ ವಾಹಿನಿಯಾದ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಹಿಟ್ಲರ್ ಕಲ್ಯಾಣ ಧಾರಾವಾಹಿಗೆ ಇದೀಗ ಇನ್ನೂರು ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿರುವ ಸಂಭ್ರಮ. ಈ ಸಂತೋಷವನ್ನು ಇಡೀ ಹಿಟ್ಲರ್ ಕಲ್ಯಾಣ ಧಾರಾವಾಹಿ ತಂಡ ಆಚರಿಸಿದೆ. ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಟ ದಿಲೀಪ್ ರಾಜ್ ಅವರು ಪ್ರಮುಖ ಎಜೆ ಪಾತ್ರದಲ್ಲಿ ತುಂಬ ಅದ್ಬುತವಾಗಿ ನಟಿಸುತ್ತಿದ್ದಾರೆ. ಇವರ ಪಾತ್ರ ಪರಕಾಯ ಪ್ರವೇಶಕ್ಕೆ ಕಿರುತೆರೆ ವೀಕ್ಷಕರು ಫಿದಾ ಆಗಿದ್ದಾರೆ.
ಅದು ಯಾವ ಮಟ್ಟಿಗೆ ಅಂದರೆ ಲೈಫ್ ಲೀಡ್ ಮಾಡಿದ್ರೆ ಎಜೆ ಅವರ ರೀತಿ ಇರ್ಬೇಕು ಅಂತ ಬಹುತೇಕ ಯುವಕರಿಗೆ ಸ್ಪೂರ್ತಿ ಆಗಬೇಕು ಅಷ್ಟರ ಮಟ್ಟಿಗೆ ಪ್ರಭಾವ ಬೀರಿದ್ದಾರೆ. ಕಥಾನಾಯಕಿ ಲೀಲಾ ಪಾತ್ರಕ್ಕೆ ನಟಿ ಮಲೈಕಾ ವಸುಪಾಲ್ ಅವರು ಜೀವ ತುಂಬಿ ನಟಿಸುತ್ತಿದ್ದಾರೆ. ಉದ್ಯಮಿ ಎಜೆ ಅವರನ್ನ ಆರಂಭದಲ್ಲಿ ದ್ವೇಷ ಮಾಡುತ್ತಿದ್ದ ಇದೇ ಲೀಲಾ ಇದೀಗ ಅವರ ಬಾಳ ಸಂಗಾತಿಯಾಗಿ ಎಜೆ ಬದುಕಿನಲ್ಲಿ ಹೊಸದೊಂದು ತಿರುವು ತಂದಿದ್ದಾರೆ. ಇವರಿಬ್ಬರ ದಾಂಪತ್ಯ ಜೀವನದಲ್ಲಿ ಸುತ್ತಲು ಇರುವ ಒಂದಷ್ಟು ಸಂಬಂಧದ ಪಾತ್ರಗಳು ಇವರಿಬ್ಬರ ಅನ್ಯುನ್ಯತೆ ಕಂಡು ಕರುಬುವ ಮೂವರು ಸೊಸೆಯರು.
ಇವರ ನಡುವೆ ಲೀಲಾ ಎಜೆ ಕುಟುಂಬದ ನಂದಾದೀಪವಾಗಿ ಎಜೆ ಬಾಳಲ್ಲಿ ಹೆಜ್ಜೆ ಇಟ್ಟಿದ್ದಾರೆ. ನಟಿ ಆಗಬೇಕು ಅಂತ ಕನಸು ಹೊಂದಿದ್ದ ಲೀಲಾಳಿಗೆ ಜೀವನದ ಕೆಲವು ಅನಿವಾರ್ಯ ಪರಿಸ್ಥಿತಿಗಳಿಂದ ಎ.ಜೆ ಅವರ ಪತ್ನಿಯಾಗಿ ಮಾಡಿದೆ. ಈ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಬರುವ ಕೌಟುಂಬಿಕ ಸಮಸ್ಯೆ ತಮ್ಮ ಮನೆಯ ಸಮಸ್ಯೆ ಆಗಿದೇನೋ ಎಂಬಷ್ಟರ ಮಟ್ಟಿಗೆ ವೀಕ್ಷಕರು ಸ್ಪಂದಿಸುತ್ತಿದ್ದಾರೆ. ಅಷ್ಟರ ಮಟ್ಟಿಗೆ ನಾಡಿನ ಮನೆ ಮನೆಗಳಲ್ಲಿ ಹಿಟ್ಲರ್ ಕಲ್ಯಾಣ ಧಾರಾವಾಹಿ ಅಪಾರ ಜನಪ್ರಿಯತೆ ಪಡೆದುಕೊಂಡಿದೆ. ಇದೀಗ ಈ ಜನಪ್ರಿಯ ಹಿಟ್ಲರ್ ಕಲ್ಯಾಣ ಧಾರಾವಾಹಿಗೆ ಇನ್ನೂರು ಸಂಚಿಕೆಯ ಸಂಭ್ರಮ ಆದ ಕಾರಣ ಇಡೀ ಈ ಧಾರಾವಾಹಿ ತಂಡಕ್ಕೆ ಮತ್ತಷ್ಟು ಹುರುಪು ತಂದಿದೆ. ನಟ ದಿಲೀಪ್ ರಾಜ್ ಅವರೇ ಈ ಹಿಟ್ಲರ್ ಕಲ್ಯಾಣ ಧಾರಾವಾಹಿಯನ್ನ ನಿರ್ಮಾಣ ಮಾಡಿದ್ದಾರೆ.